ETV Bharat / bharat

ತಂದೆ, ಇಬ್ಬರು ಪುತ್ರಿಯರು, ಓರ್ವ ಮಗ ಆತ್ಮಹತ್ಯೆ - ಕುಟುಂಬದ ನಾಲ್ವರು ಆತ್ಮಹತ್ಯೆ

ತಂದೆ, ಇಬ್ಬರು ಪುತ್ರಿಯರು, ಓರ್ವ ಮಗ ಸೇರಿ ನಾಲ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುಜರಾತ್​ನ ಬೊಟಾಡ್ ಜಿಲ್ಲೆಯಲ್ಲಿ ವರದಿಯಾಗಿದೆ.

Gujarat: Man, two daughters, son end lives by jumping in front of train in Botad
ರೈಲಿಗೆ ಹಾರಿ ತಂದೆ, ಇಬ್ಬರು ಪುತ್ರಿಯರು, ಓರ್ವ ಮಗ ಆತ್ಮಹತ್ಯೆ
author img

By PTI

Published : Dec 31, 2023, 11:07 PM IST

ಬೊಟಾಡ್ (ಗುಜರಾತ್): ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುಜರಾತ್​ನ ಬೊಟಾಡ್ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ. ಮೃತರನ್ನ ತಂದೆ, ಇಬ್ಬರು ಪುತ್ರಿಯರು, ಓರ್ವ ಮಗ ಎಂದು ಗುರುತಿಸಲಾಗಿದೆ ಎಂದು ರೈಲ್ವೆ ರಕ್ಷಣಾ ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇಲ್ಲಿನ ನಿಂಗಲಾ ಮತ್ತು ಆಲಂಪುರ ರೈಲು ನಿಲ್ದಾಣಗಳ ನಡುವೆ ಭಾನುವಾರ ಸಂಜೆ 6:30ರ ಸುಮಾರಿಗೆ ಈ ಘಟನೆ ಜರುಗಿದೆ. ನಾಲ್ವರು ಕೂಡ ಭಾವನಗರದಿಂದ ಗಾಂಧಿಧಾಮ್‌ಗೆ ತೆರಳುತ್ತಿದ್ದ ಪ್ಯಾಸೆಂಜರ್ ರೈಲಿನ ಮುಂದೆ ಜಿಗಿದಿದ್ದಾರೆ. ಮೃತರನ್ನು ಮಂಗಾಭಾಯ್ ವಿಜುದಾ (42), ಈತನ ಪುತ್ರಿಯರಾದ ಸೋನಂ (17) ಮತ್ತು ರೇಖಾ (21) ಮತ್ತು ಮಗ ಜಿಗ್ನೇಶ್ (19) ಎಂದು ಗುರುತಿಸಲಾಗಿದೆ. ಇವೆಲ್ಲರೂ ಜಿಲ್ಲೆಯ ಗಧಾಡಾ ತಾಲೂಕಿನ ನಾನಾ ಸಖಪರ್ ಗ್ರಾಮದ ನಿವಾಸಿಗಳು ಎಂದು ರೈಲ್ವೆ ರಕ್ಷಣಾ ಪಡೆ ಸಬ್​ ಇನ್ಸ್‌ಪೆಕ್ಟರ್​ ವಿ.ಎಸ್.ಗೋಲೆ ಮಾಹಿತಿ ನೀಡಿದ್ದಾರೆ.

ಮಂಗಾಭಾಯ್ ಹಾಗೂ ಈತ ಸಂಬಂಧಿಕರೊಂದಿಗೆ ನಡುವೆ ಗಲಾಟೆ ನಡೆದಿತ್ತು. ಈ ಸಂಬಂಧ ಕೊಲೆ ಯತ್ನದ ಆರೋಪದ ಮೇಲೆ ಈತ ಬಂಧನಕ್ಕೆ ಒಳಗಾಗಿದ್ದರು. ನಂತರ ಜಾಮೀನಿನ ಮೇಲೆ ಹೊರಗೆ ಬಂದಿದ್ದರು. ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದಲೇ ರೈಲಿನ ಮುಂದೆ ಜಿಗಿದಿರುವ ಮಾಹಿತಿ ಲಭ್ಯವಾಗಿದೆ. ನಾಲ್ವರ ಶವಗಳು ರೈಲ್ವೆ ಹಳಿಗಳ ಉದ್ದಕ್ಕೂ ಪತ್ತೆಯಾಗಿವೆ ಎಂದು ಅವರು ವಿವರಿಸಿದ್ದಾರೆ. ಸದ್ಯ ಎಲ್ಲರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಲಾಗಿದೆ. ಆತ್ಮಹತ್ಯೆಗೆ ನಿಖರವಾದ ಕಾರಣವೇನು ಎಂಬುದರ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದೂ ಅಧಿಕಾರಿ ಹೇಳಿದ್ದಾರೆ.

ಕೇರಳದಲ್ಲಿ ಪತ್ನಿ ಕೊಂದು ಪತಿ ಆತ್ಮಹತ್ಯೆ: ಮತ್ತೊಂದೆಡೆ, ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ಭಾನುವಾರ ಬೆಳಗ್ಗೆ ವ್ಯಕ್ತಿಯೊಬ್ಬರು ಪತ್ನಿಯನ್ನು ಹತ್ಯೆ ನಂತರ ತಾನೂ ಕೂಡ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಪೊಲೀಸರ ಪ್ರಕಾರ, ಆರೋಪಿ ಮೊದಲಿಗೆ ತನ್ನ ಇಬ್ಬರು ಪುತ್ರಿಯರ ಮೇಲೆ ಹಲ್ಲೆ ಮಾಡಿದ್ದಾನೆ. ಇದೇ ವೇಳೆ, ಪತ್ನಿಯನ್ನೂ ಹೊಡೆದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ತಂದೆಯ ದಾಳಿಯಿಂದ ಗಾಯಗೊಂಡಿರುವ ಹೆಣ್ಣು ಮಕ್ಕಳನ್ನು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅದೃಷ್ಟವಶಾತ್ ಇವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡ ಪುತ್ರಿಯರು ಘಟನೆಯ ಬಗ್ಗೆ ನೆರೆಹೊರೆಯವರಿಗೆ ತಿಳಿಸಿದಾಗ ದುರ್ಘಟನೆ ಬೆಳಕಿಗೆ ಬಂದಿದೆ. ಸಂಪೂರ್ಣ ಘಟನೆ ಕುರಿತು ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.