ETV Bharat / bharat

ಗುಜರಾತ್​ ಮೊದಲ ಹಂತದ ಮತದಾನ ಅಂತ್ಯ: 2017ಕ್ಕಿಂತ ಈ ಬಾರಿ ಕಡಿಮೆ ವೋಟಿಂಗ್​.. ಕಾರಣವೇನು? - ಚುನಾವಣಾ ಆಯೋಗ

ಗುಜರಾತ್ ವಿಧಾನಸಭೆಗೆ ಗುರುವಾರ ನಡೆದ ಮೊದಲ ಹಂತ ಮತದಾನದಲ್ಲಿ 19 ಜಿಲ್ಲೆಗಳ 89 ಸ್ಥಾನಗಳಿಗೆ ಅಂದಾಜು ಶೇ.60ರಷ್ಟು ಮತದಾನವಾಗಿದೆ. ಇದೇ ಮೊದಲ ಹಂತದ ಚುನಾವಣೆಯಲ್ಲಿ 2017ರಲ್ಲಿ ಶೇ.69.01ರಷ್ಟು ಮತದಾನವಾಗಿತ್ತು. ಈ ಬಗ್ಗೆ ಈಟಿವಿ ಭಾರತ್​ನ ವಿಶೇಷ ವರದಿ ಇಲ್ಲಿದೆ...

gujarat-assembly-polls-phase-1-sees-lesser-turnout-than-2017
ಗುಜರಾತ್​ ಮೊದಲ ಹಂತದ ಮತದಾನ ಅಂತ್ಯ: 2017ಕ್ಕಿಂತ ಈ ಬಾರಿ ಕಡಿಮೆ ವೋಟಿಂಗ್​...
author img

By

Published : Dec 1, 2022, 10:59 PM IST

ಅಹಮದಾಬಾದ್​ (ಗುಜರಾತ್​): ದೇಶದ ಗಮನ ಸೆಳೆದ ಗುಜರಾತ್​ ವಿಧಾನಸಭೆ ಚುನಾವಣೆಗೆ ಮೊದಲ ಹಂತದ ಮತದಾನ ಇಂದು ಮುಕ್ತಾಯವಾಗಿದೆ. ಅಚ್ಚರಿ ಎಂದರೆ ಕಳೆದ ವಿಧಾನಸಭಾ ಚುನಾವಣೆಗೆ ಹೋಲಿಕೆ ಮಾಡಿದರೆ, ಈ ಬಾರಿ ಮೊದಲ ಸುತ್ತಿನಲ್ಲಿ ಕಡಿಮೆ ಮತದಾನವಾಗಿದೆ.

2017 ಮತ್ತು 2022ರ ಮೊದಲ ಹಂತದ ಮತದಾನದ ಶೇಕಡಾವಾರು ಮಾಹಿತಿ...

ಗುಜರಾತ್ ಚುನಾವಣೆಯ ಮೊದಲ ಹಂತದಲ್ಲಿ ಇಂದು 19 ಜಿಲ್ಲೆಗಳ 89 ಸ್ಥಾನಗಳಿಗೆ ಮತದಾನ ನಡೆಯಿತು. ಒಟ್ಟಾರೆ, ಮತದಾನ ಪ್ರಕ್ರಿಯೆ ಸಾಕಷ್ಟು ಶಾಂತವಾಗಿ ಜರುಗಿದೆ. ಆದರೆ, ನಿರೀಕ್ಷೆಗಿಂತ ಮತದಾನ ಪ್ರಮಾಣ ಕಡಿಮೆಯಾಗಿದೆ. ಇಂದಿನ ಮೊದಲ ಸುತ್ತಿನ ಮತದಾನದಲ್ಲಿ ಶೇ.60ರಷ್ಟು ಮತದಾನವಾಗಿದೆ. 2017ರ ವಿಧಾನಸಭಾ ಚುನಾವಣೆಯಲ್ಲಿ ಶೇ.69.01ರಷ್ಟು ಮತದಾನವಾಗಿತ್ತು.

ಇದನ್ನೂ ಓದಿ: ಟಾರ್ಗೆಟ್​ 150... ಗುಜರಾತ್​ನಲ್ಲಿ ಕೇವಲ ಗೆಲುವಷ್ಟೇ ಸಾಲದು..! ಪ್ರಧಾನಿ ಮೋದಿ ಬಯಸಿರುವುದಾದರೂ ಏನು?

ಇಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆದ ಮತದಾನ ಪ್ರಕ್ರಿಯೆಯಲ್ಲಿ ಮತದಾರರು ಪಾಲ್ಗೊಂಡಿದರು. ತಾಪಿ ಜಿಲ್ಲೆಯಲ್ಲಿ ಅತಿ ಹೆಚ್ಚು ಎಂದರೆ ಶೇ.72.32ರಷ್ಟು ಮತದಾನವಾಗಿದೆ. ಪೋರಬಂದರ್​ನಲ್ಲಿ ಅತಿ ಕಡಿಮೆ ಎಂದರೆ ಶೇ.53.84ರಷ್ಟು ಮತದಾನವಾಗಿದೆ. ಅದೇ 2017ರಲ್ಲಿ ತಾಪಿ ಜಿಲ್ಲೆಯಲ್ಲಿ ಶೇ.79.42ರಷ್ಟು ಮತ್ತು ಪೋರಬಂದರ್‌ನಲ್ಲಿ ಶೇ.62.23ರಷ್ಟು ಮತದಾರರು ಮತ ಚಲಾಯಿಸಿದ್ದರು.

