ETV Bharat / bharat

ಗುಜರಾತ್ ವಿಧಾನಸಭಾ ಚುನಾವಣೆ: ಈವರೆಗೆ ಶೇ 19.13 ರಷ್ಟು ಮತದಾನ - ಮೊದಲ ಹಂತದ ಮತದಾನ

ಗುಜರಾತ್ ವಿಧಾನಸಭೆ ಚುನಾವಣೆ: ಇಂದು ಸಂಜೆ 5 ಗಂಟೆಯೊಳಗೆ ಒಟ್ಟು 2,39,76,670 ಮತದಾರರು 14,382 ಮತದಾನ ಕೇಂದ್ರಗಳಲ್ಲಿ ಮತದಾನ ಮಾಡಲಿದ್ದಾರೆ. ಈ ಮೂಲಕ ಮೊದಲ ಹಂತದ ಚುನಾವಣಾ ಕಣದಲ್ಲಿರುವ 788 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

Voting begins for first phase of 89 constituencies
89 ಕ್ಷೇತ್ರಗಳ ಮೊದಲ ಹಂತದ ಮತದಾನ ಆರಂಭ
author img

By

Published : Dec 1, 2022, 9:11 AM IST

Updated : Dec 1, 2022, 12:29 PM IST

ಗಾಂಧಿನಗರ (ಗುಜರಾತ್): ಗುಜರಾತ್ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಇಂದು ಬೆಳಗ್ಗೆ 8 ಗಂಟೆಗೆ ಬಿಗಿ ಭದ್ರತೆಯ ನಡುವೆ ಆರಂಭವಾಗಿದ್ದು, ಬಿರುಸು ಪಡೆದುಕೊಂಡಿದೆ. ಕಚ್, ಸೌರಾಷ್ಟ್ರ ಮತ್ತು ದಕ್ಷಿಣ ಗುಜರಾತ್‌ನ 19 ಜಿಲ್ಲೆಗಳ 89 ಕ್ಷೇತ್ರಗಳಲ್ಲಿ 2 ಕೋಟಿಗೂ ಹೆಚ್ಚು ಮತದಾರರು ರಾಜಕೀಯ ಪಕ್ಷಗಳ ಭವಿಷ್ಯ ನಿರ್ಧರಿಸಲಿದ್ದಾರೆ. ಸಂಜೆ 5 ಗಂಟೆಯೊಳಗೆ ಒಟ್ಟು 2,39,76,670 ಮತದಾರರು 14,382 ಮತದಾನ ಕೇಂದ್ರಗಳಲ್ಲಿ ಮತದಾನ ಮಾಡಲಿದ್ದಾರೆ. ಈ ಮುಖೇನ ಕಣದಲ್ಲಿರುವ 788 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಇದೀಗ ಬಂದಿರುವ ಮಾಹಿತಿಯಂತೆ, ಬೆಳಗ್ಗೆ 8 ರಿಂದ ಇಲ್ಲಿಯವರೆಗೆ ಶೇ 19.13 ರಷ್ಟು ವೋಟಿಂಗ್‌ ದಾಖಲಾಗಿದೆ.

ಒಟ್ಟು ಮತದಾರರ ಪೈಕಿ 1,24,33,362 ಪುರುಷರು, 1,1,5,42,811 ಮಹಿಳೆಯರು ಮತ್ತು 497 ತೃತೀಯಲಿಂಗಿಗಳು, 4 ಲಕ್ಷಕ್ಕೂ ಹೆಚ್ಚು ವಿಶೇಷ ಚೇತನ ಮತದಾರರು ಮತ ಚಲಾಯಿಸಲಿದ್ದಾರೆ. 80 ವರ್ಷಕ್ಕಿಂತ ಮೇಲ್ಪಟ್ಟ ಸುಮಾರು 9.8 ಲಕ್ಷ ಹಿರಿಯ ನಾಗರಿಕ ಮತದಾರರು, 100 ವರ್ಷ ಮತ್ತು ಅದಕ್ಕಿಂತ ಹೆಚ್ಚು ವಯಸ್ಸಿನ ಸುಮಾರು 10,000 ಮತದಾರರು ವೋಟ್‌ ಮಾಡಲು ಅರ್ಹರಾಗಿದ್ದಾರೆ. ಚುನಾವಣಾ ಆಯೋಗದ ಪ್ರಕಾರ, 18 ರಿಂದ 19 ವರ್ಷದೊಳಗಿನ 5,74,560 ಮತದಾರರು, 163 ಅನಿವಾಸಿ ಭಾರತೀಯ ಮತದಾರರಿದ್ದು, ಇದರಲ್ಲಿ 125 ಪುರುಷರು ಮತ್ತು 38 ಮಹಿಳೆಯರು ಇದ್ದಾರೆ.

ಒಟ್ಟು 25,430 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಇದರಲ್ಲಿ 13,065 ಮತಗಟ್ಟೆಗಳ ಲೈವ್ ವೆಬ್‌ಕಾಸ್ಟಿಂಗ್ ಮಾಡಲಾಗುವುದು. ಗಾಂಧಿನಗರದಲ್ಲಿ ರಾಜ್ಯ ಮಟ್ಟದ ಮೇಲ್ವಿಚಾರಣಾ ಕೊಠಡಿ ನಿರ್ಮಿಸಲಾಗಿದ್ದು, ಅಲ್ಲಿ ಮುಖ್ಯ ಚುನಾವಣಾ ಅಧಿಕಾರಿ ಬೆಳಗ್ಗೆ 6.30ರಿಂದ ಸಂಜೆ ವರೆಗೆ ನಡೆಯುವ ಮತದಾನ ಪ್ರಕ್ರಿಯೆಯನ್ನು ವೀಕ್ಷಿಸಲಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಇದನ್ನೂ ಓದಿ: ಗುಜರಾತ್ ಚುನಾವಣೆ: ಪ್ರಥಮ ಹಂತದ ಮತದಾನ ನಾಳೆ

Last Updated : Dec 1, 2022, 12:29 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.