ETV Bharat / bharat

IAS​ ಅಧಿಕಾರಿಯನ್ನೇ ಕೂಡಿಹಾಕಿ ಥಳಿಸಿ ಮುಚ್ಚಳಿಕೆ ಪತ್ರ ಬರೆಸಿಕೊಂಡ ಮೀನುಗಾರರು!

author img

By

Published : Mar 9, 2023, 8:51 AM IST

ಅಕ್ರಮ ಬಯಲಿಗೆಳೆಯಲು ಹೋದ ಅಧಿಕಾರಿಗಳೇ ಸಂಕಷ್ಟಕ್ಕೆ ಸಿಲುಕಿದ ಘಟನೆ ಗುಜರಾತ್​ನಲ್ಲಿ ನಡೆದಿದೆ. ಐಎಎಸ್​ ಅಧಿಕಾರಿ ಸೇರಿ ಇತರರನ್ನು ಮೀನುಗಾರರು ಕೂಡಿಹಾಕಿ ಥಳಿಸಿದ್ದಾರೆ.

ಅಧಿಕಾರಿ ಕೂಡಿಹಾಕಿ ಥಳಿಸಿದ ಮೀನುಗಾರರು
ಅಧಿಕಾರಿ ಕೂಡಿಹಾಕಿ ಥಳಿಸಿದ ಮೀನುಗಾರರು

ಹಿಮ್ಮತ್‌ನಗರ (ಗುಜರಾತ್): ಮೀನುಗಾರಿಕೆ ಯೋಜನೆಯ ಪರಿಶೀಲನೆಗೆ ಹೋಗಿದ್ದ ಭಾರತೀಯ ಆಡಳಿತ ಸೇವೆ (ಐಎ​ಎಸ್)​ ಅಧಿಕಾರಿಯನ್ನೇ ಕೆಲವು ಮೀನುಗಾರರು ಒತ್ತೆಯಾಳಾಗಿಟ್ಟುಕೊಂಡು, ಥಳಿಸಿದ ಘಟನೆ ಗುಜರಾತ್​ನಲ್ಲಿ ನಡೆದಿದೆ. ಅಲ್ಲದೇ, ತಮ್ಮ ವಿರುದ್ಧ ದೂರು ನೀಡದಂತೆ ಸ್ಥಳದಲ್ಲೇ ಅಧಿಕಾರಿಗಳಿಂದ ಮುಚ್ಚಳಿಕೆ ಪತ್ರವನ್ನೂ ಬರೆಸಿಕೊಂಡಿದ್ದಾರೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ.

ನಿತಿನ್ ಸಾಂಗ್ವಾನ್ ಹಲ್ಲೆಗೊಳಗಾದ ಅಧಿಕಾರಿ. ಸಬರ್​ಕಾಂತ್​ ಜಿಲ್ಲೆಯ ಧರೋಯ್ ಅಣೆಕಟ್ಟಿನ ಸಮೀಪವಿರುವ ಅಂಬಾವಾಡ ಗ್ರಾಮಕ್ಕೆ ನಿತಿನ್​ ಭೇಟಿ ನೀಡಿದಾಗ ಮೀನುಗಾರಿಕೆ ಚಟುವಟಿಕೆಯಲ್ಲಿ ತೊಡಗಿದ್ದ ವ್ಯಕ್ತಿಗಳ ಗುಂಪೊಂದು ಅವರನ್ನು ಒತ್ತೆಯಾಳಾಗಿ ಇರಿಸಿಕೊಂಡು ಥಳಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೀನುಗಾರಿಕೆ ಯೋಜನೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ಪತ್ತೆ ಹಚ್ಚಿದ ಕಾರಣಕ್ಕಾಗಿ ಅಧಿಕಾರಿಯ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಶಂಕಿಸಲಾಗಿದೆ.

ಯೋಜನೆ ಏನು?: ಸಾಬರಮತಿ ನದಿಗೆ ನಿರ್ಮಿಸಲಾದ ಧರೋಯ್ ಅಣೆಕಟ್ಟಿನ ಸಮೀಪವಿರುವ ಅಂಬಾವಾಡ ಗ್ರಾಮದಲ್ಲಿ ರಾಜ್ಯ ಸರ್ಕಾರ "ಕೇಜ್ ಕಲ್ಚರ್ ಮೀನುಗಾರಿಕೆ" ಯೋಜನೆಯನ್ನು ಪ್ರಾರಂಭಿಸಿದೆ. ಇದರಿಂದ ಮೀನುಗಾರಿಕೆ ನಡೆಸುತ್ತಿರುವ ಗುತ್ತಿಗೆದಾರರಿಗೆ ಅನುದಾನ ನೀಡಲಾಗುತ್ತದೆ. ಆದರೆ, ಯೋಜನೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಮೇಲೆ ಮೀನುಗಾರಿಕಾ ನಿರ್ದೇಶಕರಾಗಿರುವ ಸಾಂಗ್ವಾನ್ ಅವರು ಮಾರ್ಚ್ 6 ರಂದು ಇತರೆ ಅಧಿಕಾರಿಗಳೊಂದಿಗೆ ಅಂಬಾವಾಡ ಗ್ರಾಮಕ್ಕೆ ಭೇಟಿ ನೀಡಿದ್ದರು.

