ETV Bharat / bharat

ಕಟ್ಟಡ ಕಾಮಗಾರಿ ವೇಳೆ ದುರಂತ: ಟವರ್ ಕ್ರೇನ್‌ನಿಂದ ಬಿದ್ದು ನಾಲ್ವರು ಕಾರ್ಮಿಕರು ಸಾವು, ಒಬ್ಬ ಗಂಭೀರ - Four workers died

ಟವರ್ ಕ್ರೇನ್ ಅಳವಡಿಸುವಾಗ ಜಾರಿ ಬಿದ್ದು, ನಾಲ್ವರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಗುರುಗ್ರಾಮ್‌ನ ಸೆಕ್ಟರ್ -77 ರಲ್ಲಿ ನಡೆದಿದೆ.

ಕಟ್ಟಡ ಕಾಮಗಾರಿ ವೇಳೆ ದುರಂತ
Gurugram
author img

By

Published : Aug 3, 2022, 7:16 AM IST

ಗುರುಗ್ರಾಮ್: ಕಟ್ಟದ ಕಾಮಗಾರಿ ವೇಳೆ 17 ನೇ ಮಹಡಿಗೆ ಟವರ್ ಕ್ರೇನ್ ಅಳವಡಿಸುವಾಗ ಅಪಘಾತ ಸಂಭವಿಸಿ ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದು, ಓರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುರುಗ್ರಾಮ್‌ನ ಸೆಕ್ಟರ್ -77 ರಲ್ಲಿ ನಡೆದಿದೆ.

ಮಂಗಳವಾರ ಸಂಜೆ 5 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಸೆಕ್ಟರ್-77 ರಲ್ಲಿ ಎಮಾರ್ ಪ್ಲಾಮ್ ಹಿಲ್ಸ್‌ನ ನಿರ್ಮಾಣ ಹಂತದ ವಸತಿ ಕಟ್ಟಡದಲ್ಲಿ ದುರಂತ ಸಂಭವಿಸಿದೆ. ಮೃತರೆಲ್ಲರೂ ಬಿಹಾರ ಮೂಲದವರು ಎಂದು ಪೊಲೀಸರು ತಿಳಿಸಿದ್ದಾರೆ.

17 ನೇ ಮಹಡಿಗೆ ನಿರ್ಮಾಣ ಸಾಮಗ್ರಿಗಳನ್ನು ಸಾಗಿಸಲು ಬಳಸಿದ ಟವರ್ ಕ್ರೇನ್ ಸರಿಪಡಿಸಿದ ನಂತರ ಅಪಘಾತ ಸಂಭವಿಸಿದೆ. ಕ್ರೇನ್ ಸರಿಪಡಿಸಿದ ನಂತರ ಕಾರ್ಮಿಕರು ಜಾರಿ 12 ನೇ ಮಹಡಿ ಮೇಲೆ ಬಿದ್ದಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವ ಒಬ್ಬರ ಸ್ಥಿತಿ ಕೂಡ ಚಿಂತಾಜನಕವಾಗಿದೆ. ಕಾನೂನಿನ ಪ್ರಕಾರ ಸಂಬಂಧಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು ಎಂದು ಮನೇಸರ್ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಸುರೇಶ್ ಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ: ಸಿದ್ದರಾಮೋತ್ಸವಕ್ಕೆ ತೆರಳುತ್ತಿದ್ದ ವಾಹನ ಅಪಘಾತ: ಒಬ್ಬನ ಸಾವು, 12 ಮಂದಿಗೆ ಗಾಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.