ಆಗ್ರಾ (ಉತ್ತರ ಪ್ರದೇಶ): ತಾಜ್ಮಹಲ್ನಲ್ಲಿ ಮಂಗಳ ಕಾಟ ಹೆಚ್ಚಾಗಿದ್ದು, ಪ್ರವಾಸಿಗರ ಮೇಲೆ ದಾಳಿ ಮಾಡುತ್ತಿವೆ. ಇತ್ತೀಚೆಗಷ್ಟೇ ತಾಜ್ ಮಹಲ್ ನೋಡಲು ಬಂದಿದ್ದ ಸ್ಪೇನ್ ಮಹಿಳೆಯೊಬ್ಬರ ಮೇಲೆ ಮಂಗಗಳು ದಾಳಿ ನಡೆಸಿದ್ದವು. ಇಂದು ತಾಜ್ಮಹಲ್ನ ಈಸ್ಟ್ ಗೇಟ್‌ನಲ್ಲಿ ಮತ್ತೆ ಪ್ರವಾಸಿಗರ ಮೇಲೆ ಮಂಗಗಳು ದಾಳಿ ಮಾಡಿವೆ.
ಮಂಗಗಳ ಗುಂಪೊಂದು ಈಸ್ಟ್ ಗೇಟ್‌ನಲ್ಲಿ ಟಿಕೆಟ್ಗಾಗಿ ನಿಂತಿದ್ದ ಸ್ಪ್ಯಾನಿಷ್ ಪ್ರವಾಸಿ ಯುವತಿ ಕ್ರಿಸ್ಟಿನಾ ಮೇಲೆ ದಾಳಿ ಮಾಡಿವೆ. ಕೂಡಲೇ ಅವರಿಗೆ ಜಿಲ್ಲಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಲಾಯಿತು. ಟಿಕೆಟ್ ಪಡೆಯಲು ಕ್ರಿಸ್ಟಿನಾ ನಿಂತಿದ್ದಾಗ ಸುತ್ತುವರೆದ ಮಂಗಗಳು ದಾಳಿ ಮಾಡಿವೆ. ಈ ವೇಳೆ ಕ್ರಿಸ್ಟಿನ ಕೆಲಗೆ ಬಿದ್ದಿದ್ದಾರೆ. ಆಕೆಗೆ ಮಂಗಗಳು ಪರಚಿ ಮತ್ತು ಕಚ್ಚಿ ಗಾಯಮಾಡಿವೆ. ಆಸ್ಪತ್ರೆಯಲ್ಲಿ ಆ್ಯಂಟಿ ರೇಬಿಸ್ ಇಂಜೆಕ್ಷನನ್ನು ಕ್ರಿಸ್ಟಿನಾ ನೀಡಲಾಗಿದೆ.
ತಾಜ್ಮಹಲ್ನಲ್ಲಿ ಪ್ರವಾಸಿಗರ ಮೇಲೆ ಮಂಗಗಳು ಈ ಹಿಂದೆಯೂ ದಾಳಿ ಮಾಡಿವೆ. ಆದರೆ ಇಲ್ಲಿನ ಇಲಾಖೆ, ಮಹಾನಗರ ಪಾಲಿಕೆ, ಅರಣ್ಯ ಇಲಾಖೆ, ಎಎಸ್‌ಐ ಮತ್ತು ಜಿಲ್ಲಾಡಳಿತ ಮಂಗಗಳ ಕಾಟಕ್ಕೆ ಯೋಜನೆ ರೂಪಿಸಿಲ್ಲ.
ಇದನ್ನೂ ಓದಿ : ರೇಪಿಸ್ಟ್ಗಳಿಂದ ತಪ್ಪಿಸಿಕೊಂಡು ವಿವಸ್ತ್ರವಾಗಿ ಓಡಿದ ಬಾಲಕಿ..ಮೊರಾದಾಬಾದ್ನಲ್ಲಿ ಹೇಯ ಕೃತ್ಯ ಬೆಳಕಿಗೆ