ಇದನ್ನೂ ಓದಿ: ನಡು ರಸ್ತೆಯಲ್ಲೇ ಬಡಿದಾಡಿಕೊಂಡ ಯುವತಿಯರು - ವಿಡಿಯೋ

ಮೀನುಗಾರಿಕೆ ಯೋಜನೆಯ ಪರಿಶೀಲನೆಯ ವೇಳೆ ಗುತ್ತಿಗೆದಾರರ ಗುಂಪೊಂದು ಅಧಿಕಾರಿಗಳ ಮೇಲೆಯೇ ದಾಳಿ ಮಾಡಿದೆ. ಯೋಜನೆಯ ಅಕ್ರಮವನ್ನು ಬಯಲಿಗೆಳೆಯದಂತೆ ಒತ್ತೆಯಾಳಾಗಿರಿಸಿಕೊಂಡು ಬೆದರಿಕೆ ಹಾಕಿದ್ದಾರೆ. ಸಾಂಗ್ವಾನ್​ ಸೇರಿದಂತೆ ಇತರೆ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿ ಗಾಯಗೊಳಿಸಿದ್ದಾರೆ. ಬಳಿಕ ಇಲ್ಲಿಂದ ತೆರಳಿದ ಮೇಲೆ ಘಟನೆಗೆ ಸಂಬಂಧಿಸಿದಂತೆ ದೂರು ನೀಡುವುದಿಲ್ಲ ಎಂದು ಅಧಿಕಾರಿಯಿಂದಲೇ ಮುಚ್ಚಳಿಕೆ ಬರೆಸಿಕೊಂಡಿದ್ದಾರೆ.

ಅಣೆಕಟ್ಟೆಗೆ ಎಸೆಯುವುದಾಗಿ ಬೆದರಿಕೆ: ಮೀನುಗಾರಿಕೆ ಗುತ್ತಿಗೆದಾರರಲ್ಲಿ ಒಬ್ಬ ಮೊದಲು ಅಧಿಕಾರಿಗಳ ಜೊತೆಗೆ ಅನುದಾನದ ವಿಷಯದಲ್ಲಿ ವಾಗ್ವಾದಕ್ಕೆ ಇಳಿದಿದ್ದಾನೆ. ಅದು ತಾರಕಕ್ಕೇರಿ ಅಧಿಕಾರಿಯ, ಮೇಲೆ ಹಲ್ಲೆ ಮಾಡಿ ಕಚ್ಚಿದ್ದಾನೆ. ಅಲ್ಲಿದ್ದ ಉಳಿದ ಮೀನುಗಾರರ ಗುಂಪು ಕೂಡ ಕೋಲುಗಳಿಂದ ಹಲ್ಲೆಗೆ ಮುಂದಾಗಿದ್ದಾರೆ. ಬಳಿಕ ಐಎಎಸ್​ ಅಧಿಕಾರಿ ಸೇರಿದಂತೆ ಎಲ್ಲರನ್ನೂ ಕಟ್ಟಿಹಾಕಿದ್ದಾರೆ. ಅಕ್ರಮದ ಬಗ್ಗೆ ಬಾಯ್ಬಿಟ್ಟರೆ ಧರೋಯ್ ಅಣೆಕಟ್ಟೆಗೆ ಎಸೆಯುವುದಾಗಿ ಬೆದರಿಕೆ ಹಾಕಿದ್ದಾರೆ. ದೂರು ನೀಡಿದಲ್ಲಿ ಹತ್ಯೆ ಮಾಡುವುದಾಗಿಯೂ ಹೆದರಿಸಿದ ಆರೋಪಿಗಳು ಬಳಿಕ ಅಧಿಕಾರಿಗಳನ್ನು ಅಲ್ಲಿಂದ ಬಿಟ್ಟು ಕಳುಹಿಸಿದ್ದಾರೆ.

ಅಲ್ಲಿಂದ ತಪ್ಪಿಸಿಕೊಂಡ ಅಧಿಕಾರಿಗಳು ಠಾಣೆಗೆ ಬಂದು ದೂರು ನೀಡಿದ್ದಾರೆ. ವಡಾಲಿ ಪೊಲೀಸರು ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಠಾಣೆಗೆ ಕರೆಯಿಸಿಕೊಂಡು ವಿಚಾರಣೆ ನಡೆಸಿದ್ದಾರೆ. ದಿಲೀಪ್ ಪರ್ಮಾರ್, ನೀಲೇಶ್ ಗಮಾರ್ ಮತ್ತು ವಿಷ್ಣು ಗಮಾರ್ ಎಂಬ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಅಪರಾಧದಲ್ಲಿ ಭಾಗಿಯಾಗಿರುವ ಮೂವರನ್ನು ಈಗಾಗಲೇ ಬಂಧಿಸಲಾಗಿದ್ದು, ಇತರ ಆರೋಪಿಗಳ ಬಂಧನಕ್ಕೆ ಜಾಲ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಕ್ಯಾಲಿಫೋರ್ನಿಯಾದಿಂದ ಬೆಂಗಳೂರಿಗೆ ಬಂದಿಳಿದ ನಿಸಾರ್ ಉಪಗ್ರಹ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.