ETV Bharat / bharat

ಗುಜರಾತ್​ನಲ್ಲಿ ತ್ರಿಕೋನ ಸ್ಪರ್ಧೆ: ಎಎಪಿ ಶೇ 6 ರಷ್ಟು ಮತ ಪಡೆದರೆ ರಾಷ್ಟ್ರೀಯ ಪಕ್ಷಗಳಿಗೆ ಸಂಕಷ್ಟ!

ಗುಜರಾತ್​ ಚುನಾವಣಾ ಕಣದ ಬಿಸಿ ಎಲ್ಲೆಡೆ ವ್ಯಾಪಿಸಿದೆ. ಆಡಳಿತಾರೂಢ ಬಿಜೆಪಿಗೆ ಇದು ಪ್ರತಿಷ್ಠೆಯ ಕಣವಾಗಿದ್ದರೆ, ಕಾಂಗ್ರೆಸ್​ ಅಧಿಕಾರಕ್ಕೇರಲು ಶ್ರಮಿಸುತ್ತಿದೆ. ದೆಹಲಿ, ಪಂಜಾಬ್​​ನಲ್ಲಿ ಬಾವುಟ ಹಾರಿಸಿರುವ ಆಪ್​ ದೆಹಲಿಗೂ ಲಗ್ಗೆ ಇಡಲು ತಂತ್ರ ರೂಪಿಸುತ್ತಿದೆ.

gujarat-election-information
ಗುಜರಾತ್​ನಲ್ಲಿ ತ್ರಿಕೋನ ಸ್ಪರ್ಧೆ
author img

By

Published : Nov 12, 2022, 11:02 PM IST

ಸೂರತ್(ಗುಜರಾತ್​): ಗುಜರಾತ್​ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ದಟ್ಟವಾಗಿದೆ. ಕಾಂಗ್ರೆಸ್​, ಬಿಜೆಪಿ ಮತ್ತು ಎಎಪಿ ಪಕ್ಷಗಳು ಈ ಬಾರಿ ರಣಕಣದಲ್ಲಿವೆ. ಮತ್ತೆ ಅಧಿಕಾರಕ್ಕೆ ಬಂದು ಗೆಲುವಿನ ದಾಖಲೆ ಮಾಡಲು ಬಿಜೆಪಿ ತಂತ್ರ ಹೂಡಿದ್ದರೆ, ರಾಜ್ಯದಲ್ಲಿ ಚಿಗುರುತ್ತಿರುವ ಕಾಂಗ್ರೆಸ್​ ಅಧಿಕಾರಕ್ಕೆ ಬರಲು ಹವಣಿಸುತ್ತಿದೆ. ಈ ಮಧ್ಯೆ ಅರವಿಂದ್​ ಕೇಜ್ರಿವಾಲ್​ ನೇತೃತ್ವದ ಆಮ್​ ಆದ್ಮಿ ಪಕ್ಷ ಕಮಾಲ್​ ಮಾಡಲು ಕಣಕ್ಕಿಳಿದಿದೆ.

ಚುನಾವಣೆಯಲ್ಲಿ ಪಕ್ಷದ ಗೆಲುವು ಎಷ್ಟು ಮುಖ್ಯವೋ, ಅಷ್ಟೇ ಪ್ರತಿ ಅಭ್ಯರ್ಥಿಗಳ ಗೆಲುವೂ ಪ್ರಮುಖವೇ. ಇದರಲ್ಲಿ ಗೆಲ್ಲುವ ಅಭ್ಯರ್ಥಿಗಳಿಗೆ ಮಾತ್ರ ಎಲ್ಲ ಪಕ್ಷಗಳು ಮಣೆ ಹಾಕುತ್ತವೆ. ಕೆಲವೊಮ್ಮೆ ಎಲ್ಲ ಪಕ್ಷಗಳು ಅನಿವಾರ್ಯವಾಗಿ ಒತ್ತಡ, ಪ್ರಭಾವ ಮತ್ತು ಜಾತಿ ಆಧಾರದ ಮೇಲೆ ಸೋತ ಅಭ್ಯರ್ಥಿಗೆ ಮತ್ತೆ ಮಣೆ ಹಾಕುತ್ತವೆ. ಇದರಲ್ಲಿ ಕಾಂಗ್ರೆಸ್​ ಮುಂದಿದ್ದರೆ, ಬಿಜೆಪಿ ಕೂಡ ಇದೇ ಹಾದಿಯಲ್ಲಿದೆ.

