ಸೂರತ್(ಗುಜರಾತ್): ಇಲ್ಲಿನ ರೆಸ್ಟೋರೆಂಟ್ವೊಂದರಲ್ಲಿ ಟಾಯ್ ಟ್ರೈನ್‌ಗಳು ಡೈನಿಂಗ್ ಟೇಬಲ್‌ಗಳ ಮೂಲಕ ಗ್ರಾಹಕರಿಗೆ ಆಹಾರ ನೀಡುತ್ತವೆ. "ಟ್ರೇನಿಯನ್ ಎಕ್ಸ್‌ಪ್ರೆಸ್" ಎಂಬ ಈ ಟ್ರೈನ್ ಗ್ರಾಹಕ ಮೆಚ್ಚುಗೆ ಗಳಿಸಿದೆ. ಜನರ ಸಹಾಯವಿಲ್ಲದೇ ಈ ರೈಲು ಅಡುಗೆ ಮನೆಯಿಂದ ನೇರವಾಗಿ ಡೈನಿಂಗ್ ಟೇಬಲ್‌ಗೆ ಬರುತ್ತದೆ.
ರೈಲಿನ ವಿವಿಧ ಕಂಪಾರ್ಟ್ಮೆಂಟ್ಗಳಲ್ಲಿ ಬ್ರೆಡ್, ಅನ್ನ, ಕರಿ, ಪಾಪಡ್ ಸೇರಿದಂತೆ ವಿವಿಧ ಆಹಾರಗಳನ್ನು ಇಡಲಾಗುತ್ತದೆ. ಇವುಗಳನ್ನೆಲ್ಲಾ ಹೊತ್ತು ಸಾಗುವ ರೈಲು ಗ್ರಾಹಕರಿರುವ ಡೈನಿಂಗ್ ಟೇಬಲ್‌ಗೆ ಬರುತ್ತದೆ. ರೆಸ್ಟೋರೆಂಟ್ನ ವಿವಿಧ ಡೈನಿಂಗ್ ಟೇಬಲ್‌ಗಳಿಗೆ ಸೂರತ್ ನಗರದ ವಿವಿಧ ರೈಲು ನಿಲ್ದಾಣಗಳ ಹೆಸರನ್ನಿಡಲಾಗಿದೆ. ಹೀಗಾಗಿ ರೆಸ್ಟೋರೆಂಟ್ ಗ್ರಾಹಕರಿಗೆ ಸಂಪೂರ್ಣ ರೈಲು ನಿಲ್ದಾಣದ ವೈಬ್ ಒದಗಿಸುತ್ತಿದೆ.
'ನಾವು ಅನೇಕ ರೆಸ್ಟೋರೆಂಟ್‌ಗಳಿಗೆ ಹೋಗಿದ್ದೇವೆ. ಭೋಜನವನ್ನು ವೇಟರ್‌ಗಳು ಬಡಿಸುವುದು ಸಾಮಾನ್ಯ. ಆದ್ರಿಲ್ಲಿ ಆಹಾರವನ್ನು ರೈಲಿನಲ್ಲಿ ನೀಡಲಾಗುತ್ತಿದೆ. ಇದೊಂಥರಾ ಚೆನ್ನಾಗಿದೆ. ವಿಶೇಷವಾಗಿ ಮಕ್ಕಳು ಇದನ್ನು ತುಂಬಾ ಇಷ್ಟಪಡುತ್ತಾರೆ' ಎಂದು ಗ್ರಾಹಕಿ ದೇವಯಾನಿ ಪಟೇಲ್ ಹೇಳುತ್ತಾರೆ.
ಇದನ್ನೂ ಓದಿ: ಬೆಂಗಳೂರಿನ ತಂತ್ರಜ್ಞಾನ ದೈತ್ಯ ಇನ್ಫೋಸಿಸ್ಗೆ 5686 ಕೋಟಿ ರೂಪಾಯಿ ಲಾಭ
ಮಾಲೀಕ ಮುಖೇಶ್ ಚೌಧರಿ ಮಾತನಾಡಿ, 'ರೈಲುಗಳು ವಿದ್ಯುತ್‌ನಿಂದ ಚಲಿಸುತ್ತವೆ. ಆಹಾರವನ್ನು ತಯಾರಿಸಿದ ತಕ್ಷಣ ಅದನ್ನು ರೈಲಿನ ಮೇಲಿರಿಸಿ ರಿಂಗ್ ರೋಡ್, ಅಲ್ಥಾನ್, ವರಚ ಮುಂತಾದ ನಿಲ್ದಾಣಗಳ ಹೆಸರುಗಳನ್ನು ಹೊಂದಿರುವ ನಿರ್ದಿಷ್ಟ ಟೇಬಲ್‌ಗೆ ಕಳುಹಿಸಲಾಗುತ್ತದೆ. ಈ ರೈಲು ಪರಿಕಲ್ಪನೆ ಗ್ರಾಹಕರಿಗೆ ಇಷ್ಟವಾಗುತ್ತಿದೆ' ಎಂದರು.