ಗಾಂಧಿನಗರ(ಗುಜರಾತ್): ರೈತರ ಸ್ಮಾರ್ಟ್‌ಫೋನ್ ಸಬ್ಸಿಡಿ ಯೋಜನೆಯಡಿ ಗುಜರಾತ್ ಸರ್ಕಾರವು ರಾಜ್ಯಾದ್ಯಂತ ರೈತರಿಗೆ ಸ್ಮಾರ್ಟ್‌ಫೋನ್‌ಗಳನ್ನು ವಿತರಿಸಲು ಸಿದ್ಧವಾಗಿದೆ ಎಂದು ಕೃಷಿ ಸಚಿವ ರಾಘವ್‌ಜಿ ಪಟೇಲ್ ಹೇಳಿದ್ದಾರೆ. ಕೃಷಿ ಇಲಾಖೆಯಿಂದ ಬಂದ ಮಾಹಿತಿಯ ಪ್ರಕಾರ, ರೈತರು i-khedut ಪೋರ್ಟಲ್‌ನಲ್ಲಿ ಆನ್‌ಲೈನ್‌ನಲ್ಲಿ ಮಾರ್ಚ್ 31, 2022ರ ತನಕ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ.
ರೈತರು 15,000 ಅಥವಾ 6,000 ರೂಪಾಯಿ ಮೌಲ್ಯದ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಲು ಸರ್ಕಾರ ಸಬ್ಸಿಡಿಯನ್ನು ಹೆಚ್ಚಿಸಿದೆ. ಹೆಚ್ಚಿನ ರೈತರು ಅರ್ಜಿ ಸಲ್ಲಿಸಿದ್ರೆ, ಯೋಜನೆಯನ್ನು ರಾಜ್ಯ ಸರ್ಕಾರ ವಿಸ್ತರಿಸಲಿದೆ. ಮೊಬೈಲ್ಗೆ ಶೇ.10ರಷ್ಟು ಸಬ್ಸಿಡಿ ಸಿಗಲಿದೆ ಎಂದು ಕೃಷಿ ಸಚಿವ ರಾಘವ್‌ಜಿ ಪಟೇಲ್ ಹೇಳಿದ್ದಾರೆ. ಇದುವರೆಗೆ ಸುಮಾರು 40,000 ರೈತರು ಮಾತ್ರ ಸ್ಮಾರ್ಟ್‌ಫೋನ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ.
ಪೋರಬಂದರ್ ಜಿಲ್ಲೆಯ ರೈತರಿಗೆ ಸ್ಮಾರ್ಟ್‌ಫೋನ್ ಖರೀದಿಗೆ ಗುಜರಾತ್ ಸರ್ಕಾರ ಆರ್ಥಿಕ ನೆರವು ನೀಡಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮಂಜುಬೆನ್ ಕರವಾಡ ತಿಳಿಸಿದ್ದಾರೆ. ರೈತರು ಮೊಬೈಲ್ ಮೂಲಕ ರೈತಪರ ಕಾರ್ಯಕ್ರಮಗಳ ಮಾಹಿತಿ ಪಡೆಯಬಹುದಾಗಿದೆ ಎಂದರು.
ಸ್ಮಾರ್ಟ್ಫೋನ್ನಿಂದ ರೈತರಿಗೇನು ಉಪಯೋಗ?
ಹವಾಮಾನ ಇಲಾಖೆಯ ಮುನ್ಸೂಚನೆ, ಮಳೆಯ ಮುನ್ಸೂಚನೆ, ಕೀಟಗಳ ಮಾಹಿತಿ ಮತ್ತು ನಿರ್ವಹಣೆ ವಿಧಾನದಂತಹ ಮಾಹಿತಿಯನ್ನು ಪಡೆಯಲು ಸ್ಮಾರ್ಟ್ಫೋನ್ನನ್ನು ಬಳಸಬಹುದಾಗಿದೆ. ಮೊಬೈಲ್ ಮೂಲಕ ಸರ್ಕಾರದ ವಿವಿಧ ಕಾರ್ಯಕ್ರಮಗಳ ಬಗ್ಗೆ ತಿಳಿದುಕೊಳ್ಳಬಹುದಾಗಿದೆ.