1995 ರಿಂದ ಸೋತ ಅಭ್ಯರ್ಥಿಗೆ ಕಾಂಗ್ರೆಸ್​ ಈ ಬಾರಿ ಮಣೆ ಹಾಕಿರುವುದು ಕಾರ್ಯಕರ್ತರು ಮತ್ತು ಮತದಾರರಿಗೆ ಅಚ್ಚರಿ ಉಂಟು ಮಾಡಿದೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಧನ್ಸುಖ್ ರಜಪೂತ್ ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಸೋತು ಭಾರೀ ಮುಖಭಂಗ ಅನುಭವಿಸಿದ್ದರು. ಈ ಬಾರಿಯ ಕದನಕ್ಕೂ ಪಕ್ಷ ಅವರನ್ನೇ ಕಣಕ್ಕಿಳಿಸಿದೆ. ಸೋತಿರುವ ಧನ್‌ಸುಖ್ ರಜಪೂತ್ ಕಣಕ್ಕಿಳಿದಿರುವುದು ಸಾರ್ವಜನಿಕರು ಮತ್ತು ಕಾರ್ಯಕರ್ತರನ್ನು ಬೆಚ್ಚಿ ಬೀಳುವಂತೆ ಮಾಡಿದೆ.

ಕಠಿಣ ಸ್ಪರ್ಧೆ ಎದುರಿಸುತ್ತಿರುವ ರಾಜ್ಯದಲ್ಲಿ ಕಾಂಗ್ರೆಸ್​ನ ಈ ನಡೆ ಅಚ್ಚರಿಗೆ ಕಾರಣವಾಗಿದೆ. ಇದು ಪಕ್ಷ ಅವರ ಮೇಲೆ ವಿಶ್ವಾಸ ಇರಿಸಿರುವ ದ್ಯೋತಕವಾಗಿದೆ. ರಜಪೂತ್​ ಕೂಡ ಪಕ್ಷಕ್ಕೆ ನಿಷ್ಟರಾಗಿರುವುದು ಟಿಕೆಟ್​ ಒಲಿದು ಬರಲು ಕಾರಣವಾಗಿದೆ. ಇದರಲ್ಲಿ ಬಿಜೆಪಿ, ಎಎಪಿ ಕೂಡ ಹಿಂದೆ ಬಿದ್ದಿಲ್ಲ ಎಂದೇ ಹೇಳಬಹುದು.

16 ಸೋತ ಅಭ್ಯರ್ಥಿಗಳಿಗೆ ಬಿಜೆಪಿ ಟಿಕೆಟ್​: ಹಾಲಿ ಸಚಿವರು, ಹಿರಿಯರಿಗೆ ಟಿಕೆಟ್​ ನಿರಾಕರಿಸಿ ಸಂಚಲನ ಮೂಡಿಸಿರುವ ಗುಜರಾತ್​ ಬಿಜೆಪಿ ಈ ಬಾರಿ ಹೊಸ ಮುಖಗಳಿಗೆ ಮಣೆ ಹಾಕಲು ರಣತಂತ್ರ ರೂಪಿಸಿದೆ. ಅದರಲ್ಲೂ ದಾಖಲೆಯ ಗೆಲುವಿನ ಮೇಲೆ ಕಣ್ಣಿಟ್ಟಿರುವ ಪಕ್ಷ ಶತಾಯಗತಾಯ ಗೆಲ್ಲುವ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದೆ. ಅದರಲ್ಲಿ 16 ಅಭ್ಯರ್ಥಿಗಳು ಈ ಹಿಂದೆ ಹಲವು ಚುನಾವಣೆಗಳಲ್ಲಿ ಸೋತರೂ ಈ ಬಾರಿ ಚುನಾವಣಾ ಕದನಕ್ಕೆ ಇಳಿಸಿದೆ.

ಇದರ ಹಿಂದೆ ಸೋತ ಅಭ್ಯರ್ಥಿ ಈ ಬಾರಿ ಗೆಲುವು ಸಾಧಿಸುವ ದೂರದೃಷ್ಟಿ ಇದ್ದರೆ, ಇನ್ನೊಂದೆಡೆ ಪಕ್ಷದ ನಿಷ್ಟರಿಗೆ ಅವಕಾಶ ಮಾಡಿಕೊಟ್ಟಿದೆ. ಈಗಾಗಲೇ 2 ಪಟ್ಟಿ ಬಿಡುಗಡೆ ಸಿದ್ಧಪಡಿಸಿರುವ ಕೇಸರಿ ಪಡೆ 166 ಅಭ್ಯರ್ಥಿಗಳನ್ನು ಔಪಚಾರಿಕವಾಗಿ ಘೋಷಿಸಿದೆ. ಸೋತ 16 ಅಭ್ಯರ್ಥಿಗಳಿಗೆ ಮತ್ತೊಮ್ಮೆ ಟಿಕೆಟ್ ಕರುಣಿಸಿದ್ದು, ಅದೃಷ್ಟದ ಹಿಂದೆ ಬಿದ್ದಿದೆ.

