ETV Bharat / bharat

ಅತ್ಯಾಚಾರ ಪ್ರಕರಣ: ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪುಗೆ ಜೀವಾವಧಿ ಶಿಕ್ಷೆ

ಅತ್ಯಾಚಾರ ಪ್ರಕರಣದಲ್ಲಿ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪುಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

author img

By

Published : Jan 31, 2023, 4:03 PM IST

Updated : Jan 31, 2023, 4:34 PM IST

ಅಸಾರಾಂ ಬಾಪುಗೆ ಜೀವಾವಧಿ ಶಿಕ್ಷೆ
ಅಸಾರಾಂ ಬಾಪುಗೆ ಜೀವಾವಧಿ ಶಿಕ್ಷೆ

ಗಾಂಧಿನಗರ (ಗುಜರಾತ್​): 2013ರ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪುಗೆ ಗುಜರಾತ್​ನ ಗಾಂಧಿನಗರದ ಸೆಷನ್ಸ್ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ಅಲ್ಲದೇ, ಈ ಪ್ರಕರಣದ ಸಂತ್ರಸ್ತರಿಗೆ 50 ಸಾವಿರ ರೂಪಾಯಿ ಪರಿಹಾರ ನೀಡಬೇಕೆಂದು ಕೋರ್ಟ್​ ಆದೇಶಿಸಿದೆ.

2013ರ ಆಗಸ್ಟ್ 15ರ ರಾತ್ರಿ ಜೋಧ್‌ಪುರ ಸಮೀಪದ ಮನೈ ಪ್ರದೇಶದಲ್ಲಿ ತಮ್ಮ ಆಶ್ರಮದಲ್ಲಿ ಅಪ್ರಾಪ್ತೆಯ ಮೇಲೆ ಮತ್ತೊಂದು ಅತ್ಯಾಚಾರ ಪ್ರಕರಣದಲ್ಲಿ ಅಸಾರಾಂ ಈಗಾಗಲೇ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾನೆ. ಇದೇ 2013ರಲ್ಲಿ ಅಸಾರಾಂ ಬಾಪುವಿನ ಮೇಲೆ ಮಾಜಿ ಮಾಹಿಳಾ ಶಿಷ್ಯೆ ಕೂಡ ಅತ್ಯಾಚಾರ ಆರೋಪ ಪ್ರಕರಣ ದಾಖಲಿಸಿದ್ದರು. ಇದೀಗ ಈ ಪ್ರಕರಣದಲ್ಲೂ ಅಸಾರಾಂ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾರೆ. ಸೋಮವಾರಷ್ಟೇ ಈ ಪ್ರಕರಣದಲ್ಲಿ ಅಸಾರಾಂ ಅವರನ್ನು ಕೋರ್ಟ್​ ದೋಷಿ ಎಂದು ಪ್ರಕಟಿಸಿತ್ತು.

ಪ್ರಕರಣದ ಹಿನ್ನೆಲೆ: 81 ವರ್ಷದ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ಈಗಾಗಲೇ ಅಪ್ರಾಪ್ತೆಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಜೋಧ್‌ಪುರ ಜೈಲಿನಲ್ಲಿದ್ದಾನೆ. 2001ರಿಂದ 2006ರ ನಡುವೆ ಗುಜರಾತ್​ನ ಅಹಮದಾಬಾದ್ ಬಳಿಯ ಮೊಟೆರಾದಲ್ಲಿರುವ ಅಸಾರಾಂ ಬಾಪು ಆಶ್ರಮದಲ್ಲಿ ವಾಸಿಸುತ್ತಿದ್ದ ಸೂರತ್‌ ಮೂಲದ ಶಿಷ್ಯೆಯ ಮೇಲೆ ಹಲವಾರು ಸಂದರ್ಭಗಳಲ್ಲಿ ಅತ್ಯಾಚಾರವೆಸಗಿದ ಆರೋಪವು ಅಸಾರಾಂ ಮೇಲಿತ್ತು. ಈ ಕುರಿತಂತೆ 2013ರಲ್ಲಿ ಶಿಷ್ಯೆ ಅತ್ಯಾಚಾರ ಮತ್ತು ಅಕ್ರಮ ಬಂಧನದ ಕೇಸ್​ ದಾಖಲಿಸಿದ್ದರು.

