ETV Bharat / bharat

ಯುಪಿಯಲ್ಲಿ AK -203 ರೈಫಲ್‌ ಉತ್ಪಾದನೆಗೆ ಕೇಂದ್ರ ಗ್ರೀನ್ ಸಿಗ್ನಲ್ - ರಕ್ಷಣಾ ಇಲಾಖೆಗೆ ಎಕೆ-203 ರೈಫಲ್

ಉತ್ತರ ಪ್ರದೇಶದ ಅಮೇಠಿಯ ಕೊರ್ವಾದಲ್ಲಿ ಐದು ಲಕ್ಷಕ್ಕೂ ಹೆಚ್ಚು AK -203 ರೈಫಲ್‌ಗಳನ್ನು ಉತ್ಪಾದಿಸುವ ಯೋಜನೆಗೆ ಕೇಂದ್ರ ಸರ್ಕಾರ ಅನುಮೋಧನೆ ನೀಡಿದೆ.

Manufacturing of AK 203 rifles in amethi,
AK -203 ರೈಫಲ್‌ ಉತ್ಪಾದನೆಗೆ ಕೇಂದ್ರ ಗ್ರೀನ್ ಸಿಗ್ನಲ್
author img

By

Published : Dec 5, 2021, 4:55 AM IST

ನವದೆಹಲಿ: ಕೇಂದ್ರ ಸರ್ಕಾರವು ಉತ್ತರ ಪ್ರದೇಶದ ಅಮೇಠಿಯ ಕೊರ್ವಾದಲ್ಲಿ ಐದು ಲಕ್ಷಕ್ಕೂ ಹೆಚ್ಚು AK -203 ರೈಫಲ್‌ಗಳನ್ನು ಉತ್ಪಾದಿಸುವ ಯೋಜನೆಗೆ ಅಸ್ತು ನೀಡಿದೆ. ಈ ಮೂಲಕ ರಕ್ಷಣಾ ಸಾಮಗ್ರಿಗಳ ತಯಾರಿಕೆಯಲ್ಲಿ ಸ್ವಾವಲಂಬನೆ ಸಾಧಿಸಲು ಕೈಗೊಂಡ ಮಹತ್ವದ ಬೆಳವಣಿಗೆಯಾಗಿದೆ ಎಂದು ಬಣ್ಣಿಸಲಾಗುತ್ತಿದೆ.

AK -203 ರೈಫಲ್‌ಗಳನ್ನು ಉತ್ಪಾದಿಸುವ ಕೇಂದ್ರ ಅಮೇಠಿಯಲ್ಲಿರುವುದರಿಂದ ಉತ್ತರ ಪ್ರದೇಶವು ದೇಶದ ರಕ್ಷಣಾ ಉತ್ಪಾದನಾ ಕೇಂದ್ರವಾಗಲಿದೆ. ಜೊತೆಗೆ ಸ್ಥಳೀಯರಿಗೆ ಹೊಸ ಉದ್ಯೋಗಗಳನ್ನು ಸೃಷ್ಟಿಸಲಿದೆ. ಈ ಯೋಜನೆಯಿಂದ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಉತ್ತಮ ಅವಕಾಶ ಒದಗಿಸಲಿದೆ.

ಸದ್ಯ ಸೇನೆಯಲ್ಲಿರುವ ಇನ್ಸಾಸ್‌ ರೈಫಲ್‌ಗಳ ಸ್ಥಾನವನ್ನು ಎಕೆ–203 ರೈಫಲ್‌ ತುಂಬಲಿವೆ. ಈ ರೈಫಲ್‌ ಹಗುರ ಮತ್ತು ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡಿದ್ದು, 300 ಮೀಟರ್ ವರೆಗೆ ನಿಖರವಾಗಿ ಗುರಿ ಇಟ್ಟು ದಾಳಿ ನಡೆಸಬಹುದಾಗಿದೆ.

ಭಾರತೀಯ ಸೇನೆಯ ಕಾರ್ಯಾಚರಣೆಗಳಿಗೆ ಈ ರೈಫಲ್​ಗಳು ಪರಿಣಾಮಕಾರಿ ಅಸ್ತ್ರವಾಗಲಿವೆ ಎಂದು ತಿಳಿದುಬಂದಿದೆ. ಭಾರತವು ಈ ಯೋಜನೆಯನ್ನು ರಷ್ಯಾದ ಸಹಭಾಗಿತ್ವದಲ್ಲಿ ಕೈಗೊಳ್ಳುತ್ತಿದೆ. ಇದು ರಕ್ಷಣಾ ವಲಯದಲ್ಲಿ ಉಭಯ ದೇಶಗಳ ಪಾಲುದಾರಿಕೆ ಪ್ರತಿಬಿಂಬಿಸುತ್ತದೆ.

(ಇದನ್ನೂ ಓದಿ: ಪತ್ನಿ, ಇಬ್ಬರು ಮಕ್ಕಳನ್ನು ಕೊಂದು ಇದೆಲ್ಲ ಕೊರೊನಾ ಮುