ETV Bharat / bharat

ಮೋರ್ಬಿ ದುರಂತದಲ್ಲಿ 141 ಸಾವು: 'ತುಂಟ ಮಕ್ಕಳು ಸೇತುವೆ ಅಲ್ಲಾಡಿಸುತ್ತಿದ್ದರು'

author img

By

Published : Oct 31, 2022, 5:15 PM IST

Updated : Oct 31, 2022, 6:41 PM IST

ಗುಜರಾತ್​ನ ಮೋರ್ಬಿಯಲ್ಲಿ ಭಾನುವಾರ ಸಂಭವಿಸಿದ ತೂಗು ಸೇತುವೆ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಮತ್ತಷ್ಟು ಏರಿಕೆಯಾಗಿದೆ. ಘಟನೆಯಲ್ಲಿ ಗಾಯಗೊಂಡವರನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.​

gujarat morbi bridge collapse death toll increased and injured treatment
ಗುಜರಾತ್​ ತೂಗು ಸೇತುವೆ ದುರಂತ : ಮೃತರ ಸಂಖ್ಯೆ 141ಕ್ಕೆ ಏರಿಕೆ

ಮೊರ್ಬಿ (ಗುಜರಾತ್): ಗುಜರಾತ್​​ ತೂಗು ಸೇತುವೆ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 141ಕ್ಕೆ ಏರಿಕೆಯಾಗಿದೆ. ದುರಂತದಲ್ಲಿ ಗಾಯಗೊಂಡವರನ್ನು ಮೋರ್ಬಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೊಂದೆಡೆ, ದುರಂತ ಸಂಭವಿಸಿದ ಮಚ್ಚು ನದಿಯಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಶ್ವಿನ್​ ಮೆಹ್ರಾ ಮಾತನಾಡಿ, ಘಟನೆ ನಿನ್ನೆ ಸಂಜೆ ಸುಮಾರು 6.30ಕ್ಕೆ ನಡೆಯಿತು. 15 ರಿಂದ 20 ತುಂಟ ಮಕ್ಕಳು ತೂಗು ಸೇತುವೆಯನ್ನು ಅಲ್ಲಾಡಿಸುತ್ತಿದ್ದರು. ಮೂರು ಬಾರಿ ಭಾರಿ ಪ್ರಮಾಣದ ಸದ್ದು ಕೇಳಿ ಬಂತು. ಬಳಿಕ ಒಮ್ಮಿಂದೊಮ್ಮೆಲೆ ಸೇತುವೆ ಮುರಿದುಬಿತ್ತು ಎಂದರು.

ನಾನು ಹತ್ತಿರದ ಮರಗಳ ಕೊಂಬೆಗಳನ್ನು ಹಿಡಿದುಕೊಂಡು ಬಚಾವಾದೆ. ನನ್ನೊಂದಿಗೆ ಸ್ನೇಹಿತ ಪ್ರಕಾಶ್ ಕೂಡ ಇದ್ದ. ಆತನ ಕಾಲು ಮತ್ತು ಬೆನ್ನಿಗೆ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಹೇಳಿದರು. ಗಾಯಾಳುಗಳಿಗೆ ಇಲ್ಲಿನ GMERS ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ : ಗುಜರಾತ್​ ತೂಗು ಸೇತುವೆ ದುರಂತ: ಮೋರ್ಬಿಗೆ ನಾಳೆ ಪ್ರಧಾನಿ ಮೋದಿ ಭೇಟಿ

Last Updated : Oct 31, 2022, 6:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.