ಭೋಪಾಲ್ (ಮಧ್ಯಪ್ರದೇಶ): ಬಹು ನಿರೀಕ್ಷಿತ ವೆಬ್ ಸೀರಿಸ್ 'ದಿ ರೈಲ್ವೆ ಮೆನ್' ಇತ್ತೀಚೆಗಷ್ಟೇ ಪ್ರಸಾರ ಪ್ರಾರಂಭಿಸಿದೆ. 1984ರ ಭೋಪಾಲ್ ಅನಿಲ ದುರಂತದ ಕಠಿಣ ಸಂದರ್ಭ ರೈಲ್ವೆ ಅಧಿಕಾರಿಗಳ ಶ್ರಮದ ಕಥೆಯನ್ನು ಈ ಸರಣಿ ಆಧರಿಸಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.
'ದಿ ರೈಲ್ವೆ ಮೆನ್' ಅನ್ನು ಯಶ್ ರಾಜ್ ಫಿಲ್ಮ್ಸ್ ನಿರ್ಮಾಣ ಮಾಡಿದೆ. ಇತ್ತೀಚೆಗೆ ಸೀರಿಸ್ ಪ್ರಸಾರವನ್ನೂ ಪ್ರಾರಂಭಿಸಿದೆ. ಆದರೀಗ ರೈಲ್ವೆ ಅಧಿಕಾರಿಯೊಬ್ಬರ ಪುತ್ರ, ತಮ್ಮ ತಂದೆಯ ಪ್ರಯತ್ನಗಳನ್ನು ನಿರ್ಲಕ್ಷಿಸಿರುವುದಾಗಿ ನಿರ್ಮಾಣ ಸಂಸ್ಥೆ ಯಶ್ ರಾಜ್ ಫಿಲ್ಮ್ಸ್ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.
ಈಟಿವಿ ಭಾರತ್ ಜೊತೆ ಶಾದಾಬ್ ದಸ್ತಗಿರ್ ವಿಶೇಷ ಸಂವಾದ ನಡೆಸಿದ್ದಾರೆ. 1984ರ ಭೋಪಾಲ್ ಅನಿಲ ದುರಂತದ ಸಂದರ್ಭ, ಭೋಪಾಲ್ ರೈಲ್ವೆ ನಿಲ್ದಾಣದಲ್ಲಿ ಅಂದಿನ ಡೆಪ್ಯೂಟಿ ಸ್ಟೇಷನ್ ಸೂಪರಿಂಟೆಂಡೆಂಟ್ (ಡಿಎಸ್ಎಸ್) ಆಗಿದ್ದ ಘುಲಾಮ್ ದಸ್ತಗಿರ್ (Ghulam Dastagir) ಅವರ ಪುತ್ರ ಶಾದಾಬ್ ದಸ್ತಗೀರ್ (Shadab Dastagir) ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಯಶ್ ರಾಜ್ ಫಿಲ್ಮ್ಸ್ ಬಳಿ ವೆಬ್ ಸರಣಿ ಮರುಪರಿಶೀಲಿಸುವಂತೆ ಕೇಳಿಕೊಂಡಿದ್ದಾರೆ. ಸರಣಿಯಲ್ಲಿ ತಂದೆಗೆ ಸಿಗಬೇಕಾದ ಕ್ರೆಡಿಟ್ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ..
'ದಿ ರೈಲ್ವೆ ಮೆನ್' ವೆಬ್ ಸರಣಿಯಲ್ಲಿ ಕೆಕೆ ಮೆನನ್ ನಿರ್ವಹಿಸಿರುವ ರೈಲ್ವೆ ಅಧಿಕಾರಿಯ ಪಾತ್ರವು ಘುಲಾಮ್ ದಸ್ತಗಿರ್ ಅವರನ್ನು ಆಧರಿಸಿದೆ ಎಂದು ನಂಬಲಾಗಿದೆ. ದುರಂತದ ಸಂದರ್ಭ ಅವರು ಭೋಪಾಲ್ ರೈಲು ನಿಲ್ದಾಣದಲ್ಲಿ ಸೇವೆ ಸಲ್ಲಿದ್ದರು. 1984ರ ಡಿಸೆಂಬರ್ 2 ಮತ್ತು 3ರ ಮಧ್ಯರಾತ್ರಿ ಭೋಪಾಲ್‌ನ ಯೂನಿಯನ್ ಕಾರ್ಬೈಡ್ ಇಂಡಿಯಾ ಲಿಮಿಟೆಡ್ (ಯುಐಸಿಎಲ್) ನಿಂದ ಬಿಡುಗಡೆಯಾದ ವಿಷಕಾರಿ ಅನಿಲ ಅದೆಷ್ಟೋ ಬಲಿ ಪಡೆಯಿತು. ಆ ಸಂದರ್ಭ ರೈಲ್ವೆ ಅಧಿಕಾರಿ ಘುಲಾಮ್ ದಸ್ತಗಿರ್ ನೂರಾರು ಜೀವಗಳನ್ನು ಉಳಿಸಿದ್ದರು.
