ಗಾಂಧಿನಗರ (ಗುಜರಾತ್): ಗುಜರಾತ್ ಪೊಲೀಸರ ಭಯೋತ್ಪಾದನಾ ನಿಗ್ರಹ ದಳ ಮತ್ತು ಕಂದಾಯ ಗುಪ್ತಚರ ನಿರ್ದೇಶನಾಲಯವು ಜಂಟಿ ಕಾರ್ಯಾಚರಣೆ ನಡೆಸಿ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದ ಬಂದರಿನಲ್ಲಿ 40 ಕೆಜಿ ಹೆರಾಯಿನ್ ಜಪ್ತಿ ಮಾಡಿದೆ.
ಜಪ್ತಿ ಮಾಡಲಾದ ಈ 40 ಕೆಜಿ ಹೆರಾಯಿನ್ ಮಾರುಕಟ್ಟೆ ಮೌಲ್ಯವು ಅಂದಾಜು 200 ಕೋಟಿ ರೂ.ಗಳಾಗಿದೆ. ಸ್ಕ್ರ್ಯಾಪ್ ಕಂಟೈನರ್‌ನಲ್ಲಿ ಹೆರಾಯಿನ್ ಕೋಲ್ಕತ್ತಾದ ಬಂದರಿಗೆ ತರಲಾಗಿತ್ತು ಎನ್ನಲಾಗಿದೆ. ಅಲ್ಲದೇ, ಈ ಕಂಟೈನರ್ ಫೆಬ್ರವರಿಯಲ್ಲಿ ದುಬೈನಿಂದ ಬಂದಿತ್ತು ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಓಣಂ ಹಬ್ಬದ ನಿಮಿತ್ತ ಒಂದೇ ವಾರದಲ್ಲಿ 625 ಕೋಟಿ ರೂಗಳ ಮದ್ಯ ಮಾರಾಟ! ಇದು ದಾಖಲೆ