ETV Bharat / bharat

ಕೋವಿಡ್​ ಸಂಬಂಧಿತ ವೈದ್ಯಕೀಯ ಉಪಕರಣಗಳ ಮೇಲಿನ ತೆರಿಗೆ ಕಡಿತ: ಸೀತಾರಾಮನ್ ಘೋಷಣೆ

ಪರಿಷತ್ತಿನ 44 ನೇ ಸಭೆಯ ನಿರ್ಧಾರಗಳನ್ನು ಪ್ರಕಟಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ವಿದ್ಯುತ್ ಕುಲುಮೆ ಮತ್ತು ತಾಪಮಾನ ತಪಾಸಣೆ ಸಾಧನಗಳ ಮೇಲಿನ ಜಿಎಸ್‌ಟಿ ದರವನ್ನು ಶೇಕಡಾ 5 ಕ್ಕೆ ಇಳಿಸಲಾಗಿದೆ. ಅಲ್ಲದೇ, ಆ್ಯಂಬುಲೆನ್ಸ್ ಮೇಲಿನ ತೆರಿಗೆಯನ್ನು ಶೇಕಡಾ 12ಕ್ಕೆ ಇಳಿಸಲಾಗಿದೆ ಎಂದರು.

ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್
author img

By

Published : Jun 12, 2021, 4:03 PM IST

Updated : Jun 12, 2021, 4:39 PM IST

ನವದೆಹಲಿ: ಕೋವಿಡ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ, ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಕೌನ್ಸಿಲ್, ಕೋವಿಡ್​ ಸಂಬಂಧಿತ ವೈದ್ಯಕೀಯ ಉಪಕರಣಗಳ ಮೇಲಿನ ತೆರಿಗೆ ದರವನ್ನು ಕಡಿಮೆ ಮಾಡಿದೆ.

ಪರಿಷತ್ತಿನ 44 ನೇ ಸಭೆಯ ನಿರ್ಧಾರಗಳನ್ನು ಪ್ರಕಟಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ವಿದ್ಯುತ್ ಕುಲುಮೆ ಮತ್ತು ತಾಪಮಾನ ತಪಾಸಣೆ ಸಾಧನಗಳ ಮೇಲಿನ ಜಿಎಸ್‌ಟಿ ದರವನ್ನು ಶೇಕಡಾ 5ಕ್ಕೆ ಇಳಿಸಲಾಗಿದೆ. ಅಲ್ಲದೆ, ಆ್ಯಂಬುಲೆನ್ಸ್ ಮೇಲಿನ ತೆರಿಗೆಯನ್ನು ಶೇಕಡಾ 12 ಕ್ಕೆ ಇಳಿಸಲಾಗಿದೆ ಎಂದರು.

ಕೋವಿಡ್​ ಸಂಬಂಧಿತ ವೈದ್ಯಕೀಯ ಉಪಕರಣಗಳ ಮೇಲಿನ ತೆರಿಗೆ ಕಡಿತ:

ಕೇಂದ್ರ ಸರ್ಕಾರ ಈ ಹೊಸ ನಿಯಮಗಳನ್ನು ಅಂಗೀಕರಿಸಿದೆ. ಈ ತೆರಿಗೆ ನಿಯಮಗಳು ಸೆಪ್ಟೆಂಬರ್ ಅಂತ್ಯದವರೆಗೆ ಜಾರಿಯಲ್ಲಿರುತ್ತವೆ.

ಇಂದು ಮುಂಜಾನೆ ನಡೆದ ಪರಿಷತ್ತಿನ 44 ನೇ ಸಭೆಯ ಅಧ್ಯಕ್ಷತೆಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಹಿಸಿದ್ದರು. ಸಭೆಯಲ್ಲಿ ಹಣಕಾಸು ಸಚಿವ ಅನುರಾಗ್ ಠಾಕೂರ್, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಇದನ್ನೂ ಓದಿ:ಕೋವಿಡ್​ನಿಂದ ತಬ್ಬಲಿಯಾದ ಮಕ್ಕಳಿಗೆ ಸರ್ಕಾರ ನೀಡಲಿದೆ ಸ್ಮಾರ್ಟ್​ ಫೋನ್‌

ವೈದ್ಯಕೀಯ ಆಮ್ಲಜನಕ, ಪಲ್ಸ್ ಆಕ್ಸಿಮೀಟರ್, ಸ್ಯಾನಿಟೈಸರ್ ಮತ್ತು ವೆಂಟಿಲೇಟರ್‌ಗಳಂತಹ ಕೋವಿಡ್ ಪರಿಹಾರ ಸಾಮಗ್ರಿಗಳ ಮೇಲಿನ ಜಿಎಸ್‌ಟಿ ರಿಯಾಯಿತಿಗಳ ಕುರಿತು ಮೇಘಾಲಯ ಡಿಸಿಎಂ ಕಾನ್ರಾಡ್ ಸಾಂಗ್ಮಾ ನೇತೃತ್ವದ ಮಂತ್ರಿಗಳ ಗುಂಪು ಈ ಕುರಿತು ಚರ್ಚಿಸಿತು. ಬಳಿಕ ಕೌನ್ಸಿಲ್ ಈ ನಿರ್ಧಾರವನ್ನು ತೆಗೆದುಕೊಂಡಿದೆ.

Last Updated : Jun 12, 2021, 4:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.