ನವದೆಹಲಿ : ದೇಶದಲ್ಲಿ ಇನ್ನೂ ಎರಡು ಕೋವಿಡ್ ಲಸಿಕೆಗಳ ತುರ್ತು ಬಳಕೆಗೆ ಅನುಮತಿ ನೀಡಲಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಅಡಿಯಲ್ಲಿ ಬರುವ ಔಷಧಗಳ ಗುಣಮಟ್ಟ ನಿಯಂತ್ರಣ ಸಂಸ್ಥೆ (CDSCO)ಯ ತಜ್ಞರ ಸಮಿತಿಯು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಪುಣೆ) ತಯಾರಿಸಿರುವ 'ಕೊವೊವಾಕ್ಸ್' ಮತ್ತು ಜೈವಿಕವಾಗಿ ತಯಾರಿಸಿದ 'ಕಾರ್ಬೋವ್ಯಾಕ್ಸ್'ಗೆ ಅನುಮೋದನೆ ನೀಡಲು ಶಿಫಾರಸು ಮಾಡಿದೆ.
ಅಮೆರಿಕ ಮೂಲದ ನೊವಾವೊಕ್ಸ್‌ನಿಂದ ಲಸಿಕೆ ತಂತ್ರಜ್ಞಾನವನ್ನು ಪಡೆದುಕೊಂಡಿರುವ ಎಸ್‌ಐಐ ಕೊವೊವಾಕ್ಸ್ ಹೊಸ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ. ತುರ್ತು ಬಳಕೆಗಾಗಿ ಈ ವರ್ಷದ ಅಕ್ಟೋಬರ್‌ನಲ್ಲಿ ಡ್ರಗ್ ಕಂಟ್ರೋಲ್ ಜನರಲ್ ಆಫ್ ಇಂಡಿಯಾಗೆ ಈ ಸಂಸ್ಥೆ ಅರ್ಜಿ ಸಲ್ಲಿಸಿತ್ತು.
ಬ್ರಿಟನ್ ಮತ್ತು ಅಮೆರಿಕದಲ್ಲಿ ಈ ಲಸಿಕೆ ಬಗ್ಗೆ ನಡೆಸಿದ 2, 3ನೇ ಹಂತದ ಕ್ಲಿನಿಕಲ್ ಪ್ರಯೋಗಗಳ ಫಲಿತಾಂಶಗಳ ಡೇಟಾವನ್ನು ಸಿಡಿಎಸ್‌ಸಿಒಗೆ ಲಗತ್ತಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಿಡಿಎಸ್‌ಸಿಒ ತಜ್ಞರ ತಂಡ ನಿನ್ನೆ ಹೊಸದಾಗಿ ತುರ್ತು ಬಳಕೆಗೆ ಅನುಮತಿ ನೀಡುವಂತೆ ಶಿಫಾರಸು ಮಾಡಿದೆ. ಜೊತೆಗೆ, ಕಾರ್ಬೆವಾಕ್ಸ್‌ಗೆ ಕೆಲವು ನಿರ್ಬಂಧಗಳಿಗೆ ಒಳಪಟ್ಟು ಅನುಮತಿ ನೀಡಲಾಯಿತು.
-
Congratulations India 🇮🇳
— Dr Mansukh Mandaviya (@mansukhmandviya) December 28, 2021 " class="align-text-top noRightClick twitterSection" data="
Further strengthening the fight against COVID-19, CDSCO, @MoHFW_INDIA has given 3 approvals in a single day for:
- CORBEVAX vaccine
- COVOVAX vaccine
- Anti-viral drug Molnupiravir
For restricted use in emergency situation. (1/5)
">Congratulations India 🇮🇳
— Dr Mansukh Mandaviya (@mansukhmandviya) December 28, 2021
Further strengthening the fight against COVID-19, CDSCO, @MoHFW_INDIA has given 3 approvals in a single day for:
- CORBEVAX vaccine
- COVOVAX vaccine
- Anti-viral drug Molnupiravir
For restricted use in emergency situation. (1/5)Congratulations India 🇮🇳
— Dr Mansukh Mandaviya (@mansukhmandviya) December 28, 2021
Further strengthening the fight against COVID-19, CDSCO, @MoHFW_INDIA has given 3 approvals in a single day for:
- CORBEVAX vaccine
- COVOVAX vaccine
- Anti-viral drug Molnupiravir
For restricted use in emergency situation. (1/5)
ಔಷಧಗಳ ಗುಣಮಟ್ಟ ನಿಯಂತ್ರಣ ಸಂಸ್ಥೆ ಕೋವಿಡ್ ಲಸಿಕೆಗಳಾದ ಕೊವೊವಾಕ್ಸ್, ಕಾರ್ಬೋವ್ಯಾಕ್ಸ್ ಹಾಗೂ ಆಂಟಿ-ವೈರಲ್ ಡ್ರಗ್ ಮೊಲ್ನುಪಿರವಿರ್ ತುರ್ತು ಬಳಕೆಗೆ ಅನುಮತಿ ನೀಡಿದೆ ಎಂದು ಆರೋಗ್ಯ ಸಚಿವ ಡಾ ಮನ್ಸುಖ್ ಮಾಂಡವಿಯಾ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಸೆಪ್ಟೆಂಬರ್ ಒಳಗೆ ರೂಪಾಂತರ ವೈರಸ್ ಮಣಿಸುವ ಮತ್ತೊಂದು ದೇಶಿ ಲಸಿಕೆ ಲಭ್ಯ: ಸೀರಮ್ ಸಂಸ್ಥೆ