ಗುಂಟೂರು(ಹೈದರಾಬಾದ್): ಪ್ರೀತಿಗೆ ಕಣ್ಣಿಲ್ಲ, ಬಣ್ಣ ಇಲ್ಲ, ಯಾವುದೇ ಧರ್ಮದ ಹಂಗಿಲ್ಲ. ಆದರೆ, ಕೆಲವೊಮ್ಮೆ ದೇಶ - ದೇಶಗಳ ನಡುವಿನ ಗಡಿಯ ಹಂಗೂ ಈ ಕುರುಡು ಪ್ರೀತಿಗೆ ಇರುವುದಿಲ್ಲ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಆಂಧ್ರ ಪ್ರದೇಶದ ಗುಂಟೂರಿನ ಮಧು ಸಂಕೀರ್ತ್ ಹಾಗೂ ಟರ್ಕಿಯ ಯುವತಿ ಮದುವೆ.
ಪ್ರಾಜೆಕ್ಟ್‌ವೊಂದರ ಮೇಲೆ ದೂರದ ಟರ್ಕಿಯಿಂದ ಭಾರತಕ್ಕೆ ಬಂದಿದ್ದ ಗಿಜೆಮ್ ಎಂಬ ಯುವತಿಗೆ ಗುಂಟೂರಿನ ಮಧು ಸಂಕೀರ್ತ್‌ರೊಂದಿಗೆ ಪ್ರೇಮಾಂಕುರವಾಗಿದೆ. ಆ ಪ್ರೇಮ ಇದೀಗ ವಿವಾಹದ ಬಂಧಕ್ಕೆ ಕಾಲಿಡುವಂತೆ ಮಾಡಿದೆ. ಭಾರತದ ಆಚಾರ ವಿಚಾರಗಳು ಹಾಗೂ ಸಂಪ್ರದಾಯಕ್ಕೆ ಮನಸೋತಿರುವ ಗಿಜೆಮ್ ಎರಡೂ ಕುಟುಂಬದವರನ್ನು ಒಪ್ಪಿಸಿ ಹಿಂದೂ ಸಂಪ್ರದಾಯದಂತೆ ಗುಂಟೂರಿನಲ್ಲಿ ಮಧು ಸಂಕೀರ್ತ್ ಅವರನ್ನು ವರಿಸಿದ್ದಾಳೆ. ಇದಕ್ಕೂ ಮುನ್ನ ಅವರು ಟರ್ಕಿ ಸಂಪ್ರದಾಯದಂತೆ ವಿವಾಹವಾಗಿದ್ದರು.
ಪ್ರೇಮಾಂಕುರವಾಗಿದ್ದು ಹೀಗೆ!
ಟರ್ಕಿಯ ಗಿಜೆಮ್ 2016 ರಲ್ಲಿ ಪಾಜೆಕ್ಟ್ ಕೆಲಸ ಮೇಲೆ ಭಾರತಕ್ಕೆ ಬಂದಿದ್ದರು. ಆಗ ಮಧು ಸಂಕೀರ್ತ್ ಪರಿಚಯವಾಗುತ್ತೆ. ಅದೇ ವರ್ಷ ಸಂಕೀರ್ತ್ ಉದ್ಯೋಗಕ್ಕಾಗಿ ಟರ್ಕಿಗೆ ಹೋದರು. ಗಿಜೆಮ್ ತನ್ನ ಸಹೋದ್ಯೋಗಿಯ ಸ್ನೇಹಿತನಾಗಿದ್ದರಿಂದ ಮತ್ತೆ ಭೇಟಿಯಾಗುವ ಅವಕಾಶ ಸಿಕ್ಕಿತ್ತು. ಇದರೊಂದಿಗೆ ಅವರಿಬ್ಬರ ಹಳೆಯ ಪರಿಚಯ ಸ್ವಲ್ಪಮಟ್ಟಿಗೆ ಪ್ರೀತಿಗೆ ತಿರುಗಿದೆ.
