ETV Bharat / bharat

ಹಸು ಸಗಣಿಯಿಂದ ಕಟ್ಟಿದ ಮನೆಗಳು ಪರಮಾಣು ವಿಕಿರಣವನ್ನೂ ತಡೆಯಬಲ್ಲದು: ಗುಜರಾತ್ ಜಡ್ಜ್‌ - ಹಸುವಿನ ಸಗಣಿಯಿಂದ ಮಾಡಿದ ಮನೆಗಳು

ಗುಜರಾತ್​ನಲ್ಲಿ ಗೋ ಹತ್ಯೆ ನಿಷೇಧ ಕಾನೂನು ಜಾರಿಗೆ ತರಲಾಗಿದೆ. ಈ ನಡುವೆ ಅಕ್ರಮ ಗೋ ಸಾಗಾಟ ಪ್ರಕರಣಗಳು ನಡೆಯುತ್ತಿದ್ದು, ಈ ಕುರಿತು ನ್ಯಾಯಾಲಯ ಕಳವಳ ವ್ಯಕ್ತಪಡಿಸಿದೆ.

ಹಸುವಿನ ಸಗಣಿಯಿಂದ ಮಾಡಿದ ಮನೆಗಳು ಪರಮಾಣು ವಿಕಿರಣಗಳಿಂದ ಯಾವುದೇ ಪರಿಣಾಮಕ್ಕೆ ಒಳಗಾಗುವುದಿಲ್ಲ; ಗುಜರಾತ್​ ನ್ಯಾಯಾಧೀಶರು
gujarat-vyara-court-stressed-cow-protection-in-county
author img

By

Published : Jan 24, 2023, 11:34 AM IST

ಅಹಮದಾಬಾದ್​: ದೇಶದಲ್ಲಿ ಹಸುಗಳ ಸಂರಕ್ಷಣೆ ಮಾಡುವ ಅವಶ್ಯಕತೆ ಇದೆ ಎಂಬುದನ್ನು ಗುಜರಾತ್​​ ವ್ಯಾರಾ ನಗರದ ಸೆಷನ್ಸ್‌​ ನ್ಯಾಯಾಲಯ ಒತ್ತಿ ಹೇಳಿದೆ. ಹಸುವಿನ ಸಗಣಿಯಿಂದ ಮಾಡಿದ ಮನೆಗಳು ಪರಮಾಣು ವಿಕಿರಣಗಳಿಂದಲೂ ಯಾವುದೇ ಪರಿಣಾಮಕ್ಕೆ ಒಳಗಾಗುವುದಿಲ್ಲ ಎಂಬುದನ್ನು ವಿಜ್ಞಾನ ಕೂಡಾ ಸಾಬೀತು ಮಾಡಿದೆ ಎಂದು ವಿಚಾರಣೆಯ ಸಂದರ್ಭದಲ್ಲಿ ಅಭಿಪ್ರಾಯಪಟ್ಟಿತು. ಹಸುವಿನ ಸಗಣಿಯಿಂದ ಮಾಡಿದ ಮನೆಗಳಲ್ಲಿ ವಾಸಿಸುವ ಜನರು ಪರಮಾಣು ವಿಕಿರಣಗಳಿಂದಲೂ ಯಾವುದೇ ಹಾನಿಗೆ ಒಳಗಾಗುವುದಿಲ್ಲ. ಹಸುವಿನ ಮೂತ್ರದಿಂದ ಅನೇಕ ರೋಗಗಳು ನಿವಾರಣೆಯಾಗುತ್ತವೆ ಎಂದು ಸೆಷನ್ಸ್‌​ ನ್ಯಾಯಾಧೀಶರಾದ ಸಮಿರ್​ ವ್ಯಾಸ್​ ಕಳೆದ ನವೆಂಬರ್​ನಲ್ಲಿ ತಿಳಿಸಿದ್ದರು.