ರಾಜ್ಯದಲ್ಲಿ ಬಿಜೆಪಿ ಸ್ಥಿತಿಗತಿ ಹೇಗಿದೆ: 1995 ರಿಂದ 27 ವರ್ಷಗಳ ಕಾಲ ಅಧಿಕಾರದಲ್ಲಿರುವ ಬಿಜೆಪಿ ಆಡಳಿತಕ್ಕೆ ಸಮಾಜದ ಕೆಲವು ವರ್ಗಗಳಲ್ಲಿ ಅಸಮಾಧಾನ ಉಂಟು ಮಾಡಿದೆ. ಹಣದುಬ್ಬರ, ನಿರುದ್ಯೋಗ ಮತ್ತು ಮೂಲಭೂತ ಅಗತ್ಯತೆಗಳ ದುಬಾರಿ ಬೆಲೆಯಿಂದ ಜನರು ಆಕ್ರೋಶಗೊಂಡಿದ್ದಾರೆ.

ಮೊರ್ಬಿ ಸೇತುವೆ ದುರಂತ: ಮೊರ್ಬಿಯಲ್ಲಿ 135 ಜನರನ್ನು ಬಲಿತೆಗೆದುಕೊಂಡ ತೂಗು ಸೇತುವೆಯ ಕುಸಿತವು ಆಡಳಿತ ಮತ್ತು ಶ್ರೀಮಂತ ಉದ್ಯಮಿಗಳ ನಡುವಿನ ನಂಟನ್ನು ಮುನ್ನೆಲೆಗೆ ತಂದಿದೆ. ಮತ ಹಾಕಲು ಹೋದಾಗ ಈ ವಿಷಯ ಜನರ ಮನಸ್ಸಿನಲ್ಲಿ ಮೂಡುವ ಸಾಧ್ಯತೆ ಹೆಚ್ಚಿದೆ.

ಬಿಲ್ಕಿಸ್ ಬಾನೊ ಪ್ರಕರಣದ ಹಿನ್ನಡೆ: ಗುಜರಾತ್ ಅನ್ನು ಸಂಘಪರಿವಾರದ ಹಿಂದುತ್ವ ಪ್ರಯೋಗಾಲಯವೆಂದು ಪರಿಗಣಿಸಲಾಗಿದೆ. ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಅಪರಾಧಿಗಳಿಗೆ ಶಿಕ್ಷೆಯಿಂದ ವಿನಾಯತಿ ನೀಡಿ ಬಿಡುಗಡೆ ಮಾಡಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ. ಅಲ್ಪಸಂಖ್ಯಾತ ಸಮುದಾಯಗಳಿಗೆ ಇದು ನುಂಗಲಾರದ ತುತ್ತಾಗಿದ್ದು, ನ್ಯಾಯಕ್ಕಾಗಿ ಒತ್ತಾಯಿಸುತ್ತಿದ್ದಾರೆ.

ಸಣ್ಣ ಪಕ್ಷಗಳಿಂದ ಇದೆ ತೊಂದರೆ: ಆಪ್​ ಸೇರಿದಂತೆ ಹಲವು ಸಣ್ಣ ಪಕ್ಷಗಳು ಕನಿಷ್ಠ ಒಟ್ಟಾರೆ ಶೇಕಡಾ 6 ರಷ್ಟು ಮತದಾನ ಪಡೆದರೆ, ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್​, ಬಿಜೆಪಿಗೆ ಈ ಬಾರಿ ಹೊಡೆತವೇ ಬೀಳಲಿದೆ. ಅದರಲ್ಲೂ ಆಪ್​ ಈ ಬಾರಿ ಗುಜರಾತ್​ನಲ್ಲಿ ದೊಡ್ಡ ಸದ್ದು ಮಾಡಿದೆ. ಇದು ಆಡಳಿತಾರೂಢ ಪಕ್ಷ ಕೇಸರಿ ಪಡೆಗೆ ಸವಾಲಾಗಿದೆ. ಕಾಂಗ್ರೆಸ್​ಗೂ ಇದು ನಷ್ಟ ತರಲಿದೆ ಎಂದೇ ಅಂದಾಜಿಸಲಾಗಿದೆ.

ಓದಿ: ಮೋದಿ ಸ್ಟೇಡಿಯಂ ಹೆಸರು ಬದಲು, 10 ಲಕ್ಷ ಉದ್ಯೋಗ: ಕಾಂಗ್ರೆಸ್​ ಗುಜರಾತ್​ ಚುನಾವಣೆ ಪ್ರಣಾಳಿಕೆ ಬಿಡುಗಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.