ETV Bharat / bharat

ಕ್ರಿಕೆಟ್​ ಬೆಟ್ಟಿಂಗ್​ ಜಾಲ ಬಯಲು: ದುಬೈನಿಂದ ಬುಕ್ಕಿಗಳ ಕಾರ್ಯಾಚರಣೆ, 1400 ಕೋಟಿ ವಹಿವಾಟು ಶಂಕೆ

ಕ್ರಿಕೆಟ್​ ಬುಕ್ಕಿಗಳು ಯಾರದ್ದೋ ಹೆಸರಲ್ಲಿ ನಕಲಿ ಬ್ಯಾಂಕ್​ಗಳನ್ನು ಸೃಷ್ಟಿಸಿ ಕೋಟ್ಯಂತರ ರೂಪಾಯಿ ವಹಿವಾಟು ನಡೆಸಿರುವ ಬೆಟ್ಟಿಂಗ್​ ಜಾಲವನ್ನು ಗುಜರಾತ್​ ಪೊಲೀಸರು ಪತ್ತೆ ಮಾಡಿದ್ದಾರೆ.

gujarat-police-probing-rs-1400-crore-transactions-by-bookies
ಕ್ರಿಕೆಟ್​ ಬೆಟ್ಟಿಂಗ್​ ಜಾಲ ಬಯಲು: ದುಬೈನಿಂದ ಬುಕ್ಕಿಗಳ ಕಾರ್ಯಾಚರಣೆ, 1400 ಕೋಟಿ ವಹಿವಾಟು ಶಂಕೆ
author img

By

Published : Feb 4, 2023, 9:07 PM IST

ಅಹಮದಾಬಾದ್ (ಗುಜರಾತ್): ಗುಜರಾತ್​ನಲ್ಲಿ ಬೃಹತ್​ ಕ್ರಿಕೆಟ್​ ಬೆಟ್ಟಿಂಗ್​ ಜಾಲವೊಂದು ಬಯಲಾಗಿದೆ. ಕ್ರಿಕೆಟ್​ ಬುಕ್ಕಿಗಳು ನಕಲಿ ಬ್ಯಾಂಕ್‌ಗಳನ್ನು ಖಾತೆ ತೆರೆದು 1,400 ಕೋಟಿ ರೂಪಾಯಿಗೂ ಅಧಿಕ ವಹಿವಾಟು ನಡೆಸಿದ ದಂಧೆಯನ್ನು ಅಹಮದಾಬಾದ್ ಅಪರಾಧ ವಿಭಾಗದ ಪೊಲೀಸರು ಪತ್ತೆಹಚ್ಚಿದ್ದಾರೆ. ಕೆಲವು ಬುಕ್ಕಿಗಳು ದುಬೈನಿಂದ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂಬುವುದನ್ನೂ ಪೊಲೀಸರು ಬಯಲು ಮಾಡಿದ್ದಾರೆ.

ಇದನ್ನೂ ಓದಿ: ಆನ್​ಲೈನ್​ ಗೇಮಿಂಗ್​ ಕಂಪೆನಿಗಳು ಬೆಟ್ಟಿಂಗ್​ನಲ್ಲಿ ಭಾಗವಹಿಸಲು ಅವಕಾಶವಿಲ್ಲ: ರಾಜೀವ್ ಚಂದ್ರಶೇಖರ್‌

ಕ್ರಿಕೆಟ್​ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ದೊಡ್ಡ ಬುಕ್ಕಿಗಳಾದ ರಾಕೇಶ್ ರಾಜ್‌ದೇವ್ ಅಲಿಯಾಸ್ ಆರ್‌ಆರ್ ಮತ್ತು ಟಾಮಿ ಪಟೇಲ್ ಸೇರಿದಂತೆ ಐವರನ್ನು ಪೊಲೀಸರು ಗುರುತಿಸಿದ್ದಾರೆ. ಈ ಬಗ್ಗೆ ಅಹಮದಾಬಾದ್ ಅಪರಾಧ ವಿಭಾಗದ ಉಪ ಪೊಲೀಸ್ ಆಯುಕ್ತ ಚೈತನ್ಯ ಮಾಂಡಲಿಕ್ ಮಾತನಾಡಿ, ಕ್ರಿಕೆಟ್​ ಬುಕ್ಕಿ 20 ವಿವಿಧ ಬ್ಯಾಂಕ್​ಗಳಲ್ಲಿ ನಕಲಿ ದಾಖಲೆಗಳ ಮೂಲಕ ನಕಲಿ ಖಾತೆಗಳನ್ನು ತೆರೆದು ಹಣದ ದಂಧೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.

ಇದರಲ್ಲಿ ಪ್ರಮುಖವಾಗಿ ಆಕಾಶ್ ಓಜಾ ಎಂಬುವರ ಹೆಸರಿನಲ್ಲಿ ಇಂಡೂಸಿಂಡ್ ಬ್ಯಾಂಕ್‌ನ ಓಧವ್ ಶಾಖೆಯಲ್ಲಿ ಬ್ಯಾಂಕ್ ಖಾತೆಯನ್ನು ತೆರೆಯಲಾಗಿದೆ. ಆಕಾಶ್ ಅವರ ಅನುಮತಿಯಿಲ್ಲದೆ ಈ ಬ್ಯಾಂಕ್ ಖಾತೆಯನ್ನು ತೆರೆಯಲಾಗಿದೆ. ಇದಕ್ಕೆ ಅವರ ಗುರುತಿನ ಚೀಟಿಗಳನ್ನೂ ಬಳಸಲಾಗಿದೆ. ಜೊತೆಗೆ ಆಕಾಶ್ ಓಜಾ ಅವರ ಸಹಿಯನ್ನು ನಕಲು ಮಾಡಲಾಗಿದೆ. ಈ ಬ್ಯಾಂಕ್ ಖಾತೆಯಿಂದ 2022ರ ಏಪ್ರಿಲ್ ಮತ್ತು ಜುಲೈ ತಿಂಗಳ ನಡುವೆ 170 ಕೋಟಿ ರೂಪಾಯಿ ವಹಿವಾಟು ನಡೆಸಲಾಗಿದೆ ಎಂದು ಡಿಸಿಪಿ ಹೇಳಿದ್ದಾರೆ.

