ETV Bharat / bharat

ವಿದೇಶ ಪ್ರವಾಸ, ಕಾಲೇಜು-ವಿವಿ ರೀ ಓಪನ್​: ಕೇಂದ್ರದಿಂದ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ​​​! - ವಿದೇಶಿ ಪ್ರವಾಸಕ್ಕಾಗಿ ಕೇಂದ್ರದಿಂದ ಮಾರ್ಗಸೂಚಿ

ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರು ಹತ್ತುವ ಸಮಯದಲ್ಲಿ ತಮ್ಮ ಮೊಬೈಲ್​ನಲ್ಲಿ ಆರೋಗ್ಯ ಸೇತು ಆ್ಯಪ್​ ಡೌನ್​ಲೋಡ್​ ಮಾಡಿಕೊಳ್ಳುವಂತೆ ಸೂಚನೆ ನೀಡುವುದು ಕಡ್ಡಾಯವಾಗಿದೆ.

guidelines
guidelines
author img

By

Published : Nov 5, 2020, 10:50 PM IST

ನವದೆಹಲಿ: ಕೇಂದ್ರ ಸರ್ಕಾರ ಅಂತಾರಾಷ್ಟ್ರೀಯ ಪ್ರಯಾಣಕ್ಕಾಗಿ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಸಾಂಸ್ಥಿಕ ಕ್ವಾರಂಟೈನ್​​ನಿಂದ ವಿನಾಯತಿ ಪಡೆದುಕೊಳ್ಳಲು ಪ್ರಯಾಣಿಕರು ತಾವು ಪ್ರವಾಸ ಕೈಗೊಳ್ಳುವ 72 ಗಂಟೆಗಳ ಮೊದಲು ಋಣಾತ್ಮಕ ಆರ್​ಟಿ-ಪಿಸಿಆರ್​ ವರದಿ ನೀಡುವುದು ಕಡ್ಡಾಯವಾಗಿದೆ. ಭಾರತಕ್ಕೆ ತೆರಳುವ ಪ್ರಯಾಣಿಕರು ಕೋವಿಡ್​ ಪರೀಕ್ಷೆ ವಿಮಾನ ನಿಲ್ದಾಣಗಳಲ್ಲೂ ಮಾಡಿಸಬಹುದಾಗಿದೆ.

ಆರೋಗ್ಯ ಸಚಿವಾಲಯ ಹೊರಡಿಸಿರುವ ಮಾರ್ಗಸೂಚಿ ಪ್ರಕಾರ, ಪ್ರಯಾಣಿಕರು ಪ್ರಯಾಣ ಕೈಗೊಳ್ಳುವ ಮೊದಲು ಸಂಬಂಧಪಟ್ಟ ವಿಮಾನಯಾನ ಸಂಸ್ಥೆಗಳ ಪೋರ್ಟಲ್​ ಅಥವಾ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಮಾಹಿತಿ ನೀಡಬೆಕಾಗುತ್ತದೆ. ಬಂದರುಗಳ ಮೂಲಕ ಆಗಮಿಸುವ ಅಂತಾರಾಷ್ಟ್ರೀಯ ಪ್ರಯಾಣಿಕರು ಮೇಲಿನ ಪ್ರೋಟೋಕಾಲ್​ಗೆ ಒಳಗಾಗುವುದು ಅನಿವಾರ್ಯವಾಗಿದ್ದು, ಸ್ವ-ಘೋಷಣೆ ಫಾರಂಅನ್ನು​ ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಬೇಕಾಗುತ್ತದೆ.

ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರು ಹತ್ತುವ ಸಮಯದಲ್ಲಿ ತಮ್ಮ ಮೊಬೈಲ್​ನಲ್ಲಿ ಆರೋಗ್ಯ ಸೇತು ಆ್ಯಪ್​ ಡೌನ್​ಲೋಡ್​ ಮಾಡಿಕೊಳ್ಳುವಂತೆ ಸೂಚನೆ ನೀಡುವುದು ಕಡ್ಡಾಯವಾಗಿದೆ.

ಕಾಲೇಜು​, ವಿಶ್ವವಿದ್ಯಾಲಯ ಓಪನ್​ ಮಾಡಲು ಮಾರ್ಗಸೂಚಿ

ದೇಶದಲ್ಲಿನ ಕಾಲೇಜುಗಳು​, ವಿಶ್ವವಿದ್ಯಾಲಯಗಳನ್ನು ರೀ ಓಪನ್​ ಮಾಡಲು ಯುಜಿಸಿ ಮಾರ್ಗಸೂಚಿ ಬಿಡುಗಡೆ​ ಮಾಡಿದೆ. ಕಂಟೋನ್ಮೆಂಟ್​​ ವಲಯ ಹೊರತುಪಡಿಸಿ ಎಲ್ಲಡೆ ಓಪನ್​ ಮಾಡಲು ಅನುಮತಿ ನೀಡಲಾಗಿದೆ. ಆರಂಭದಲ್ಲಿ ಆಡಳಿತ ಕಚೇರಿಗಳು, ಸಂಶೋಧನಾ ಪ್ರಯೋಗಾಲಯಗಳು ಮತ್ತು ಗ್ರಂಥಾಲಯ ಓಪನ್​ ಮಾಡಲು ಅನುಮತಿ ನೀಡಲಾಗಿದ್ದು, ಸಂಶೋಧನಾ ವಿದ್ಯಾರ್ಥಿಗಳು ವಿವಿಗಳಿಗೆ ತೆರಳಬಹುದಾಗಿದೆ.

ಆಡಳಿತ ಕಚೇರಿಗಳು, ಸಂಶೋಧನಾ ಪ್ರಯೋಗಾಲಯಗಳು ಮತ್ತು ಗ್ರಂಥಾಲಯಗಳು ಮತ್ತೆ ತೆರೆಯಲ್ಪಡುತ್ತವೆ. ನಂತರ ಎಲ್ಲಾ ಸಂಶೋಧನಾ ಕಾರ್ಯಕ್ರಮಗಳ ವಿದ್ಯಾರ್ಥಿಗಳು ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಕಾರ್ಯಕ್ರಮಗಳಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳು. ಅಂತಿಮ ವರ್ಷದ ಪದವಿಪೂರ್ವ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮತ್ತು ನಿಯೋಜನೆ ಉದ್ದೇಶಗಳಿಗಾಗಿ ಸೇರಲು ಅವಕಾಶ ನೀಡಬಹುದು.

ಆನ್​ಲೈನ್​ ಶಿಕ್ಷಣ ಪಡೆದುಕೊಳ್ಳಲು ಅನುಮತಿ ನೀಡಲಾಗಿದ್ದು, ಅಗತ್ಯವಿದ್ದರೆ ಕಾಲೇಜು​ಗಳಿಗೆ ಭೇಟಿ ನೀಡಬಹುದಾಗಿದೆ. ಆದರೆ ಈ ವೇಳೆ ಸಾಮಾಜಿಕ ಅಂತರ, ಮಾಸ್ಕ್​ ಬಳಕೆ ಕಡ್ಡಾಯವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.