ಕೋವಿಶೀಲ್ಡ್ , ಕೋವ್ಯಾಕ್ಸಿನ್‌ನ 44 ಕೋಟಿ ಡೋಸ್‌ಗಳಿಗೆ ಆರ್ಡರ್ ಮಾಡಿದ ಕೇಂದ್ರ ! - ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ
44 ಕೋಟಿ ಡೋಸ್ ಲಸಿಕೆಗಳನ್ನು ಅವುಗಳ ತಯಾರಕರು ಆಗಸ್ಟ್ ಮತ್ತು ಡಿಸೆಂಬರ್ 2021 ರ ನಡುವೆ ತಲುಪಿಸಲಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ನವದೆಹಲಿ: ನಿನ್ನೆಯಷ್ಟೇ ದೇಶದ ಎಲ್ಲರಿಗೂ ಉಚಿತ ಲಸಿಕೆ ಹಾಕಲಾಗುತ್ತದೆ ಎಂದು ಮೋದಿ ಘೋಷಣೆ ಮಾಡಿದ್ದರು. ಇದರ ಬೆನ್ನಲ್ಲೇ ಈಗ ಕೇಂದ್ರ ಸರ್ಕಾರ ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ನ 44 ಕೋಟಿ ಡೋಸ್‌ಗಳ ತಯಾರಿಕೆಗೆ ಆದೇಶ ಹೊರಡಿಸಿದೆ.
ಈ 44 ಕೋಟಿ ಡೋಸ್ ಕೊರೊನಾ ಲಸಿಕೆಗಳನ್ನು ಅವುಗಳ ತಯಾರಕರು ಆಗಸ್ಟ್ ಮತ್ತು ಡಿಸೆಂಬರ್ 2021 ರ ನಡುವೆ ತಲುಪಿಸಲಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ನಿನ್ನೆ ರಾಷ್ಟ್ರೀಯ ಕೋವಿಡ್ ವ್ಯಾಕ್ಸಿನೇಷನ್ ಕಾರ್ಯಕ್ರಮದ ಮಾರ್ಗಸೂಚಿಗಳಲ್ಲಿ ಬದಲಾವಣೆಗಳ ಬಗ್ಗೆ ಪ್ರಧಾನಮಂತ್ರಿ ಪ್ರಕಟಿಸಿದ ತಕ್ಷಣ, ಕೇಂದ್ರವು ಸೀರಮ್ ಇನ್ಸಿಟಿಟ್ಯೂಟ್ ಆಫ್ ಇಂಡಿಯಾದ 25 ಕೋಟಿ ಡೋಸ್ ಕೋವಿಶೀಲ್ಡ್ ಮತ್ತು ಭಾರತ್ ಬಯೋಟೆಕ್ನ 19 ಕೋಟಿ ಡೋಸ್‌ಗಳಿಗೆ ಆರ್ಡರ್ ಮಾಡಿದೆ.
ಹೆಚ್ಚುವರಿಯಾಗಿ ಕೊರೊನಾ ಲಸಿಕೆಗಳನ್ನು ಖರೀದಿಸಲು 30 ಪ್ರತಿಶತದಷ್ಟು ಮುಂಗಡವನ್ನು ಸೀರಮ್ ಇನ್ಸಿಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್ಗೆ ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ
ಕೇಂದ್ರವು ಸ್ವೀಕರಿಸಿದ ವಿವಿಧ ಪ್ರಾತಿನಿಧ್ಯಗಳ ಆಧಾರದ ಮೇಲೆ, ಮೇ 1 ರಿಂದ ಪ್ರಾರಂಭವಾದ ವ್ಯಾಕ್ಸಿನೇಷನ್ ತಂತ್ರದ ಮೂರನೇ ಹಂತದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ವಯಸ್ಕರಿಗೆ ವ್ಯಾಕ್ಸಿನೇಷನ್ ನೀಡಲಾಗುತ್ತಿದೆ. ಈಗ ದೇಶಾದ್ಯಂತದ ವ್ಯಾಕ್ಸಿನೇಷನ್ ಡ್ರೈವ್ ಅನ್ನು ಮತ್ತಷ್ಟು ಸಾರ್ವತ್ರಿಕಗೊಳಿಸುವ ಉದ್ದೇಶದಿಂದ, 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ನಾಗರಿಕರೂ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ -19 ಉಚಿತವಾಗಿ ಲಸಿಕೆ ಪಡೆಯಬಹುದು ಎಂದು ಅಧಿಕಾರಿ ಹೇಳಿದ್ದಾರೆ.