ಬಂಡಿಪೋರಾ (ಜಮ್ಮು ಕಾಶ್ಮೀರ): ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಸುಂಬಾಲ್ ಪ್ರದೇಶದಲ್ಲಿ ಉಗ್ರರು ನಡೆಸಿದ ಗ್ರೆನೇಡ್ ದಾಳಿಯಲ್ಲಿ ಐದಾರು ಜನರು ಗಾಯಗೊಂಡಿದ್ದಾರೆ.
ಉಗ್ರರು ಸಂಬಾಲ್‌ನ ಸೇತುವೆ ಪ್ರದೇಶದಲ್ಲಿದ್ದ ಭದ್ರತಾ ಪಡೆಗಳನ್ನು ಗುರಿಯಾಗಿಸಿ ದಾಳಿ ನಡೆಸಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಸಂಬಾಲ್‌ನ ಸಮುದಾಯ ಆರೋಗ್ಯ ಕೇಂದ್ರ (ಸಿಎಚ್‌ಸಿ)ಕ್ಕೆ ದಾಖಲಿಸಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶ್ರೀನಗರ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಗಾಯಾಳುಗಳನ್ನು ಸೋಪೋರಾದ ಮುಷ್ತಾಕ್ ಅಹ್ಮದ್ ಭಟ್, ಮರ್ಕುಂಡಲ್‌ನ ಅಬ್ದುಲ್ ಹಮೀದ್ ಮಲ್ಲಾ ಅವರ ಪತ್ನಿ ತಸ್ಲೀಮಾ, ಬಶೀರ್ ಅಹ್ಮದ್ ಅವರ ಪುತ್ರ ಫರೋಜ್ ಅಹ್ಮದ್, ಮೊಹಮ್ಮದ್ ಅಲ್ತಾಫ್, ಸಫಾಪೋರಾದ ಫೈಸಲ್ ಅಹ್ಮದ್ ಮತ್ತು ಅಬ್ದುಲ್ ಹಮೀದ್ ಮಲ್ಲಾ ಎಂದು ಗುರುತಿಸಲಾಗಿದೆ.