ಅಹಮದಾಬಾದ್: ದ್ವಾರಕ ವಿಧಾನಸಭಾ ಕ್ಷೇತ್ರ ಗುಜರಾತ್ನ ಬಿಜೆಪಿಯ ಪ್ರಮುಖ ಸುರಕ್ಷಿತ ಸ್ಥಾನಗಳಲ್ಲಿ ಒಂದು. ಈ ಕ್ಷೇತ್ರದಲ್ಲಿ ಬಿಜೆಪಿ ನಾಯಕ ಪಬೂಭಾ ವಿರಂಭ ಮಾಣೆಕ್ ಮುನ್ನಡೆ ಸಾಧಿಸಿದ್ದಾರೆ. ಕ್ಷೇತ್ರದಲ್ಲಿ ಈಗಾಗಲೇ ತಮ್ಮ ಸ್ಥಾನವನ್ನು ಭದ್ರಮಾಡಿಕೊಂಡಿರುವ ಅವರು, ಈ ಬಾರಿ ಕೂಡ ಗೆಲುವು ಸಾಧಿಸುವ ವಿಶ್ವಾಸವನ್ನು ಹೊಂದಿದ್ದಾರೆ.
ಮಾಣಿಕ್ ಅವರಿಗೆ ಎದುರಾಳಿಯಾಗಿ ಕಾಂಗ್ರೆಸ್ನಿಂದ ಮಲುಬಾಯಿ ಕಂಡೊರಿಯ ಮತ್ತು ಆಮ್ ಆದ್ಮಿ ಪಕ್ಷದ ನಕುಮ್ ಲಕ್ಮನ್ಬಾಯಿ ಕಣದಲ್ಲಿದ್ದಾರೆ. ದ್ವಾರಕಾ ತಾಲೂಕಿನ ಎಲ್ಲ ಮೂರು ಜಿಲ್ಲಾ ಪಂಚಾಯಿತಿ ಸ್ಥಾನಗಳಲ್ಲಿ ಬಿಜೆಪಿ ಸದಸ್ಯರು ಆಯ್ಕೆಯಾಗಿದ್ದು, ಪುರಸಭೆಯಲ್ಲಿ ಕೂಡ ಬಿಜೆಪಿ ಆಡಳಿತ ನಡೆಸುತ್ತಿದೆ.
ಪಬುಭಾ ಮಾಣೆಕ್ 1990 ರಲ್ಲಿ ಮೊದಲ ಬಾರಿಗೆ ದ್ವಾರಕಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು. ಅಂದಿನಿಂದ ಪಬುಭಾ ಈ ಕ್ಷೇತ್ರದಿಂದ ಚುನಾವಣೆಯಲ್ಲಿ ಸೋತಿಲ್ಲ, 1990 ರ ನಂತರ, ಪಬುಭಾ ಮಾಣೆಕ್ 1995 ಮತ್ತು 1998 ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಗೆದ್ದಿದ್ದರು. ನಂತರ 2002 ರಲ್ಲಿ, ಪಬುಭಾ ಮಾಣೆಕ್ ಕಾಂಗ್ರೆಸ್ ಟಿಕೆಟ್ ಪಡೆದು ಗೆಲುವು ಸಾಧಿಸಿದರು. ಬಿಜೆಪಿ ಸೇರ್ಪಡನೆಗೊಂಡ ಅವರು 2007 ಮತ್ತು 2017ರಲ್ಲೂ ಕೂಡ ತಮ್ಮ ಗೆಲುವಿನ ಓಟ ಮುಂದುವರೆಸಿದ್ದಾರೆ.
ಇದನ್ನೂ ಓದಿ: ಗುಜರಾತ್ನಲ್ಲಿ ಬಿಜೆಪಿ 135 ರಿಂದ 145 ಸ್ಥಾನ ಗೆಲ್ಲಲಿದೆ: ಭವಿಷ್ಯ ನುಡಿದ ಹಾರ್ದಿಕ್ ಪಟೇಲ್