ನಾಗ್ಪುರ: ಏನೋ ಮಾಡಲು ಹೋಗಿ ಏನೋ ಆಯಿತು ಎಂಬಂತೆ ಮದುವೆ ಸಮಾರಂಭದಲ್ಲಿ ಎಡವಟ್ಟೊಂದು ನಡೆದಿದೆ. ನಾಗ್ಪುರ ಜಿಲ್ಲೆಯ ಸವ್ನೆರ್‌ನಲ್ಲಿ ಕುದುರೆ ಸವಾರಿ ಮದುವೆಗೆ ಕಂಟಕವಾಗಿದೆ.
ಮದುವೆ ಸಮಾರಂಭದಲ್ಲಿ ಸಂಪ್ರದಾಯದಂತೆ ಕುದುರೆಯ ಮೇಲೆ ಕುಳಿತಿದ್ದ ವರ ಕೆಳಗೆ ಬಿದ್ದಿದ್ದಾನೆ. ಪರಿಣಾಮ ಕಾಲು ಮೂಳೆ ಮುರಿದಿದೆ. ಹೀಗಾಗಿ ಅವರನ್ನು ಸ್ಟ್ರೆಚರ್ ಮೇಲೆ ಮಲಗಿಸಿಕೊಂಡೇ ವಿವಾಹ ಕಾರ್ಯ ನೆರವೇರಿಸಲಾಗಿದೆ.
ಒತ್ತಾಯದ ಮೇಲೆ ಕುದುರೆ ಕುಣಿಸಿದ ಜನ: ವರನ ಸ್ನೇಹಿತರು ಮತ್ತು ಸಂಬಂಧಿಕರ ಒತ್ತಾಯದ ಮೇರೆಗೆ ಕುದುರೆ ಕುಣಿಸಲು ಮುಂದಾಗಿದ್ದಾರೆ. ಕುದುರೆ ಕುಣಿಯುವಾಗ ತನ್ನ ಎರಡೂ ಕಾಲುಗಳನ್ನು ಮೇಲಕ್ಕೆ ಎತ್ತಿದೆ. ಪರಿಣಾಮ ನಿಯಂತ್ರಣ ಸಿಗದೇ ವರ ಕೆಳಗೆ ಬಿದ್ದಿದ್ದಾನೆ. ಮದುವೆ ನಂತರ ಚಿಕಿತ್ಸೆಗಾಗಿ ವರನನ್ನು ನಾಗ್ಪುರಕ್ಕೆ ಕರೆತರಲಾಗಿದೆ.
ಇದನ್ನೂ ಓದಿ: ಸಾಕಿನಾಕ ಅತ್ಯಾಚಾರ ಪ್ರಕರಣ: ಆರೋಪಿಗೆ ಮರಣದಂಡನೆ ಶಿಕ್ಷೆ