ಮೊದಲು ಇವರಿಬ್ಬರ ಮದುವೆಯ ವಿಷಯವನ್ನು ಮಧು ತಂದೆ ದಮ್ಮತಿ ವೆಂಕಟೇಶ್ವರ್ ಒಪ್ಪಿರಲಿಲ್ಲ. ಯುವತಿ ಕಡೆಯ ಪರಿಸ್ಥಿತಿಯೂ ಇದೇ ಆಗಿತ್ತು. ಆದರೂ ಪ್ರೀತಿ ಹಾಗೂ ಮದುವೆ ತಮ್ಮ ಮಕ್ಕಳ ಮನಸಿಗೆ ಸಂಬಂಧಿಸಿದ್ದು, ನಾವೇಕೆ ಅಡ್ಡಿ ಪಡಿಸಬೇಕೆಂಬ ನಿರ್ಧಾರಕ್ಕೆ ಬಂದಿದ್ದಾರೆ.
2019ರಲ್ಲಿ ಗುಂಟೂರಿನಲ್ಲಿ ಇಬ್ಬರ ನಿಶ್ಚಿತಾರ್ಥವಾಗಿತ್ತು. 2020ರಲ್ಲಿ ಮದುವೆಯಾಗಲು ಬಯಸಿದ್ದರು. ಆದರೆ, ಆಗ ಕೊರೊನಾ ಅಡ್ಡಿಯಾಗಿದೆ. ಎರಡೂ ಕುಟುಂಬಗಳು ತಮ್ಮ ಸಂಪ್ರದಾಯಗಳ ಪ್ರಕಾರ ಈ ವರ್ಷದ ಜುಲೈನಲ್ಲಿ ಟರ್ಕಿಯಲ್ಲಿ ವಿವಾಹ ಆಗಿದ್ದಾರೆ.
ಕೋವಿಡ್ ನಿರ್ಬಂಧಗಳನ್ನು ಸಡಿಲಿಸಿದ ನಂತರ ಇತ್ತೀಚೆಗೆ ಭಾರತಕ್ಕೆ ಬಂದಿದ್ದಾರೆ. ಈಗ ಹಿಂದೂ ಸಂಪ್ರದಾಯದ ರೀತಿಯಲ್ಲಿ ಮದುವೆ ಆಗಿದ್ದಾರೆ. ಮನಸ್ಸಿಗೆ ಅರ್ಥವಾಗುವುದಷ್ಟೇ ಅಲ್ಲ ಸಂಪ್ರದಾಯಗಳನ್ನೂ ಗೌರವಿಸಬೇಕು ಎಂಬ ಆಸೆಯಿಂದ ಎರಡೆರಡು ಮದುವೆ ಮಾಡಿಕೊಂಡಿದ್ದೇವೆ ಎನ್ನುತ್ತಿದ್ದಾರೆ ಈ ಜೋಡಿ.
ಮಧು ಸಂಕೀರ್ತ್ ಕೆಲಸದ ನಿಮಿತ್ತ ಆಸ್ಟ್ರಿಯಾಕ್ಕೆ ತೆರಳಬೇಕಾಗಿತ್ತು. ಗಿಜೆಮ್ ಕೂಡ ಪತ್ನಿ ಹಿಂಬಾಲಿಸಿದ್ದಾಳೆ. ಕೆಲವು ವರ್ಷಗಳ ಕಾಲ ಅಲ್ಲಿ ಕೆಲಸ ಮಾಡಿದ ನಂತರ ಭಾರತಕ್ಕೆ ಬರುವ ಭರವಸೆ ಇದೆ ಎಂದು ಸಂಕೀರ್ತ್ ಮತ್ತು ಗಿಜೆಮ್ ಹೇಳುತ್ತಾರೆ. ಸಂಕೀರ್ತ್ ತಂದೆ ದಮ್ಮತಿ ವೆಂಕಟೇಶ್ವರ್ ಕೃಷಿ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿದ್ದವರು. ತಾಯಿ ಗೌರಿಶಂಕರಿ ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇಚ್ಛಿಸಿದ ಹುಡುಗಿಯನ್ನು ಮದುವೆಯಾಗಿ ಮಗ ಖುಷಿಯಾಗಿದ್ದಾನೆ ಎಂದು ಸಂತಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಆಂಧ್ರಪ್ರದೇಶದಲ್ಲೂ ಪವರ್ ಸ್ಟಾರ್ ಪುನೀತ್ ಹವಾ.. ನಿರ್ಮಾಣವಾಗುತ್ತಿವೆ ಕಂಚಿನ ಪ್ರತಿಮೆಗಳು!