ETV Bharat / bharat

ಬೀಡಿ ಕಾರ್ಮಿಕರ ಅಭಿವೃದ್ಧಿಗೆ ಕೇಂದ್ರದ ಸೌಲಭ್ಯಗಳೇನು? ಕೇಂದ್ರ ಸಚಿವರಿಂದ ಲೋಕಸಭೆಗೆ ಮಾಹಿತಿ - ಬೀಡಿ

ದೇಶದ ಲಕ್ಷಾಂತರ ಬೀಡಿ ಕಾರ್ಮಿಕರ ಕುಟುಂಬಗಳಿಗೆ ಕೇಂದ್ರ ಸರ್ಕಾರವು ಕಾರ್ಮಿಕ ಕಲ್ಯಾಣ ಯೋಜನೆಗಳನ್ನು ಒದಗಿಸುತ್ತಿದೆ ಎಂದು ಸಚಿವರು ಲೋಕಸಭೆಗೆ ತಿಳಿಸಿದರು.

50 ಲಕ್ಷ ಬೀಡಿ ಕಾರ್ಮಿಕರ ಅಭಿವೃದ್ಧಿಗೆ ಮುಂದಾದ ಸರ್ಕಾರ

author img

By

Published : Aug 8, 2022, 3:18 PM IST

ನವದೆಹಲಿ: ದೇಶಾದ್ಯಂತ ಸುಮಾರು 50 ಲಕ್ಷ ಬೀಡಿ ಕಾರ್ಮಿಕರ ಕುಟುಂಬಗಳಿಗೆ ಕೇಂದ್ರವು ಕಾರ್ಮಿಕ ಕಲ್ಯಾಣ ಯೋಜನೆಗಳನ್ನು ನೀಡುತ್ತಿದೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಭೂಪೇಂದರ್ ಯಾದವ್ ಇಂದು ಲೋಕಸಭೆಗೆ ತಿಳಿಸಿದರು. ಈ ಯೋಜನೆಗಳ ಮೂಲಕ ಆರೋಗ್ಯ ಸೌಲಭ್ಯ, ವಿದ್ಯಾರ್ಥಿವೇತನ ಮತ್ತು ವಸತಿ ಅನುಕೂಲ ಸಿಗುತ್ತಿದೆ ಎಂದು ಅವರು ವಿವರಿಸಿದರು.

ಕಾರ್ಮಿಕ ಯೋಜನೆಯಡಿ ದೇಶಾದ್ಯಂತ ಇರುವ 285 ಔಷಧಾಲಯಗಳು ಮತ್ತು 10 ಆಸ್ಪತ್ರೆಗಳ ಮೂಲಕ ಬೀಡಿ ಕಾರ್ಮಿಕರು ಮತ್ತು ಅವರ ಕುಟುಂಬಗಳಿಗೆ ಆರೋಗ್ಯ ಸೌಲಭ್ಯ ಸಿಗುತ್ತಿದೆ. ದೇಶದಲ್ಲಿ 49.82 ಲಕ್ಷ ಬೀಡಿ ಕಾರ್ಮಿಕರಿದ್ದಾರೆ. ಇವರಲ್ಲಿ 18.29 ಲಕ್ಷ ಜನರು ಪಶ್ಚಿಮ ಬಂಗಾಳಕ್ಕೆ ಸೇರಿದವರಾಗಿದ್ದಾರೆ ಎಂದು ಸಚಿವರು ಹೇಳಿದರು.

ಆರೋಗ್ಯ ಸೌಲಭ್ಯಗಳೇನು?: ಕ್ಯಾನ್ಸರ್, ಕ್ಷಯ, ಹೃದ್ರೋಗ, ಕಿಡ್ನಿ ಕಸಿ, ಅಂಡವಾಯು, ಅಪೆಂಡೆಕ್ಟಮಿ, ಅಲ್ಸರ್, ಸ್ತ್ರೀರೋಗ ಮತ್ತು ಪ್ರಾಸ್ಟ್ರೇಟ್‌ನಂತಹ ಗಂಭೀರ ಕಾಯಿಲೆಗಳ ಸಂದರ್ಭದಲ್ಲಿ ಸರ್ಕಾರದಿಂದ ಮಾನ್ಯತೆ ಪಡೆದ ಆಸ್ಪತ್ರೆಗಳಲ್ಲಿ ವಿಶೇಷ ಚಿಕಿತ್ಸೆಗಾಗಿ ವೆಚ್ಚವನ್ನು ಸರ್ಕಾರ ಫಲಾನುಭವಿಗಳಿಗೆ ಮರುಪಾವತಿಸುತ್ತದೆ. ಈ ಯೋಜನೆಯು ಪುರುಷ ಮತ್ತು ಮಹಿಳಾ ಬೀಡಿ ಕಾರ್ಮಿಕರನ್ನು ಒಳಗೊಂಡಿದೆ.

ವಿದ್ಯಾರ್ಥಿ ವೇತನ: ಬೀಡಿ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ 1 ನೇ ತರಗತಿಯಿಂದ ಕಾಲೇಜು ಮತ್ತು ವಿಶ್ವವಿದ್ಯಾಲಯದವರೆಗೆ ಪ್ರತಿ ವಿದ್ಯಾರ್ಥಿಗೆ ತರಗತಿ ಮತ್ತು ಕೋರ್ಸ್‌ಗೆ ಅನುಗುಣವಾಗಿ ವರ್ಷಕ್ಕೆ 1,000 ರಿಂದ 25,000 ರೂ.ವರೆಗೆ ವಿದ್ಯಾರ್ಥಿವೇತನ ನೀಡಲಾಗುತ್ತದೆ.

ವಸತಿ ಸೌಲಭ್ಯ: ವಸತಿ ಘಟಕದಡಿ ಪ್ರತಿ ಫಲಾನುಭವಿಗೆ 1,50,000 ರೂ.ಗಳ ಸಹಾಯಧನವನ್ನು ಮೂರು ಕಂತುಗಳಲ್ಲಿ 25:60:15 ಅನುಪಾತದಲ್ಲಿ ಅಂದರೆ ರೂ.37,500, ರೂ.90,000 ಮತ್ತು ರೂ.22,500 ಅಡಿಯಲ್ಲಿ ಮನೆಗಳ ನಿರ್ಮಾಣಕ್ಕೆ ನೀಡಲಾಗುತ್ತದೆ ಎಂದು ಸಚಿವರು ವಿವರಿಸಿದರು.

ಇದನ್ನೂ ಓದಿ: ಸುಪ್ರೀಂಕೋರ್ಟ್​ ಯಾವುದೇ ಭರವಸೆ ಉಳಿಸಿಕೊಂಡಿಲ್ಲ: ಕಪಿಲ್​ ಸಿಬಲ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.