ಈ ಪ್ರಕರಣದಲ್ಲಿ ಗುಜರಾತ್​ನ ಗಾಂಧಿನಗರದ ಸೆಷನ್ಸ್ ಕೋರ್ಟ್​ ಸೋಮವಾರ ಅಸಾರಾಂನನ್ನು ದೋಷಿ ಎಂದು ತೀರ್ಪು ನೀಡಿತ್ತು. ಇಂದು ನ್ಯಾಯಾಧೀಶ ಡಿ.ಕೆ.ಸೋನಿ ಅವರು ಶಿಕ್ಷೆಯ ಪ್ರಮಾಣದ ಬಗ್ಗೆ ವಾದ ಆಲಿಸಿದ ನಂತರ ಜೀವಾವಧಿ ಶಿಕ್ಷೆ ವಿಧಿಸುವ ತೀರ್ಪು ಪ್ರಕಟಿಸಿದರು.

ಭಾರತೀಯ ದಂಡ ಸಂಹಿತೆ 376 - 2 (ಸಿ) (ಅತ್ಯಾಚಾರ), 377 (ಅಸ್ವಾಭಾವಿಕ ಅಪರಾಧಗಳು), 342 ( ಕಾನೂನುಬಾಹಿರ ಬಂಧನ), 354 (ಕೆರಳಿಸುವ ಉದ್ದೇಶದಿಂದ ಹಲ್ಲೆ ಅಥವಾ ಕ್ರಿಮಿನಲ್ ಪ್ರಹಾರ), 357 (ಹಲ್ಲೆ) ಮತ್ತು ಮತ್ತು 506 (ಬೆದರಿಕೆ) ಅಡಿಯಲ್ಲಿ ಅಸಾರಾಂಅನ್ನು ನ್ಯಾಯಾಲಯವು ದೋಷಿ ಎಂದು ತೀರ್ಪು ನೀಡಿತ್ತು.

ಮತ್ತೊಂದೆಡೆ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ನ್ಯಾಯಾಲಯವು ಅಸಾರಾಂ ಅವರ ಪತ್ನಿ ಸೇರಿದಂತೆ ಇತರ ಆರು ಆರೋಪಿಗಳನ್ನು ಖುಲಾಸೆಗೊಳಿಸಿತ್ತು. ಇವರಲ್ಲಿ ಒಬ್ಬರು ವಿಚಾರಣೆಯ ಬಾಕಿ ಇರುವಾಗಲೇ ಎಂದರೆ 2013ರ ಅಕ್ಟೋಬರ್​ ತಿಂಗಳಲ್ಲಿ ಸಾವನ್ನಪ್ಪಿದರು. ಈ ಪ್ರಕರಣದಲ್ಲಿ 2014ರ ಜುಲೈ ತಿಂಗಳಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿತ್ತು.

ಅಪರಾಧಿ ಅಸಾರಾಂ ಬಾಪು ಎದೆನೋವು ಸೇರಿದಂತೆ ಮತ್ತಿತರ ಕಾಯಿಲೆಗಳಿಂದ ಬಳಲುತ್ತಿದ್ದಾನೆ. ಕಳೆದ ಎಂಟು ವರ್ಷಗಳಿಂದಲೂ ಜೈಲಿನಲ್ಲಿದ್ದು, ಈ ಹಿಂದೆ ಜೈಲಿನಲ್ಲೇ ಕೋವಿಡ್​ ಸೋಂಕಿಗೂ ಒಳಗಾಗಿದ್ದ. ಕೆಲ ತಿಂಗಳ ಹಿಂದೆ ಜೋಧಪುರದ ಸೆಂಟ್ರಲ್ ಜೈಲಿನಲ್ಲಿ ಅಸಾರಾಂ ನೃತ್ಯ ಮಾಡಿರುವ ವಿಡಿಯೋ ಆಗಿತ್ತು. ಸತ್ಸಂಗದ ಸಮಯದಲ್ಲಿ ಧರಿಸುತ್ತಿದ್ದ ವೇಷಭೂಷಣದಲ್ಲಿ ತುಂಬಾ ಉತ್ಸಾಹ ಭರಿತರಾಗಿಯೇ ಭಜನಾ ಹಾಡುಗಳಿಗೆ ನೃತ್ಯ ಮಾಡಿದ್ದ ಮತ್ತು ಸಹ ಕೈದಿಗಳು ಬಾಪುನೊಂದಿಗೆ ಕುಣಿದಿದ್ದ ವಿಡಿಯೋ ಇದಾಗಿತ್ತು.

ಇದನ್ನೂ ಓದಿ: ಸೆಂಟ್ರಲ್ ಜೈಲಿನಲ್ಲಿ ಭಜನೆ, ಡಾನ್ಸ್​: ಅಸಾರಾಮ ನೃತ್ಯದ ವಿಡಿಯೋ ವೈರಲ್

Last Updated : Jan 31, 2023, 4:34 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.