ETV Bharat / bharat

ಅಯೋಧ್ಯೆ: 25 ಸಾವಿರ ಭಕ್ತರಿಗೆ ವಸತಿ, ಊಟೋಪಚಾರದ ವ್ಯವಸ್ಥೆ ಕಲ್ಪಿಸುವ ಟೆಂಟ್ ಸಿಟಿಗೆ ಭೂಮಿಪೂಜೆ - ದೈತ್ಯ ಟೆಂಟ್ ಸಿಟಿ ನಿರ್ಮಾಣಕ್ಕೆ ಗುರಿ

ಅಯೋಧ್ಯೆಯ ಮಹಾ ಮಂದಿರದ ಪ್ರಾಣಪ್ರತಿಷ್ಠಾ ಮಹೋತ್ಸವಕ್ಕೂ ಮುನ್ನ ಭಕ್ತರಿಗೆ ತಂಗಲು ಬೃಹತ್ ಟೆಂಟ್ ಸಿಟಿ ನಿರ್ಮಿಸಲಾಗುತ್ತಿದೆ.

Etv Bharat
Etv Bharat
author img

By ETV Bharat Karnataka Team

Published : Oct 20, 2023, 2:46 PM IST

ಅಯೋಧ್ಯೆ (ಉತ್ತರ ಪ್ರದೇಶ): ಭಗವಾನ್ ಶ್ರೀರಾಮನ ನಗರ ಅಯೋಧ್ಯೆಯಲ್ಲಿ ಭವ್ಯ ಮಂದಿರ ಬಹುತೇಕ ಸಿದ್ಧವಾಗಿದೆ. 2024ರ ಜನವರಿಯಲ್ಲಿ ನಡೆಸಲು ಉದ್ದೇಶಿಸಿರುವ ಶ್ರೀರಾಮ ದೇವಾಲಯದ ಪ್ರಾಣ ಪ್ರತಿಷ್ಠಾ ಮಹೋತ್ಸವ ಕಾರ್ಯಕ್ರಮಕ್ಕೆ ಸಕಲ ರೀತಿಯ ಸಿದ್ಧತೆಗಳು ನಡೆಯುತ್ತಿವೆ. ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಭಕ್ತರ ವಾಸ್ತವ್ಯ ಮತ್ತು ಸಂಚಾರಕ್ಕೆ ಅಗತ್ಯ ತಯಾರಿ ಮಾಡಿಕೊಳ್ಳುವ ಕಾರ್ಯದಲ್ಲಿ ನಿರತವಾಗಿದೆ.

ಟೆಂಟ್ ಸಿಟಿಯಲ್ಲಿ 25 ಸಾವಿರ ಜನರಿಗೆ ವಸತಿ, ಊಟದ ವ್ಯವಸ್ಥೆ ಕಲ್ಪಿಸಲು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮುಂದಾಗಿದೆ. ತೀರ್ಥಪುರಂನ ಬಾಗ್ ಬಿಜೇಸಿ ಮೈದಾನದಲ್ಲಿ ಇದನ್ನು ನಿರ್ಮಿಸಲು ಟ್ರಸ್ಟ್ ವತಿಯಿಂದ ಭೂಮಿಪೂಜೆ ಕಾರ್ಯಕ್ರಮ ಶುಕ್ರವಾರ ನೆರವೇರಿತು.

