ETV Bharat / bharat

ಕಟ್ಟಡದ ಛಾವಣಿ ಕುಸಿತ.. ಇಬ್ಬರ ಸಾವು ಇಬ್ಬರಿಗೆ ಗಂಭೀರ ಗಾಯ

author img

By

Published : Oct 3, 2022, 9:28 PM IST

ಹಳೇ ಕಟ್ಟಡದ ಗೋಡೆ ಹಾಗೂ ಛಾವಣಿ ಕೆಡವುತ್ತಿದ್ದ ವೇಳೆ ಗೋಡೆ ಕಾರ್ಮಿಕರ ಮೇಲೆ ಬಿದ್ದಿದೆ. ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

gurugram-building-collapsed-while-being-demolished
ಕಟ್ಟಡದ ಮೇಲ್ಛಾವಣಿ ಕುಸಿತ.. ಇಬ್ಬರು ಸಾವು ಇಬ್ಬರಿಗೆ ಗಂಭೀರ ಗಾಯ

ಗುರುಗ್ರಾಮ: ಹರ್ಯಾಣದ ಗುರುಗ್ರಾಮದ ಉದ್ಯೋಗ್ ವಿಹಾರ್ ಹಂತ 1 ರಲ್ಲಿ ಸೋಮವಾರ ಕಟ್ಟಡವೊಂದರ ಭಾಗವನ್ನು ನೆಲಸಮ ಮಾಡುವ ವೇಳೆ ಕುಸಿದು ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

  • Gurugram, Haryana | Building collapse in Udyog Vihar Phase I

    As per preliminary information, 2-3 laborers are feared trapped after a building that was being demolished, collapsed. Rescue operation on. One labourer already rescued: Lalit Kumar, Fire Officer pic.twitter.com/gTwu5lf6Cu

    — ANI (@ANI) October 3, 2022 " class="align-text-top noRightClick twitterSection" data=" ">

ಸ್ಥಳಕ್ಕೆ ಗುರುಗ್ರಾಮ ಜಿಲ್ಲಾಧಿಕಾರಿ ನಿಶಾಂತ್ ಕುಮಾರ್ ಧಾವಿಸಿದ್ದು, ಸೆ.26ರಿಂದ ಕೆಡವಲಾಗುತ್ತಿದ್ದ ಹಳೆ ಕಟ್ಟಡದ ಗೋಡೆ ಹಾಗೂ ಮೇಲ್ಛಾವಣಿ ಕೆಡವುತ್ತಿದ್ದ ವೇಳೆ ಗೋಡೆ ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯ ನಿವಾಸಿಗಳಾದ ನಾಲ್ವರು ಕಾರ್ಮಿಕರ ಮೇಲೆ ಬಿದ್ದಿದೆ. ಇದು ಮೂರು ಅಂತಸ್ತಿನ ಎತ್ತರದ ಕಟ್ಟಡವಾಗಿದ್ದು, ಅದರಲ್ಲಿ ಎರಡು ಮಹಡಿಗಳನ್ನು ಕೆಡವಲಾಗಿತ್ತು. ಉಳಿದ ಭಾಗ ಕಾರ್ಮಿಕರ ಮೇಲೆ ಕುಸಿದಿದೆ ಎಂದು ಹೇಳಿದರು.

ಅಗ್ನಿಶಾಮಕ ಇಲಾಖೆ, ಗುರುಗ್ರಾಮ್ ಪೊಲೀಸ್, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಮತ್ತು ಸಿವಿಲ್ ಕೂಡ ಸ್ಥಳಕ್ಕೆ ಆಗಮಿಸಿ ಸಿಕ್ಕಿಬಿದ್ದ ಕಾರ್ಮಿಕರನ್ನು ರಕ್ಷಿಸಿದ್ದಾರೆ. ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ತನಿಖೆಗಾಗಿ ತನಿಖಾ ಸಮಿತಿಯನ್ನು ರಚಿಸಲಾಗಿದೆ ಎಂದರು.

ಇದನ್ನೂ ಓದಿ: ರೊಟ್ಟಿ ಮಾಡುವಾಗ ಮನೆಗೋಡೆ ಕುಸಿತ: ಅವಶೇಷಗಳಡಿ ಸಿಲುಕಿದ್ದ ಮಹಿಳೆಯ ರಕ್ಷಣೆ.. ವಿಡಿಯೋ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.