ಆಕಾಶ್ ಓಜಾ ದಾಖಲೆಗಳ ಪಡೆದಿದ್ದು ಹೇಗೆ?: ಆಕಾಶ್ ಓಜಾ ಬ್ಯಾಂಕ್ ಸಾಲ ಪಡೆಯಲು ಬಂದಾಗ ಆರೋಪಿಗಳಲ್ಲಿ ಒಬ್ಬರಾದ ಆಶಿಕ್ ಅಲಿಯಾಸ್ ರವಿ ಪಟೇಲ್ ಮತ್ತು ಇನ್ನೊಬ್ಬ ಆರೋಪಿ ಕರ್ಮೇಶ್ ಪಟೇಲ್​ ಸಂಕರ್ಪಕ್ಕೆ ಬಂದಿದ್ದಾರೆ. ಇದೇ ವೇಳೆ, ಆಕಾಶ್ ಓಜಾ ವೈಯಕ್ತಿಕ ದಾಖಲೆಗಳನ್ನೂ ಈ ಖದೀಮರು ಪಡೆದುಕೊಂಡಿದ್ದಾರೆ. ನಂತರ ಇದೇ ದಾಖಲೆಗಳನ್ನು ಅನೇಕ ಬ್ಯಾಂಕ್​ಗಳಲ್ಲಿ ಖಾತೆಗಳನ್ನು ತೆರೆಯಲು ರವಿ, ಕರ್ಮೇಶ್, ರಾಕೇಶ್ ರಾಜ್‌ದೇವ್, ಖನ್ನಾಜಿ ಮತ್ತು ಹರಿಕೃಷ್ಣ ಪಟೇಲ್ ಬಳಸುತ್ತಿದ್ದರು ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಮಾಹಿತಿ ನೀಡಿದ್ದಾರೆ.

ದುಬೈಗೆ ಹಣ ವರ್ಗಾವಣೆ: ಅಷ್ಟೇ ಅಲ್ಲ, ಮೆಹುಲ್ ಪೂಜಾರ ಎಂಬ ಮತ್ತೊಬ್ಬ ಬುಕ್ಕಿ ಶ್ರೀಶಕ್ತಿ ಎಂಟರ್‌ಪ್ರೈಸ್, ನೋವಾ ಎಂಟರ್‌ಪ್ರೈಸ್ ಮತ್ತು ಇತರ ಹಲವು ಸಂಸ್ಥೆಗಳ ಹೆಸರಿನಲ್ಲಿ ಇಂತಹ ಹಲವು ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ ಎಂದೂ ಬಯಲಾಗಿದೆ. ಈ ಖಾತೆಗಳಿಂದ ಕನಿಷ್ಠ 1,414 ಕೋಟಿ ರೂಪಾಯಿ ವಹಿವಾಟು ನಡೆಸಲಾಗಿದೆ. ಬೆಟ್ಟಿಂಗ್​ ಹಣ ಪಾವತಿಗಾಗಿ ದುಬೈಗೆ ಈ ಹಣ ವರ್ಗಾವಣೆ ಮಾಡಲು ಈ ಖಾತೆಗಳನ್ನು ಬಳಸಲಾಗಿದೆ ಎಂಬುವುದಾಗಿ ಎಂದು ತಿಳಿದುಬಂದಿದೆ ಎಂದು ವಿವರಿಸಿದ್ದಾರೆ.

ಲುಕ್​ಔಟ್ ನೋಟಿಸ್ ಜಾರಿಗೆ ಸಿದ್ಧತೆ: ಸದ್ಯ ಕ್ರಿಕೆಟ್​ ಬೆಟ್ಟಿಂಗ್​ ಜಾಲದ ವಿರುದ್ಧ ಗುರುವಾರ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಇದರಿಂದ ಕೆಲವು ಬುಕ್ಕಿಗಳು ದುಬೈನಿಂದ ಕಾರ್ಯಾಚರಣೆ ನಡೆಸುತ್ತಿದ್ದರು ಎಂಬುವುದೂ ಪತ್ತೆಯಾದ ಹಿನ್ನೆಲೆಯಲ್ಲಿ ಇಂತಹ ಬುಕ್ಕಿಗಳ ವಿರುದ್ಧ ಲುಕ್​ಔಟ್ ನೋಟಿಸ್ ಜಾರಿ ಮಾಡುವಂತೆ ಪೊಲೀಸ್​ ಇಲಾಖೆಯು ಕೇಂದ್ರ ಗೃಹ ಸಚಿವಾಲಯಕ್ಕೆ ಮನವಿ ಸಹ ಸಲ್ಲಿಸಲು ಸಿದ್ಧತೆ ನಡೆಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: ಕ್ರಿಕೆಟ್​ ಬೆಟ್ಟಿಂಗ್​: ಅಡವು ಇಟ್ಟಿದ್ದ ಚಿನ್ನಾಭರಣ ಎಗರಿಸಿದ್ದ ಗೋಲ್ಡ್ ಫೈನ್ಸಾನ್ ಮ್ಯಾನೇಜರ್ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.