ವಿಶ್ವ ಹಿಂದೂ ಪರಿಷತ್ ಪ್ರಾಂತೀಯ ವಕ್ತಾರ ಶರದ್ ಶರ್ಮಾ ಮಾತನಾಡಿ, "ನವರಾತ್ರಿಯ ಪಂಚಮಿ ತಿಥಿಯಂದು ತೀರ್ಥಕ್ಷೇತ್ರ ಪುರಂನಲ್ಲಿ ಟೆಂಟ್ ಸಿಟಿ ನಿರ್ಮಿಸಲು ಭೂಮಿಪೂಜೆ ಕಾರ್ಯಕ್ರಮ ನಡೆಸಲಾಗಿದೆ. ರಾಮನ ಮಂದಿರದ ಪ್ರಾಣ ಪ್ರತಿಷ್ಠಾಪನೆಗೂ ಮುನ್ನ ಟೆಂಟ್ ಸಿಟಿ ಸಿದ್ಧವಾಗಲಿದೆ. ಟೆಂಟ್ ಸಿಟಿಯಲ್ಲಿ ದೇವರ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಇಲ್ಲಿಗೆ ಆಗಮಿಸುವ ಬಹುತೇಕ ಭಕ್ತರಿಗೆ ದೊಡ್ಡ ದೊಡ್ಡ ಹೊಟೇಲ್, ಧರ್ಮಶಾಲೆಗಳಲ್ಲಿ ತಂಗಲು ಹಣವಿಲ್ಲದವರು ಇಲ್ಲಿ ವಾಸ್ತವ್ಯ ಹೂಡಬಹುದು. ಉಳಿದುಕೊಳ್ಳುವ ವ್ಯವಸ್ಥೆ ಮತ್ತು ಊಟ ಒದಗಿಸಲಾಗುವುದು. ಈ ಖಾಲಿಯಿರುವ ಜಾಗದಲ್ಲಿ ದೈತ್ಯ ಟೆಂಟ್ ಸಿಟಿ ನಿರ್ಮಿಸಲಾಗುತ್ತದೆ" ಎಂದು ಅವರು ತಿಳಿಸಿದರು.

ಆರಾಧನಾ ಕಾರ್ಯಕ್ರಮ ಸಂಪನ್ನ: ''ಟೆಂಟ್ ಸಿಟಿಯಲ್ಲಿ ಸುಮಾರು 25 ಸಾವಿರ ಜನರಿಗೆ ವಸತಿ ವ್ಯವಸ್ಥೆ ಇರುತ್ತದೆ. ಜನವರಿ 15ರೊಳಗೆ ಕೆಲಸ ಪೂರ್ಣಗೊಳಿಸಬೇಕು ಎನ್ನುವ ಗುರಿಯನ್ನು ಟ್ರಸ್ಟ್ ಇಟ್ಟಿಕೊಂಡಿದೆ. ಇದರಿಂದ ಅಯೋಧ್ಯೆಯ ರಾಮ ದೇವರ ದರ್ಶನಕ್ಕಾಗಿ ಭೇಟಿ ಕೊಡುವ ಭಕ್ತರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಗುರುವಾರ ಮಧ್ಯಾಹ್ನ ಆಚಾರ್ಯ ನಾರದ ಭಟ್ಟರಾಯಿ ಹಾಗೂ ದುರ್ಗಾ ಪ್ರಸಾದ್ ಅವರ ಸಮ್ಮುಖದಲ್ಲಿ ಆರಾಧನಾ ಕಾರ್ಯಕ್ರಮ ಸಂಪನ್ನಗೊಂಡಿತು'' ಎಂದು ಹೇಳಿದರು.

ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯ ಡಾ.ಅನಿಲ್ ಮಿಶ್ರಾ, ಪ್ರಚಾರಕ ಗೋಪಾಲ್, ಶರದ್ ಶರ್ಮಾ, ಸಾಮಾಜಿಕ ಸಾಮರಸ್ಯ ವಿಭಾಗದ ಪ್ರಾದೇಶಿಕ ಮುಖ್ಯಸ್ಥ ಮುಖೇಶ್, ವೀರೇಂದ್ರ ಕುಮಾರ್, ಧೀರೇಶ್ವರ್ ಸೇರಿದಂತೆ ಹಲವು ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ: Rahul Gandhi: ಬೈಕ್​ ರಿಪೇರಿ, ಹಮಾಲಿ, ಬಡಿಗನಾದ ಬಳಿಕ ದೋಸೆ ಹಾಕಿ ಗಮನ ಸೆಳೆದ ರಾಹುಲ್ ಗಾಂಧಿ...

ETV Bharat Logo

Copyright © 2025 Ushodaya Enterprises Pvt. Ltd., All Rights Reserved.