ಹಸು ತಾಯಿ ಸಮಾನ: ಹಲವು ಕಾನೂನುಗಳನ್ನು ಉಲ್ಲಂಘಿಸಿ ಗುಜರಾತ್​ನಿಂದ ಮಹಾರಾಷ್ಟ್ರಕ್ಕೆ 22 ವರ್ಷದ ಯುವಕನೊಬ್ಬ ಹಸು ಮತ್ತು ಎಮ್ಮೆಗಳನ್ನು ಸಾಗಿಸುತ್ತಿದ್ದ ಪ್ರಕರಣದ ಅರ್ಜಿ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಧೀಶರು ಈ ವಿಚಾರ ಪ್ರಸ್ತಾಪಿಸಿದ್ದಾರೆ. "ಹಸುಗಳನ್ನು ಕೇವಲ ಪ್ರಾಣಿಗಳಾಗಿ ನೋಡುವ ಬದಲು ತಾಯಿಯಾಗಿ ಪೂಜಿಸಲಾಗುತ್ತದೆ. ಇಂತಹ ಹಸುಗಳನ್ನು ಹತ್ಯೆ ಮಾಡಲಾಗುತ್ತಿದೆ. ಹಸುವಿನ ರಕ್ತದ ಹನಿ ಭೂಮಿಯ ಮೇಲೆ ಬೀಳುವುದು ನಿಂತಾಗಲೇ ಭೂಮಿಯ ಮೇಲಿನ ಎಲ್ಲ ಸಮಸ್ಯೆಗಳು ಪರಿಹಾರವಾಗುತ್ತವೆ. ಗೋ ಸಂರಕ್ಷಣೆಯ ಬಗ್ಗೆ ಮಾತನಾಡಿದರೂ ಅದು ಮೇಲೆ ಜಾರಿಯಾಗಿಲ್ಲ. ಗೋಹತ್ಯೆ ಮತ್ತು ಅಕ್ರಮ ಸಾಗಣೆ ಘಟನೆಗಳು ನಿತ್ಯವೂ ನಡೆಯುತ್ತಿರುತ್ತವೆ. ಇದು ಸುಸಂಸ್ಕೃತ ಸಮಾಜಕ್ಕೆ ಅವಮಾನ" ಎಂದರು.

ಕೋರ್ಟ್‌ ಕಳವಳ: "ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗುತ್ತಿವೆ. ಗೋ ಹತ್ಯೆ ಪ್ರಕರಣಗಳು ಕಡಿಮೆಯಾಗುವುದರ ಬದಲು ಹೆಚ್ಚಾಗುತ್ತಿದೆ. ಹಸು ನಮ್ಮ ಧರ್ಮದ ಪ್ರತೀಕ. ಹಸುವಿನ ತ್ಯಾಜ್ಯಗಳಿಂದ ಮಾಡಿದ ಸಾವಯವ ಕೃಷಿಯ ಆಹಾರಗಳು ಹಲವು ರೋಗಗಳಿಂದ ನಮ್ಮನ್ನು ರಕ್ಷಿಸುತ್ತವೆ. ಆದರೆ ಇಂದು ಯಾಂತ್ರೀಕೃತ ಕಸಾಯಿಖಾನೆಗಳಲ್ಲಿ ಗೋ ಹತ್ಯೆ ಮಾಡಲಾಗುತ್ತಿದೆ. ಮಾಂಸಾಹಾರಿಗಳಿಗೆ ಇತರೆ ಮಾಂಸದ ಜೊತೆಗೆ ಗೋಮಾಂಸವನ್ನೂ ನೀಡಲಾಗುತ್ತಿದ್ದು ಗೋ ಸಂತತಿ ಅಪಾಯದಲ್ಲಿವೆ" ಎಂದು ಕಳವಳ ವ್ಯಕ್ತಪಡಿಸಿದರು.

