ಡ್ಯಾಂಗ್ (ಗುಜರಾತ್): ನಿನ್ನೆ ತಡರಾತ್ರಿ ಗುಜರಾತ್‌ನ ಡ್ಯಾಂಗ್ ಜಿಲ್ಲೆಯ ಸಪುತಾರಾ ಬಳಿ ಪ್ರಯಾಣಿಕರು ತುಂಬಿದ್ದ ಬಸ್ ಕಮರಿಗೆ ಬಿದ್ದ ಪರಿಣಾಮ ಇಬ್ಬರು ಮಹಿಳಾ ಪ್ರಯಾಣಿಕರು ಸಾವನ್ನಪ್ಪಿದ್ದು, 46 ಮಹಿಳೆಯರು ಗಾಯಗೊಂಡಿದ್ದಾರೆ. ಸೂರತ್ ಗರ್ಬಾ ಕ್ಲಾಸಸ್ ಗ್ರೂಪ್‌ಗೆ ಸೇರಿದ ಬಸ್ ಸಪುತಾರಾ ಕಡೆಗೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ.
ಸೂರತ್‌ನ ಗರ್ಬಾದ ಗುಂಪಿನ 50 ಕ್ಕೂ ಹೆಚ್ಚು ಮಹಿಳೆಯರು ಬಸ್‌ನಲ್ಲಿದ್ದರು. ಮಾಲೆಗಾಂವ್ ಘಾಟ್ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಬಸ್ ಕಮರಿಗೆ ಬಿದ್ದಿದೆ. ಬಸ್ ಸಪುತಾರಾದಿಂದ ವಾಘೈಗೆ ಹೋಗುತ್ತಿದ್ದಾಗ ಮಾಲೆಗಾಂವ್ ಬಳಿ ಟೈರ್ ಸ್ಫೋಟಗೊಂಡ ಪರಿಣಾಮ ಅಪಘಾತ ಸಂಭವಿಸಿದೆ.
ಗಾಯಗೊಂಡ 46 ಮಂದಿಯಲ್ಲಿ 21 ಮಂದಿಯನ್ನು ಚಿಕಿತ್ಸೆಗಾಗಿ ಹತ್ತಿರದ ಪಿಎಚ್‌ಸಿಗೆ ಕರೆದೊಯ್ಯಲಾಗಿದ್ದು, 15 ಮಂದಿಯನ್ನು ಅಹ್ವಾ ಸಿವಿಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಎಂಟು ಪ್ರಯಾಣಿಕರ ಸ್ಥಿತಿ ಚಿಂತಾಜನಕವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಸೂರತ್‌ಗೆ ಕಳುಹಿಸಲಾಗಿದೆ.
ಇದನ್ನೂ ಓದಿ: 25 ವರ್ಷದಿಂದ ನಾಪತ್ತೆಯಾಗಿದ್ದ ವ್ಯಕ್ತಿ.. ವಿಧವೆಯಂತೆ ಜೀವನ ಸಾಗಿಸುತ್ತಿದ್ದ ಮಹಿಳೆ ಬಾಳಲ್ಲಿ ಹೊಸ ಬೆಳಕು