ಸೂರತ್(ಗುಜರಾತ್): ಮುಂದಿನ ಆರು ತಿಂಗಳಲ್ಲಿ ವಿಶ್ವದ ಅತಿದೊಡ್ಡ ಹೊಸ ಡೈಮಂಡ್ ಬೌರ್ಸ್ ಗುಜರಾತ್ನ ಸೂರತ್ನಲ್ಲಿ ಆರಂಭಗೊಳ್ಳಲಿದ್ದು, ಪ್ರಧಾನಿ ನರೇಂದ್ರ ಮೋದಿ ಇದರ ಉದ್ಘಾಟನಾ ಮಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಿಶೇಷ ಅತಿಥಿಗಳಾಗಿ ಆಗಮಿಸುವ ಸಾಧ್ಯತೆ ಇದೆ. ಸೂರತ್ ಡೈಮಂಡ್ ಬೋರ್ಸ್ ಈಗಾಗಲೇ ಕೇಂದ್ರ ಸಚಿವ ಪಿಯೂಷ್ ಗೋಯಲ್ಗೆ ಮನವಿ ಸಲ್ಲಿಕೆ ಮಾಡಿದೆ.
ವಿಶ್ವದ ಅತಿದೊಡ್ಡ ಡೈಮಂಡ್ ಕಟ್ಟಡ ಸೂರತ್ನ ಡೈಮಂಡ್ ಬೋರ್ಸ್ ನಿರ್ಮಾಣ ಕಾರ್ಯ ಮಾರ್ಚ್ 2022ರ ವೇಳೆಗೆ ಪೂರ್ಣಗೊಳ್ಳಲಿದ್ದು, ಅದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ಗೆ ಉದ್ಘಾಟಕರಾಗಿ ಆಹ್ವಾನ ನೀಡಲು ನಿರ್ಧರಿಸಲಾಗಿದೆ. ಈಗಾಗಲೇ ಇದಕ್ಕೆ ಸಂಬಂಧಿಸಿದಂತೆ ಎಲ್ಲ ರೀತಿಯ ಸಿದ್ಧತೆಗಳು ನಡೆಯುತ್ತಿದ್ದು, ಸುಮಾರು 66 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಕಟ್ಟಡ ನಿರ್ಮಾಣ ನಡೆದಿದ್ದು, ಅದು ಅಂತಿಮ ಹಂತದಲ್ಲಿದೆ.
ಇದನ್ನೂ ಓದಿರಿ: ಟಿ-20 ವಿಶ್ವಕಪ್ನಲ್ಲಿ ಭಾರತ ಸೋಲಿಸಿದ್ರೆ ಪಿಸಿಬಿಗೆ ಸಿಗಲಿದೆಯಂತೆ ಬ್ಲಾಂಕ್ ಚೆಕ್ !
ಈಗಾಗಲೇ ಕಟ್ಟಡ ಕಾರ್ಯ ಶೇ. 90ಕ್ಕಿಂತಲೂ ಹೆಚ್ಚು ಪೂರ್ಣಗೊಂಡಿದ್ದು, ಇದು ಉದ್ಘಾಟನೆಗೊಂಡ ನಂತರ ಪ್ರಪಂಚದ 175 ದೇಶಗಳ ವ್ಯಾಪಾರಿಗಳು ವಜ್ರ ಖರೀದಿ ಮಾಡಲು ಇಲ್ಲಿಗೆ ಬರಲಿದ್ದಾರೆ. ಇದರಲ್ಲಿ ಒಟ್ಟು 4,500 ಕಚೇರಿಗಳು ಇರಲಿವೆ. ಸುಮಾರು 2 ಲಕ್ಷ ಕೋಟಿ ರೂ. ವಹಿವಾಟು ನಡೆಯುವ ನಿರೀಕ್ಷೆ ಇದೆ.
ವಿಶೇಷವೆಂದರೆ ಪ್ರಪಂಚದ 100ರಲ್ಲಿ 90ರಷ್ಟು ವಜ್ರಗಳನ್ನ ಸೂರತ್ನಲ್ಲಿ ಕತ್ತರಿಸಿ ಹೊಳಪು ನೀಡುತ್ತದೆ. ಉಳಿದಂತೆ ರಷ್ಯಾದಲ್ಲಿ ಕೆಲಸ ನಡೆಯುತ್ತದೆ. ಹೀಗಾಗಿ ರಷ್ಯಾದ ಅಧ್ಯಕ್ಷರಿಗೆ ಆಹ್ವಾನ ನೀಡಲು ನಿರ್ಧರಿಸಲಾಗಿದೆ ಎಂದು ಸೂರತ್ ಡೈಮಂಡ್ ಬೌರ್ಸ್‌ನ ಸಮಿತಿಯ ಸದಸ್ಯ ದಿನೇಶ್ ನವಾಡಿಯಾ ಈಟಿವಿ ಭಾರತ್‌ಗೆ ತಿಳಿಸಿದ್ದಾರೆ.