ETV Bharat / bharat

ಏಳು ಮಂದಿ ಬಂಡಾಯ ಬಿಜೆಪಿ ಶಾಸಕರು ಅಮಾನತು

author img

By

Published : Nov 20, 2022, 4:10 PM IST

ನರ್ಮದಾ ಜಿಲ್ಲೆಯ ನಂದೋಡ್‌ನ ಹರ್ಷದ್ ವಾಸವ ಸೇರಿದಂತೆ ಏಳು ಜನ ಬಿಜೆಪಿ ನಾಯಕರನ್ನು ಅಮಾನತುಗೊಳಿಸಲಾಗಿದೆ. ಜುನಾಗಢದ ಅರವಿಂದ್ ಲಡಾನಿ, ಸುರೇಂದ್ರನಗರದ ಧಂಗದ್ರಾದಿಂದ ಛತ್ರಸಿಂಗ್ ಗುಂಜಾರಿಯಾ, ವಲ್ಸಾದ್‌ನ ಪರಡಿಯಿಂದ ಕೇತನ್ ಭಾಯ್ ಪಟೇಲ್, ರಾಜ್‌ಕೋಟ್ ಗ್ರಾಮಾಂತರದಿಂದ ಭರತ್ ಭಾಯಿ ಚಾವ್ಡಾ, ಗಿರ್ ಸೋಮನಾಥ್ ಜಿಲ್ಲೆಯ ವೆರಾವಲ್‌ನಿಂದ ಉದಯ್ ಭಾಯಿ ಶಾ ಮತ್ತು ಅಮ್ರೇಲಿಯ ರಾಜುಲಾದಿಂದ ಟಿಕೆಟ್ ಬಯಸಿದ್ದ ಕರಣ್ ಭಾಯಿ ಬಾರಯ್ಯ ಅಮಾನತುಗೊಂಡಿದ್ದಾರೆ.

ಗುಜರಾತ್: ಏಳು ಬಂಡಾಯ ಬಿಜೆಪಿ ಶಾಸಕರು ಅಮಾನತು
Gujarat: Seven rebel BJP MLAs suspended

ಗಾಂಧಿನಗರ (ಗುಜರಾತ್): ಬಿಜೆಪಿ ಟಿಕೆಟ್​ ವಂಚಿತರಾದ ನಂತರ ಸ್ವತಂತ್ರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದ ಏಳು ಮುಖಂಡರ ವಿರುದ್ಧ ಭಾರತೀಯ ಜನತಾ ಪಕ್ಷ (ಬಿಜೆಪಿ) ಶಿಸ್ತು ಕ್ರಮ ಕೈಗೊಂಡಿದ್ದು, ಅವರನ್ನು ಪಕ್ಷದಿಂದ ಅಮಾನತುಗೊಳಿಸಿದೆ. ಈ ಎಲ್ಲ ಏಳು ಅಭ್ಯರ್ಥಿಗಳು ಗುಜರಾತ್ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ ಟಿಕೆಟ್ ಬಯಸಿದ್ದರು.

ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಕ್ಕಾಗಿ ಈ ಶಾಸಕರನ್ನು ಆರು ವರ್ಷಗಳ ಕಾಲ ಅಮಾನತುಗೊಳಿಸಲಾಗಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಸಿ.ಆರ್. ಪಟೇಲ್ ಅವರನ್ನು ಉಲ್ಲೇಖಿಸಿ ಬಿಜೆಪಿ ಪತ್ರಿಕಾ ಪ್ರಕಟಣೆ ತಿಳಿಸಿದೆ.

ನರ್ಮದಾ ಜಿಲ್ಲೆಯ ನಂದೋಡ್‌ನ ಹರ್ಷದ್ ವಾಸವ ಸೇರಿದಂತೆ ಏಳು ಬಿಜೆಪಿ ನಾಯಕರನ್ನು ಅಮಾನತುಗೊಳಿಸಲಾಗಿದೆ. ಜುನಾಗಢದ ಅರವಿಂದ್ ಲಡಾನಿ, ಸುರೇಂದ್ರನಗರದ ಧಂಗದ್ರಾದಿಂದ ಛತ್ರಸಿಂಗ್ ಗುಂಜಾರಿಯಾ, ವಲ್ಸಾದ್‌ನ ಪರಡಿಯಿಂದ ಕೇತನ್ ಭಾಯ್ ಪಟೇಲ್, ರಾಜ್‌ಕೋಟ್ ಗ್ರಾಮಾಂತರದಿಂದ ಭರತ್ ಭಾಯಿ ಚಾವ್ಡಾ, ಗಿರ್ ಸೋಮನಾಥ್ ಜಿಲ್ಲೆಯ ವೆರಾವಲ್‌ನಿಂದ ಉದಯ್ ಭಾಯಿ ಶಾ ಮತ್ತು ಅಮ್ರೇಲಿಯ ರಾಜುಲಾದಿಂದ ಟಿಕೆಟ್ ಬಯಸಿದ್ದ ಕರಣ್ ಭಾಯಿ ಅವರು ಅಮಾನತುಗೊಂಡಿದ್ದಾರೆ.

ಗುಜರಾತಿನಲ್ಲಿ ಏಳನೇ ಅವಧಿಗೆ ಅಧಿಕಾರ ಹಿಡಿಯಲು ಹವಣಿಸುತ್ತಿರುವ ಬಿಜೆಪಿ 42 ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಿದೆ. 160 ಅಭ್ಯರ್ಥಿಗಳ ಮೊದಲ ಪಟ್ಟಿಯ ಘೋಷಣೆಯಲ್ಲಿ 38 ಹಾಲಿ ಶಾಸಕರನ್ನು ಕೈಬಿಡಲಾಗಿದೆ. ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಮತ್ತು ಮಾಜಿ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಸೇರಿದಂತೆ ಪಕ್ಷದ ಹಲವಾರು ಪ್ರಮುಖರಿಗೆ ಟಿಕೆಟ್ ನಿರಾಕರಿಸಲಾಗಿದೆ.

2017ರ ಗುಜರಾತ್ ಚುನಾವಣೆಯಲ್ಲಿ ಬಿಜೆಪಿ 182 ಸ್ಥಾನಗಳ ಪೈಕಿ 99 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಪಕ್ಷವು ಕಳೆದ 27 ವರ್ಷಗಳಿಂದ ರಾಜ್ಯದಲ್ಲಿ ಅಧಿಕಾರದಲ್ಲಿದೆ. 2014 ರಲ್ಲಿ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗುವ ಮೊದಲು ನರೇಂದ್ರ ಮೋದಿ ಅವರು ರಾಜ್ಯದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ಮುಖ್ಯಮಂತ್ರಿ ಎಂಬ ದಾಖಲೆ ಬರೆದಿದ್ದಾರೆ. ಈ ಬಾರಿ, ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಸಿಆರ್ ಪಟೇಲ್ ನೇತೃತ್ವದಲ್ಲಿ ಪಕ್ಷ ತನ್ನ ಅತ್ಯಧಿಕ ಸ್ಥಾನಗಳ ಸಂಖ್ಯೆಯಾಗಿದ್ದ 140ನ್ನು ಮೀರುವ ಗುರಿಯನ್ನು ಹೊಂದಿದೆ.

ಇದನ್ನೂ ಓದಿ: ಗುಜರಾತ್​ ಚುನಾವಣಾ ಕಣ: ಬಿಜೆಪಿಯ 60, ಕಾಂಗ್ರೆಸ್​ನ 35 ಅಭ್ಯರ್ಥಿಗಳು ಕೋಟ್ಯಧಿಪತಿಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.