ETV Bharat / bharat

ಬಿಜೆಪಿ ಅಭ್ಯರ್ಥಿಗಳ ಮನೆ ಮೇಲೆ ಕಲ್ಲು ತೂರಿ: ಕಾಂಗ್ರೆಸ್​​ ಶಾಸಕಿಯಿಂದ ವಿವಾದಿತ ಹೇಳಿಕೆ! - ಬಿಜೆಪಿ ಅಭ್ಯರ್ಥಿಗಳ ಮನೆ ಮೇಲೆ ಕಲ್ಲು ತೂರಿ

ಸ್ಥಳೀಯ ಚುನಾವಣೆಗಳಲ್ಲಿ ಅಕ್ರಮವಾಗಿ ಗೆಲುವು ಸಾಧಿಸಿರುವ ಬಿಜೆಪಿ ಅಭ್ಯರ್ಥಿಗಳ ಮನೆ ಮೇಲೆ ಕಲ್ಲು ಎಸೆಯಿರಿ ಎಂದು ಕಾಂಗ್ರೆಸ್​ ಶಾಸಕಿ ವಿವಾದಿತ ಹೇಳಿಕೆ ನೀಡಿದ್ದಾರೆ.

Chandrikaben Baria
Chandrikaben Baria
author img

By

Published : Mar 24, 2021, 6:20 AM IST

ಪಂಚಮಹಲ್​​(ಗುಜರಾತ್​): ಗುಜರಾತ್​ನಲ್ಲಿ ಇತ್ತೀಚೆಗೆ ನಡೆದ ಪಂಚಾಯತ್​ ಚುನಾವಣೆಯಲ್ಲಿ ಜಯ ಗಳಿಸಿದ ಬಿಜೆಪಿ ಅಭ್ಯರ್ಥಿಗಳ ಮನೆ ಮೇಲೆ ಕಲ್ಲು ಎಸೆಯಿರಿ ಎಂದು ಕಾಂಗ್ರೆಸ್​ ಶಾಸಕಿಯೊಬ್ಬರು ವಿವಾದಿತ ಹೇಳಿಕೆ ನೀಡಿದ್ದಾರೆ.

ಗುಜರಾತ್​ನ ಪಂಚಮಹಲ್​​ನ ಮೊರ್ವಾ ಹಡಾಫ್​ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್​ ಶಾಸಕಿ ಚಂದ್ರಿಕಾಬೆನ್​ ಬರಿಯಾ ಈ ರೀತಿಯ ಹೇಳಿಕೆ ನೀಡಿದ್ದಾರೆ. ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ನ್ಯಾಯಯುತವಾಗಿ ಗೆಲುವು ಸಾಧಿಸಿಲ್ಲ ಎಂದು ಅವರು ಆರೋಪಿಸಿದ್ದಾರೆ. ಜತೆಗೆ ಇವಿಎಂಗಳ ದುರ್ಬಳಕೆ ಮಾಡಿಕೊಂಡು ಜಯ ಸಾಧಿಸಿದ್ದಾರೆ. ಹೀಗಾಗಿ ಅವರ ಮನೆಗಳಿಗೆ ಕಲ್ಲುಗಳಿಂದ ಹೊಡೆಯಬೇಕು ಎಂದಿದ್ದಾರೆ.

ಇದೇ ವೇಳೆ, ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ತಮ್ಮ ವಿರುದ್ಧ ಸ್ಪರ್ಧೆ ಮಾಡುವಂತೆ ಅವರು ಸವಾಲು ಹಾಕಿದ್ದಾರೆ. ಭ್ರಷ್ಟಾಚಾರದ ಮೂಲಕ ಬಿಜೆಪಿ ಹಣ ಸಂಗ್ರಹ ಮಾಡಿ ಅದನ್ನ ಚುನಾವಣೆಗಳಲ್ಲಿ ಬಳಕೆ ಮಾಡ್ತಿದ್ದು, ಅದಕ್ಕಾಗಿ ಪೊಲೀಸ್​ ಇಲಾಖೆ ಹಾಗೂ ಸ್ಥಳೀಯ ಆಡಳಿತದ ಸಹಾಯ ತೆಗೆದುಕೊಳ್ಳತ್ತಿದೆ ಎಂದಿದ್ದಾರೆ. ಪಂಚಮಹಲ್​​ ಜಿಲ್ಲೆಯ ಮೊರ್ವಾ ಹಡಾಫ್​ ಸ್ಥಾನಕ್ಕೆ ಉಪಚುನಾವಣೆ ನಿಗದಿಯಾಗಿದ್ದು, ಇದೀಗ ಕ್ಷೇತ್ರದಲ್ಲಿ ಬಿಜೆಪಿ-ಕಾಂಗ್ರೆಸ್ ಪಕ್ಷದ ಮುಖಂಡರಿಂದ ಅಬ್ಬರದ ಪ್ರಚಾರ ಶುರುವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.