ಅಹಮದಾಬಾದ್ (ಗುಜರಾತ್): ಗುಜರಾತ್ ಯೂತ್ ಕಾಂಗ್ರೆಸ್ ಅಧ್ಯಕ್ಷ ವಿಶ್ವನಾಥ್ ಸಿನ್ಹಾ ವಘೇಲಾ ಭಾನುವಾರ ತಮ್ಮ ಸ್ಥಾನಕ್ಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದಾರೆ. ಅಲ್ಲದೇ, ರಾಜೀನಾಮೆ ಪತ್ರದಲ್ಲಿ ಪಕ್ಷದ ವಿರುದ್ಧ ಟೀಕಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಆಂತರಿಕ ಕಚ್ಚಾಟ, ಗುಂಪುಗಾರಿಕೆ ಬಗ್ಗೆ ದೂರಿರುವ ವಿಶ್ವನಾಥ್ ಸಿನ್ಹಾ ವಘೇಲಾ, 2016ರಿಂದ 2021ರವರೆಗೆ ಯಾವುದೇ ಹುದ್ದೆ ಪಡೆದಿದ್ದರೂ ಕೂಡ ಇದಕ್ಕೆ ಪ್ರತಿಯಾಗಿ ಪಕ್ಷಕ್ಕೆ 70 ಲಕ್ಷ ರೂ. ಭರಿಸಿದ್ದೇನೆ ಎಂದೂ ಆರೋಪಿಸಿದ್ದಾರೆ.
ಇದನ್ನೂ ಓದಿ: ಹಿಮಾಚಲ ಪ್ರದೇಶ, ಗುಜರಾತ್ನಲ್ಲಿ ಬಿಜೆಪಿ ಸೇರಿದ ಕಾಂಗ್ರೆಸ್ ನಾಯಕರು
ಅಲ್ಲದೇ, ತಮ್ಮ ಆರಾಧ್ಯ ದೈವವಾಗಿದ್ದ ಸ್ವಾತಂತ್ರ್ಯ ಹೋರಾಟಗಾರರನ್ನು ಈಗಿನ ಕಾಂಗ್ರೆಸ್ ಪಕ್ಷವು ಗೌರವಿಸುತ್ತಿಲ್ಲ. ಅವರ ಫೋಟೋಗಳು ಕೂಡ ಪಕ್ಷದ ಕಚೇರಿಯ ಗೋಡೆಗಳ ಮೇಲಿಲ್ಲ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕಾಂಗ್ರೆಸ್ ಆಗಿ ಉಳಿದಿಲ್ಲ ಎಂದು ವಘೇಲಾ ದೂರಿದ್ದಾರೆ.
ಜೊತೆಗೆ ಯುವ ಕಾಂಗ್ರೆಸ್ ಅಧ್ಯಕ್ಷರಾಗಲು ಸಹಾಯ ಮಾಡಿದ ಎಲ್ಲ ಹಿರಿಯ ನಾಯಕರನ್ನೂ ಪಕ್ಷದಲ್ಲಿ ಟಾರ್ಗೆಟ್ ಮಾಡಲಾಗಿದೆ. ಪಕ್ಷದೊಳಗಿನ ಒಂದು ಗುಂಪು ನಾನು ನೀಡಿದ ಕಾರ್ಯಕ್ರಮಗಳನ್ನು ವಿಫಲಗೊಳಿಸಲು ನಿರಂತರವಾಗಿ ಪ್ರಯತ್ನಿಸುತ್ತಿದೆ ಎಂದು ರಾಜೀನಾಮೆ ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ.
ಕಾಂಗ್ರೆಸ್ ತೊರೆಯುವುದು ಗೊತ್ತಿತ್ತು: ಹಾರ್ದಿಕ್ ಪಟೇಲ್ ಪಕ್ಷವನ್ನು ತೊರೆದ ದಿನವೇ ವಿಶ್ವನಾಥ್ ಸಿನ್ಹಾ ವಘೇಲಾ ಕೂಡ ಕಾಂಗ್ರೆಸ್ನಿಂದ ಹೊರ ಹೋಗಲು ಸಿದ್ಧರಾಗಿ ಕುಳಿತಿದ್ದರು. ಅವರು ಯಾವಾಗ ಬೇಕಾದರೂ ಪಕ್ಷವನ್ನು ತೊರೆಯಬಹುದು ಎಂಬುದು ಪಕ್ಷದ ಎಲ್ಲರಿಗೂ ಇತ್ತು. ವಘೇಲಾ ಅವರನ್ನು ಹಾರ್ದಿಕ್ ಪಟೇಲ್ ಪಾಳೆಯದವರೇ ಎಂದು ಪರಿಗಣಿಸಲಾಗಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ತಮ್ಮದೇ ಪಕ್ಷದ ಮುಖಂಡನ ಮಗನ ಅಪಹರಣ: ಬಿಜೆಪಿ ಕಾರ್ಪೊರೇಟರ್ ಸೇರಿ ಹತ್ತು ಜನರ ಬಂಧನ