ಸೂರತ್: ಗುಜರಾತ್ ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿದ್ದಾರೆ. ಅಕ್ರಮವಾಗಿ ಬಸ್‌ನಲ್ಲಿ ಸಾಗಿಸುತ್ತಿದ್ದ 1 ಕೆಜಿ ಚಿನ್ನ ಮತ್ತು 68 ಲಕ್ಷ ರೂ. ನಗದು ಸಮೇತ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ಮುಂದುವರೆಸಿದ್ದಾರೆ.
ಸೂರತ್ ನಗರದ ಸರೋಲಿ ಪೊಲೀಸರು ಭಾನುವಾರ ಬೆಳಗ್ಗೆ ಕಡೋದರ ಚೌಕದ ಬಳಿ ಇರುವ ಚೆಕ್ಪಾಯಿಂಟ್ನಲ್ಲಿ ವಾಹನಗಳ ಪರಿಶೀಲನೆ ನಡೆಸುತ್ತಿದ್ದಾಗ, ಮಧ್ಯಪ್ರದೇಶ ಮೂಲದ ಸುಧೀರ್ ಸಿಂಗ್ ಸೆಂಗರ್ ಮತ್ತು ರಜನೇಶ್ ಪಾಲ್ ಎಂಬಿಬ್ಬರು ಯುವಕರು ಬಸ್‌ನಿಂದ ಕೆಳಗೆ ಇಳಿದಿದ್ದಾರೆ. ಇವರ ಚಲನವಲನ ಗಮನಿಸಿದ ಪೊಲೀಸರು ಅವರ ಬ್ಯಾಗ್ ಪರಿಶೀಲಿಸಿದಾಗ 68.88 ಲಕ್ಷ ರೂಪಾಯಿ ನಗದು ಮತ್ತು 15 ಚಿನ್ನದ ಬಿಸ್ಕತ್‌ಗಳು ಪತ್ತೆಯಾಗಿವೆ.
ಇದನ್ನೂ ಓದಿ: ಮಂಗಳೂರು ವಿಮಾನ ನಿಲ್ದಾಣದಲ್ಲಿ 2 ಕೋಟಿ ರೂ ಮೌಲ್ಯದ ಚಿನ್ನ ವಶ
ಕೂಡಲೇ ಆರೋಪಿಗಳ ಸಮೇತ ನಗದು ಮತ್ತು ಚಿನ್ನವನ್ನು ವಶಪಡಿಸಿಕೊಂಡ ಪೊಲೀಸರು ತಕ್ಷಣವೇ ಚುನಾವಣಾಧಿಕಾರಿಗಳು ಮತ್ತು ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಿದರು. ಚಿನ್ನವನ್ನು ಎಲ್ಲಿಂದ ಸಂಗ್ರಹಿಸಿದರು? ಅದನ್ನು ಸೂರತ್‌ನಲ್ಲಿ ಯಾರಿಗೆ ತಲುಪಿಸಲು ಹೋಗುತ್ತಿದ್ದರು ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಇದನ್ನೂ ಓದಿ: ಪಾದರಕ್ಷೆ, ಬನಿಯಾನ್, ಗುದನಾಳದಲ್ಲೂ ಚಿನ್ನ..: 10 ದಿನ, ₹1.46 ಕೋಟಿಯ ಮಾಲು ವಶ