ಇವಿಎಂ ವೈಫಲ್ಯಗಳ ದೂರು: ಮತದಾನದ ಸಂದರ್ಭದಲ್ಲಿ ಇವಿಎಂ ಅಸಮರ್ಪಕ ಕಾರ್ಯ ನಿರ್ವಹಣೆಯ ವರದಿಗಳು ಆಗಿದೆ. ಒಟ್ಟಾರೆ ಇಂದು 238 ವಿವಿಪ್ಯಾಟ್‌ಗಳು ಮತ್ತು 82 ನಿಯಂತ್ರಣ ಘಟಕಗಳನ್ನು ಬದಲಾಯಿಸಲಾಗಿದೆ. ಇವಿಎಂಗಳ ಬಗ್ಗೆ ಸಿ-ವಿಜಿಲ್‌ಗೆ ಒಟ್ಟು 221 ದೂರುಗಳು ಬಂದಿದ್ದರೆ, ಚುನಾವಣಾ ಆಯೋಗಕ್ಕೆ 104 ದೂರುಗಳು ಬಂದಿವೆ ಎಂದು ಮೂಲಗಳು ತಿಳಿಸಿವೆ.

ಕಡಿಮೆ ಮತದಾನಕ್ಕೆ ಕಾರಣವೇನು?: ಇಂದು ಮತದಾನ ನಡೆದ ಎಲ್ಲ 19 ಜಿಲ್ಲೆಗಳಲ್ಲೂ ಮತದಾನ ಕಡಿಮೆಯಾಗಿದೆ. ಇದಕ್ಕೆ ಮೊದಲ ಕಾರಣ ಈಗ ಮದುವೆಯ ಸೀಸನ್ ಆಗಿದ್ದು, ನವ ವಿವಾಹಿತರು ಹಾಗೂ ಕುಟುಂಬದವರು ಮತದಿಂದ ದೂರು ಉಳಿದಿರುವ ಸಾಧ್ಯತೆ ಇದೆ. ಇನ್ನೊಂದು ಕಾರಣವೇನು ಎಂದರೆ ಇಂದು ಗುರುವಾರ ಕಚೇರಿ ದಿನವಾಗಿದೆ. ಆದರೆ, ಕಳೆದ ಬಾರಿ ಚುನಾವಣೆ ನಡೆದಾಗ 2017ರ ಡಿಸೆಂಬರ್ 9ರಂದು ಶನಿವಾರವಾಗಿತ್ತು.

ಪಾಟಿದಾರ್ ಚಳವಳಿ: 2017ರಲ್ಲಿ ಗುಜರಾತ್​ನಾದ್ಯಂತ ಪಾಟಿದಾರ್ ಮೀಸಲಾತಿ ಚಳವಳಿ ಜೋರಾಗಿತ್ತು. ಆಗ ಮೀಸಲಾತಿ ವಿಚಾರವಾಗಿ ಚುನಾವಣೆ ಕೂಡ ಹೆಚ್ಚಿನ ಪ್ರಮುಖ್ಯತೆ ಪಡೆದಿತ್ತು. ಇದರಿಂದ ಮತದ ಪ್ರಮಾಣ ಸಹ ಹೆಚ್ಚಾಗಿದೆ ಎಂದು ಅಂದಾಜಿಸಲಾಗಿತ್ತು. ಆದರೆ, ಪಾಟಿದಾರ್ ಸಮುದಾಯದ ಯಾವುದೇ ವಿಷಯ ಇರಲಿಲ್ಲ.

ಬಿರುಸಿನ ಪ್ರಚಾರದಲ್ಲಿ ತೊಡಗಿರುವ ಪ್ರಧಾನಿ ನರೇಂದ್ರ ಮೋದಿ ತಮ್ಮ ಎಲ್ಲ ಸಾರ್ವಜನಿಕ ಸಭೆಗಳಲ್ಲಿ ಅಭೂತಪೂರ್ವ ಮತದಾನಕ್ಕೆ ಕರೆ ನೀಡಿದ್ದರು. ನೀವೆಲ್ಲರೂ ಬಿಜೆಪಿ ಮತಗಳನ್ನು ಹಾಕಬೇಕು. ಹಿಂದಿನ ಎಲ್ಲ ದಾಖಲೆಯನ್ನು ಈ ಬಾರಿ ಮತದಾನ ಮೀರಿಸಬೇಕೆಂದು ಹೇಳಿದ್ದರು. ಆದರೆ, ಇಂದು ನಡೆದ ಮೊದಲ ಹಂತದ ಮತದಾನದಲ್ಲಿ 2017ಕ್ಕಿಂತ ಕಡಿಮೆ ಮತದಾನವಾಗಿದೆ.

ಇದನ್ನೂ ಓದಿ: ಗುಜರಾತ್​ ಚುನಾವಣೆ: ತಮ್ಮ ಜೀವನದ ಮೊದಲ ಮತ ಚಲಾಯಿಸಿದ ಪಾಕಿಸ್ತಾನದ ಮಹಿಳೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.