ETV Bharat / bharat

ಮಗು ಉಳಿಸಲು 72 ದಿನದಲ್ಲಿ 16 ಕೋಟಿ ಸಂಗ್ರಹಿಸಿದ ದಂಪತಿ.!

ಝೊಲ್ಗೆನ್​​ಸ್ಮಾ ಚುಚ್ಚು ಮದ್ದು ಭಾರತದಲ್ಲಿ ಸಿಗುವುದಿಲ್ಲ. ಆದ್ದರಿಂದಾಗಿ ಅದನ್ನು ಅಮೆರಿಕದಿಂದ ತರಿಸಿಕೊಳ್ಳಲಾಗಿದ್ದು, ಬುಧವಾರ ಬೆಳಗ್ಗೆ 11 ಗಂಟೆಗೆ ಧೈರ್ಯರಾಜ್​​ಗೆ ನೀಡಲಾಗಿದೆ.

Gujarat couple raises 16 crore to treat son of rare condition
ಮಗು ಉಳಿಸಲು 72 ದಿನದಲ್ಲಿ 16 ಕೋಟಿ ಸಂಗ್ರಹಿಸಿದ ದಂಪತಿ.!
author img

By

Published : May 6, 2021, 3:46 PM IST

ಮುಂಬೈ: ತಮ್ಮ ಐದೂವರೆ ತಿಂಗಳಿನ ಮಗುವನ್ನು ಉಳಿಸಿಕೊಳ್ಳಲು ಗುಜರಾತ್ ಮೂಲದ ದಂಪತಿ ಸುಮಾರು 16 ಕೋಟಿ ರೂಪಾಯಿ ಸಂಗ್ರಹಿಸಿ, ಕೊನೆಗೂ ಕರುಳಿನ ಕುಡಿಯನ್ನು ಉಳಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ.

ಹೌದು, ಮುಂಬೈನ ಮಾಹಿಮ್​​ನಲ್ಲಿರುವ ಪಿಡಿ ಹಿಂದುಜಾ ಆಸ್ಪತ್ರೆಯಲ್ಲಿ ಧೈರ್ಯರಾಜ್ ಎಂಬ ಐದೂವರೆ ತಿಂಗಳಿನ ಗಂಡು ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಮಗು ಎಸ್ಎಂಎ- ಸ್ಪೈನಲ್ ಮಸ್ಕಲಾರ್ ಆಟ್ರೋಫಿ ಎಂಬ ಅತ್ಯಪರೂಪದ ಕಾಯಿಲೆಯಿಂದ ನರಳುತ್ತಿತ್ತು.

ಮಗುವನ್ನು ಕಾಯಿಲೆಯಿಂದ ಪಾರು ಮಾಡಲು ಮತ್ತು ಜೀವ ಉಳಿಸಲು ಝೊಲ್ಗೆನ್​​ಸ್ಮಾ ಎಂಬ ಚುಚ್ಚುಮದ್ದಿನ ಅವಶ್ಯಕತೆ ಇದ್ದು, ಇದರ ಬೆಲೆ ಬರೋಬ್ಬರಿ 16 ಕೋಟಿ ರೂಪಾಯಿ ಆಗಿದೆ.

ಕ್ರೌಡ್​ ಫಂಡಿಂಗ್ ನೆರವಿಗೆ ಬಂತು..!

ಅಷ್ಟು ಹಣ ಹೊಂದಿಸಲು ಸಾಧ್ಯವಿಲ್ಲದ ದಂಪತಿ ಕ್ರೌಡ್​ಫಂಡಿಂಗ್ ಮೊರೆಹೊಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಕೂಡಾ ಬೇಡಿಕೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಸುಮಾರು 71 ದಿನಗಳಲ್ಲಿ 2,64,660 ಮಂದಿಯಿಂದ 16 ಕೋಟಿ ರೂಪಾಯಿ ಸಂಗ್ರಹಿಸಿದ್ದಾರೆ.

ಮಗುವಿಗೆ ನೀಡಬೇಕಾದ ಚುಚ್ಚು ಮದ್ದು ಝೊಲ್ಗೆನ್​​ಸ್ಮಾ ಭಾರತದಲ್ಲಿ ಸಿಗುವುದಿಲ್ಲ. ಆದ್ದರಿಂದಾಗಿ ಅದನ್ನು ಅಮೆರಿಕದಿಂದ ತರಿಸಿಕೊಳ್ಳಲಾಗಿದ್ದು, ಬುಧವಾರ ಬೆಳಗ್ಗೆ 11 ಗಂಟೆಗೆ ಧೈರ್ಯರಾಜ್​​ಗೆ ನೀಡಲಾಗಿದೆ. ಈಗ ಬಾಲಕ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರಾದ ನೀಲು ದೇಸಾಯಿ ತಿಳಿಸಿದ್ದಾರೆ.

ಏನಿದು ಸ್ಪೈನಲ್ ಮಸ್ಕಲಾರ್ ಆಟ್ರೋಫಿ..?

ಇದು ಮಾನವನ ನರಮಂಡಲದ ಮೇಲೆ ಪ್ರಭಾವ ಬೀರುವ ಒಂದು ವಂಶಪಾರಂಪರ್ಯವಾಗಿ ಬರುವ ಸಾಧ್ಯತೆಯುಳ್ಳ ರೋಗ. ಈ ರೋಗ ಕಾಣಿಸಿಕೊಂಡರೆ ಸ್ನಾಯುಗಳು ಮತ್ತು ನರಮಂಡಲ (ಮುಖ್ಯವಾಗಿ ಮೆದುಳು) ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ.

ಇದನ್ನೂ ಓದಿ: ಆಕ್ಸಿಜನ್​ ಸಾಗಣೆ ವೇಳೆ ಸೋರಿಕೆ.. ವ್ಯರ್ಥವಾಯ್ತು ನೂರಾರು ಟನ್​ 'ಪ್ರಾಣವಾಯು'

ಈ ರೋಗ ಆವರಿಸಿದವರಿಗೆ ಕಡೆಯ ಪಕ್ಷ ಕುಳಿತುಕೊಳ್ಳಲು, ತಲೆಯನ್ನು ಎತ್ತಲು, ನೀರು ಕುಡಿಯಲು ಮತ್ತು ಉಸಿರಾಡಲೂ ಕೂಡಾ ಸಾಕಷ್ಟು ಕಷ್ಟ ಪಡಬೇಕಾಗುತ್ತದೆ.

ಇದೇ ಕಾರಣದಿಂದಾಗಿ ಮಗುವಿಗೆ ವೆಂಟಿಲೇಟರ್​​​ನಲ್ಲಿ ಚಿಕಿತ್ಸೆ ನೀಡಬೇಕಾಗಿದ್ದು, ಸಾಕಷ್ಟು ಹಣವೂ ಖರ್ಚು ಮಾಡಬೇಕಾಗಿತ್ತು. ಈಗ ಝೊಲ್ಗೆನ್​​ಸ್ಮಾ ಇಂಜೆಕ್ಷನ್ ನೀಡಿರುವುದರಿಂದಾಗಿ ಮಗು ಪ್ರಾಣಾಪಾಯದಿಂದ ಪಾರಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.