ETV Bharat / bharat

ಗುಜರಾತ್​​ನಲ್ಲಿ 'ಗರ್ಬಾ'ಕ್ಕೆ ನಿರ್ಬಂಧ, ರಾಜಕೀಯ ರ್ಯಾಲಿಗಳಿಗೆ ಅನುಮತಿ: ಕೋರ್ಟ್​ ಮೊರೆ ಹೋದ ಸಂಘಟಕರು

ಕೊರೊನಾ ಮಾರ್ಗಸೂಚಿಗಳನ್ನು ಮುಂದಿಟ್ಟುಕೊಂಡು ಗುಜರಾತ್‌ನ ಜನಪ್ರಿಯ ಜಾನಪದ ನೃತ್ಯ ಗರ್ಬಾದ ಕಾರ್ಯಕ್ರಮಗಳಿಗೆ ಸರ್ಕಾರ ಕೆಲವು ನಿರ್ಬಂಧಗಳನ್ನು ಹೇರಿದ್ದು, ಗರ್ಬಾ ಸಂಘಟಕರು ಅಸಮಾಧಾನ ಹೊರಹಾಕಿ ಕೋರ್ಟ್​ ಮೆಟ್ಟಿಲೇರಿದ್ದಾರೆ.

Garba
ಗರ್ಬಾ
author img

By

Published : Oct 11, 2021, 7:06 PM IST

ಪೋರ್​​ಬಂದರ್/ಗುಜರಾತ್​​​​: ಅಕ್ಟೋಬರ್ 7 ರಿಂದ ಒಂಬತ್ತು ದಿನಗಳ ಅವಧಿಯ ನವರಾತ್ರಿ ಉತ್ಸವ ರಾಜ್ಯದಲ್ಲಿ ಆರಂಭವಾಗಿದೆ. ಇದರ ಪ್ರಮುಖ ಆಕರ್ಷಣೆ ಗರ್ಬಾ ನೃತ್ಯ. ಆದರೆ ಈ ಬಾರಿ ಕೊರೊನಾ ಕಾರಣ ಕೊಟ್ಟು ಗರ್ಬಾದ ಎಲ್ಲಾ ವಾಣಿಜ್ಯ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದ್ದು, ಕೇವಲ 400 ಜನರು ಮಾತ್ರ ಪಾಲ್ಗೊಳ್ಳುವಂತೆ ಸರ್ಕಾರ ಮಿತಿ ಹೇರಿದೆ. ಇದಕ್ಕೆ ಗರ್ಬಾ ಸಂಘಟಕರಿಂದ ಆಕ್ರೋಶ ವ್ಯಕ್ತವಾಗಿದೆ.

ರಾಜಕೀಯ ರ್ಯಾಲಿಗಳಿಗೆ ಬಂದಾಗ ಯಾವುದೇ ಮಿತಿ ಅಥವಾ ನಿರ್ಬಂಧಗಳಿಲ್ಲ. ಈ ಆಚರಣೆಗೆ ಯಾಕೆ ಕೇವಲ 400 ಜನರ ಮಿತಿ ಎಂದು ಜನರು ಆಕ್ರೋಶ ಹೊರಹಾಕಿದ್ದಾರೆ. ಆಡಳಿತಾರೂಢ ಬಿಜೆಪಿ ತನ್ನ 'ಜನ್ ಆಶೀರ್ವಾದ ಯಾತ್ರೆ'ಯನ್ನು ಸಾವಿರಾರು ಜನರನ್ನು ಸೇರಿಸಿಕೊಂಡು ಮಾಡುತ್ತಿದೆ. ಇತರ ರಾಜಕೀಯ ಪಕ್ಷಗಳಾದ ಎಎಪಿ ಮತ್ತು ಕಾಂಗ್ರೆಸ್ ಕೂಡ ರಾಜ್ಯಾದ್ಯಂತ ತಮ್ಮ- ತಮ್ಮ ಯಾತ್ರೆಗಳನ್ನು ಮಾಡಿವೆ. ನೆರೆಯ ಜಿಲ್ಲೆಯಲ್ಲೂ ಸಹ 3,000ಕ್ಕೂ ಹೆಚ್ಚು ಜನರಿಗೆ 'ಜನ್ ಆಶೀರ್ವಾದ್ ಯಾತ್ರೆ'ಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಇತ್ತೀಚೆಗೆ ಕಾಂಗ್ರೆಸ್ ಕೂಡ ನ್ಯಾಯ್​​ ಯಾತ್ರೆ ಮತ್ತು ಆಮ್ ಆದ್ಮಿ ಪಕ್ಷದ' ಜನ ಅಭಿವೃದ್ದಿ ಯಾತ್ರೆ'ಗಳನ್ನು ಗ್ರಾಮೀಣ ಮತ್ತು ನಗರ ಪ್ರದೇಶಗಳನ್ನು ಒಳಗೊಂಡು ಕೊರೊನಾ ಕಟ್ಟುಪಾಡುಗಳನ್ನು ಉಲ್ಲಂಘಿಸಿದೆ. ಸರ್ಕಾರ ಅಳವಡಿಸಿಕೊಂಡಿರುವ ಇಂತಹ ವಿಭಿನ್ನ ಮಾನದಂಡಗಳ ವಿರುದ್ಧ ಸಾಮಾನ್ಯ ಮನುಷ್ಯರಲ್ಲಿ ಸಾಕಷ್ಟು ಅಸಮಾಧಾನವಿದೆ.

"ಸ್ಪಷ್ಟವಾಗಿ, ಈ ಯಾತ್ರೆಗಳಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಲಾಗಿದೆ, ಮತ್ತು ಅವರ ವಿರುದ್ಧ ಏಕೆ ಕ್ರಮ ಕೈಗೊಳ್ಳುತ್ತಿಲ್ಲ" ಎಂದು ಜುನಾಗಡ್‌ನ ಗರ್ಬಾ ಆಚರಣೆ ಸಂಘಟಕರು 'ಈಟಿವಿ ಭಾರತ'ನೊಂದಿಗೆ ಮಾತನಾಡಿದ್ದಾರೆ. ಕೇವಲ ನಮಗೇಕೆ ಕೊರೊನಾ ನಿಯಮಗಳು ಮತ್ತು ರಾಜಕೀಯ ನಾಯಕರಿಗಿಲ್ಲ ಯಾಕೆ? ಕೋವಿಡ್‌ನಲ್ಲಿ ಎಲ್ಲರೂ ಸುರಕ್ಷತೆಗಾಗಿ ಮಾರ್ಗಸೂಚಿಗಳನ್ನು ಅನುಸರಿಸಬೇಕು, ಆದರೆ ಯಾವುದೇ ತಾರತಮ್ಯ ಇರಬಾರದು ಎಂದಿದ್ದಾರೆ.

ನವರಾತ್ರಿಯಲ್ಲಿ ವಾಣಿಜ್ಯ ಕಾರ್ಯಕ್ರಮಗಳಿಗೆ ಅವಕಾಶ ನೀಡುವಂತೆ ವಾಣಿಜ್ಯ ಗರ್ಬಾ ಸಂಘಟಕರು ಹೈಕೋರ್ಟ್ ಮೊರೆ ಹೋಗಿದ್ದು, ಕೋರ್ಟ್​​ನಲ್ಲಿ ಈ ಬಗ್ಗೆ ವಿಚಾರಣೆ ನಡೆಯುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.