ವಿವಿಧ ವರದಿಗಳ ಪ್ರಕಾರ, ವಿಶ್ವದ ಅತ್ಯಂತ ಕೆಟ್ಟ ಕೈಗಾರಿಕಾ ದುರಂತ ಎಂದು ಹೆಸರಿಸಲಾದ ಈ ರಾಸಾಯನಿಕ ದುರಂತದಲ್ಲಿ ಸುಮಾರು 2000 - 3000 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಜನರ ಪ್ರಾಣ ಉಳಿಸಲು ಹೋರಾಡಿದ ಘುಲಾಮ್ ದಸ್ತಗಿರ್ ಅವರ ಪುತ್ರ ಶಾದಾಬ್ ದಸ್ತಗೀರ್ ಅವರು ದಿ ರೈಲ್ವೆ ಮೆನ್ ವೆಬ್ ಸರಣಿಯಲ್ಲಿನ ತಪ್ಪುಗಳನ್ನು ಸರಿಪಡಿಸುವಂತೆ ಯಶ್ ರಾಜ್ ಫಿಲ್ಮ್ಸ್‌ಗೆ ಕೇಳಿಕೊಂಡಿದ್ದಾರೆ.
ಇದನ್ನೂ ಓದಿ: 7 ಭಾಷೆಗಳಲ್ಲಿ 'ಕಾಂತಾರ' ದರ್ಶನ: 100 ಕೋಟಿ ಬಜೆಟ್ ಸಿನಿಮಾದ ಫಸ್ಟ್ ಲುಕ್ ರಿಲೀಸ್ಗೆ ಕಾತರ
ವಿಪತ್ತಿನ ಸಂದರ್ಭ ನಿಜವಾದ ನಾಯಕನಾದ ತಮ್ಮ ತಂದೆಯ ಪಾತ್ರವನ್ನು ಸರಿಪಡಿಸಿ ಸರಣಿಯನ್ನು ಮತ್ತೆ ಬಿಡುಗಡೆ ಮಾಡಬೇಕು. ಇದು ಮನರಂಜನೆಯಲ್ಲ. ಒಂದು ರಾತ್ರಿ ಹೋರಾಟ - ಒಬ್ಬ ವ್ಯಕ್ತಿಯ ಕಥೆ ಮುಂದಿನ ಪೀಳಿಗೆಗೆ ಸ್ಫೂರ್ತಿ. ವೆಬ್ ಸರಣಿ ಮಾಡುವ ಮೂಲಕ ವಾಣಿಜ್ಯ ಲಾಭವನ್ನು ಪಡೆದುಕೊಳ್ಳುತ್ತಿರುವ ಯಶ್ ರಾಜ್ ಫಿಲ್ಮ್ಸ್ ಬ್ಯಾನರ್‌ನಂತಹ ಜವಾಬ್ದಾರಿಯುತ ನಿರ್ಮಾಣ ಸಂಸ್ಥೆ ನಿಜವಾದ ನಾಯಕನಿಗೆ ಸೂಕ್ತ ಗೌರವ ನೀಡುವುದು ಮುಖ್ಯ ಎಂದು ಪರಿಗಣಿಸದಿರುವುದು ವಿಷಾದನೀಯ ಸಂಗತಿ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ದೀಪಿಕಾ, ಹೃತಿಕ್ 'ಫೈಟರ್' ಪ್ರಚಾರ ಪ್ರಾರಂಭ: ಪೋಸ್ಟರ್ ಅನಾವರಣ; ಡಿಸೆಂಬರ್ನಲ್ಲಿ ಟೀಸರ್
ಅಲ್ಲದೇ ಹಕ್ಕುಸ್ವಾಮ್ಯ ಉಲ್ಲಂಘಿಸಿರುವುದಾಗಿಯೂ ತಿಳಿಸಿದ್ದಾರೆ. ನಾವು ಬೇರೆ ಕೆಲ ನಿರ್ಮಾಣ ಸಂಸ್ಥೆಗೆ ಹಕ್ಕುಸ್ವಾಮ್ಯ ನೀಡಿದ್ದೇವೆ. ಟೀಸರ್ ನೋಡಿದಾಗ ನಮ್ಮ ತಂದೆಯ ಕಥೆಯನ್ನು ನಮ್ಮ ಅನುಮತಿ ಇಲ್ಲದೇ ತೆಗೆದಿರುವುದು ಗೊತ್ತಾಗಿದೆ ಎಂದು ತಿಳಿಸಿದರು. 1984ರ ಅನಿಲ ದುರಂತದ ಸಮಯದಲ್ಲಿ ತನ್ನ ತಂದೆಯ ಪ್ರಯತ್ನಗಳನ್ನು ನೆನಪಿಸಿಕೊಂಡ ಶಾದಾಬ್ ಅವರು, ವಿಷಕಾರಿ ಅನಿಲದಿಂದ ಜನರ ಪ್ರಾಣ ಉಳಿಸುವ ಉದ್ದೇಶದಿಂದ ತಂದೆ ಭೋಪಾಲ್‌ಗೆ ಹೋಗುವ ರೈಲುಗಳನ್ನು ನಿಲ್ಲಿಸಿದರು. ಮುಂಬೈ ಗೋರಖ್‌ಪುರ ಎಕ್ಸ್‌ಪ್ರೆಸ್ ರೈಲಿಗೆ ಫ್ಲ್ಯಾಗ್ ಆಫ್ ಮಾಡಿದರು. ಪರಿಣಾಮ ನೂರಾರು ಜೀವ ಉಳಿಯಿತು ಎಂದು ತಿಳಿಸಿದರು.