ಜನರಿಗೆ ಹಸುವಿನ ಪ್ರಾಮುಖ್ಯತೆಯ ಅರಿವಾಗಬೇಕು. ಧರ್ಮ ಕೂಡಾ ಹಸುವಿನಿಂದಲೇ ಉದಯವಾಗಿದೆ. ಧರ್ಮ ಎಂಬುದು ವೃಷಭ ರೂಪದಲ್ಲಿದೆ. ಅದು ಹಸುವಿನ ಪುತ್ರ. ಅಕ್ರಮವಾಗಿ ಹಸು ಸಾಗಾಣೆ ಮಾಡಿ ಹತ್ಯೆ ಮಾಡುತ್ತಿರುವುದು ನೋವಿನ ವಿಷಯವಾಗಿದೆ ಎಂದು ಕೋರ್ಟ್​ ಹೇಳಿದೆ.

ಗೋವುಗಳ ಅಕ್ರಮ ಸಾಗಾಟ: 2020ರ ಆಗಸ್ಟ್​ನಲ್ಲಿ ತಾಪಿ ಪೊಲೀಸರು ಟ್ರಕ್​ನಲ್ಲಿ 16 ಹಸು ಮತ್ತು ಎಮ್ಮೆಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪದ ಮೇಲೆ ಮಹಾರಾಷ್ಟ್ರದ ಮಲೆಗಾಂವ್​ ನಿವಾಸಿ ಮೊಹಮ್ಮದ್​ ಆಮೀನ್​ ಅಂಜುಮ್​ ಎಂಬಾತನನ್ನು ಬಂಧಿಸಿದ್ದರು. ಪೊಲೀಸರು ಟ್ರಕ್​ ಪರಿಶೀಲನೆ ನಡೆಸಿದಾಗ ಅದರಲ್ಲಿ ಒಂದು ಹಸು ಮತ್ತು ಎಮ್ಮೆ ಸತ್ತು ಹೋಗಿತ್ತು. ಅಲ್ಲದೇ, ಹಸುಗಳನ್ನು ಸಾಗಿಸುವಷ್ಟು ಜಾಗವಿಲ್ಲದೆ, ಇಕ್ಕಟ್ಟಿನಲ್ಲಿಯೇ ತುಂಬಲಾಗಿತ್ತು. ಈ ವೇಳೆ ಆರೋಪಿ ತಪ್ಪಿಸಿಕೊಂಡು ಹೋಗುವ ಯತ್ನ ನಡೆಸಿದ್ದು, ಪೊಲೀಸರು ಬಂಧಿಸಿದ್ದರು. ಪ್ರಕರಣದಲ್ಲಿ ಆರೋಪಿಯನ್ನು ದೋಷಿ ಎಂದು ಘೋಷಿಸಿದ ನ್ಯಾಯಾಲಯ ಆತನಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿತ್ತು.

ಶಿಕ್ಷೆ ಏನು?: 2017ರಲ್ಲಿ ಗೋವಿನ ರಕ್ಷಣೆಗೆ ಮುಂದಾದ ಗುಜರಾತ್ ಸರ್ಕಾರ, ಗೋ ಹತ್ಯೆ ವಿರೋಧಿ ಕಾನೂನನ್ನು ಜಾರಿಗೆ ತಂದಿದೆ. ಇದರನುಸಾರ ಅಕ್ರಮವಾಗಿ ಹಸುಗಳ ಹತ್ಯೆ ಮಾಡುವ ಪ್ರಕರಣದಲ್ಲಿ ಆರೋಪಿ ದೋಷಿ ಎಂದಾದರೆ, ಆತನಿಗೆ ಜೀವವಾಧಿ ಶಿಕ್ಷೆ ಹಾಗೂ 5 ಲಕ್ಷ ರೂ ದಂಡ ವಿಧಿಸಬಹುದು.

ಇದನ್ನೂ ಓದಿ: ಕೇರಳದ ಇಬ್ಬರು ಶಾಲಾ ಮಕ್ಕಳಲ್ಲಿ ನೊರೊವೈರಸ್ ಸೋಂಕು ದೃಢ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.