ETV Bharat / bharat

ಕೋವಿಡ್ ವೇಳೆಯಲ್ಲೂ ಅಹಮದಾಬಾದ್ ಐಐಎಂ ಶ್ಲಾಘನೀಯ ಕಾರ್ಯ: 450ಕ್ಕೂ ಹೆಚ್ಚು ಮಂದಿಗೆ ಉದ್ಯೋಗ - ಐಐಎಂ ಸುದ್ದಿ

ಅಹಮದಾಬಾದ್​ನ​ ಇಂಡಿಯನ್ ಇನ್ಸ್​ಟಿಟ್ಯೂಟ್ ಆಫ್ ಮ್ಯಾನೇಜ್​ಮೆಂಟ್ ಆನ್​ಲೈನ್ ಮೂಲಕ ಕ್ಯಾಂಪಸ್ ಸೆಲೆಕ್ಷನ್ ನಡೆಸಿ, ಸುಮಾರು 450ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಒದಗಿಸುವಲ್ಲಿ ಸಫಲವಾಗಿದೆ.

Gujarat : Around 450 Students from IIM-A got Jobs during Covid period
ಕೋವಿಡ್ ವೇಳೆಯಲ್ಲೂ ಅಹಮದಾಬಾದ್ ಐಐಎಂ ಶ್ಲಾಘನೀಯ ಕಾರ್ಯ: 450ಕ್ಕೂ ಹೆಚ್ಚು ಮಂದಿಗೆ ಉದ್ಯೋಗ
author img

By

Published : Jul 3, 2021, 5:45 AM IST

ಅಹಮದಾಬಾದ್, ಗುಜರಾತ್: ಎಲ್ಲಾ ಶಿಕ್ಷಣ ಸಂಸ್ಥೆಗಳು, ಕೊರೊನಾ ಸಾಂಕ್ರಾಮಿಕದ ಕಾರಣದಿಂದ ತಮ್ಮ ಶೈಕ್ಷಣಿಕ ಚಟುವಟಿಕೆಗಳನ್ನು ಮೊಟಕುಗೊಳಿಸಿವೆ. ಆದರೆ ಕೆಲವೊಂದು ಶೈಕ್ಷಣಿಕ ಸಂಸ್ಥೆಗಳು ತಮ್ಮ ವಿದ್ಯಾರ್ಥಿಗಳ ಶ್ರೇಯೋಭಿವೃದ್ದಿಗೆ ಚಿಂತಿಸುತ್ತವೆ. ಅಂತಹ ಶೈಕ್ಷಣಿಕ ಸಂಸ್ಥೆಯ ಪಟ್ಟಿಗೆ ಸೇರುತ್ತದೆ.

ಹೌದು, ಅಹಮದಾಬಾದ್​ ಇಂಡಿಯನ್ ಇನ್ಸ್​ಟಿಟ್ಯೂಟ್ ಆಫ್ ಮ್ಯಾನೇಜ್​ಮೆಂಟ್ (ಐಐಎಂ) ಎಲ್ಲಾ ವರ್ಷಗಳಂತೆ ಈ ವರ್ಷವೂ ಕೂಡಾ ಕ್ಯಾಂಪಸ್ ಸೆಲೆಕ್ಷನ್ ನಡೆಸಿದ್ದು, ಕೊರೊನಾ ವೇಳೆಯಲ್ಲಿ ಸುಮಾರು 450ಕ್ಕೂ ಹೆಚ್ಚು ಮಂದಿಗೆ ಕೆಲಸ ಹುಡುಕಿಕೊಳ್ಳಲು ಸಹಕರಿಸಿದೆ.

ಕೋವಿಡ್ ಇದ್ದ ಕಾರಣದಿಂದ ಆನ್​ಲೈನ್ ಮೂಲಕ ಕ್ಯಾಂಪಸ್ ಸೆಲೆಕ್ಷನ್​ನ ಸಂದರ್ಶನಗಳು ನಡೆದಿದ್ದು, ಕೊರೊನಾ ವೇಳೆಯಲ್ಲಿ ಐದಕ್ಕೂ ಹೆಚ್ಚು ಆನ್​ಲೈನ್ ಸಂದರ್ಶನಗಳನ್ನು ಏರ್ಪಡಿಸಿ, ಕ್ಯಾಂಪಸ್ ಸೆಲೆಕ್ಷನ್ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಮುಗಿಸಿದೆ.

ವಿದ್ಯಾರ್ಥಿಗಳಿಗೆ 9 ಲಕ್ಷದಿಂದ 10 ಲಕ್ಷದವರೆಗೆ ಪ್ಯಾಕೇಜ್

ಅಹಮದಾಬಾದ್​ನ ಇಂಡಿಯನ್ ಇನ್ಸ್​ಟಿಟ್ಯೂಟ್ ಆಫ್ ಮ್ಯಾನೇಜ್​ಮೆಂಟ್ ಇದೇ ಮೊದಲ ಬಾರಿಗೆ ಆನ್​ಲೈನ್ ಕ್ಯಾಂಪಸ್ ಸೆಲೆಕ್ಷನ್ ನಡೆಸಿದ್ದು, ದೇಶದೊಳಗಿನ ಮತ್ತು ವಿದೇಶದ ಸುಮಾರು 39 ಕಂಪನಿಗಳು ಭಾಗವಹಿಸಿದ್ದವು. ಇದರಲ್ಲಿ 47 ಮಂದಿಗೆ ಉದ್ಯೋಗ ದೊರಕಿತು.

ಇದನ್ನೂ ಓದಿ: ಕ್ರೂರಾತಿಕ್ರೂರ.. ಮೊಬೈಲ್​ ಕಳ್ಳತನ ಮಾಡಲು ವ್ಯಕ್ತಿಯನ್ನು ರಸ್ತೆಯಲ್ಲಿ ಎಳೆದೊಯ್ದರು..!

ಎಂಬಿಎ ವಿದ್ಯಾರ್ಥಿಗಳಿಗೂ ಪ್ರತ್ಯೇಕ ಕ್ಯಾಂಪಸ್ ಸೆಲೆಕ್ಷನ್ ಹಮ್ಮಿಕೊಳ್ಳಲಾಗಿದ್ದು, ಈ ಪ್ರಕ್ರಿಯೆಯಲ್ಲಿ ಸುಮಾರು 25 ವಿದೇಶಿ ಕಂಪನಿಗಳು ಸೇರಿದಂತೆ, ಒಟ್ಟು50 ಕಂಪನಿಗಳು ಪಾಲ್ಗೊಂಡಿದ್ದವು. ಉದ್ಯೋಗ ಪಡೆದುಕೊಂಡ ಬಹುತೇಕರಿಗೆ ವಾರ್ಷಿಕ 9ರಿಂದ 10 ಲಕ್ಷ ರೂಪಾಯಿ ವೇತನ ನಿಗದಿ ಮಾಡಿರುವುದಾಗಿ ತಿಳಿದುಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.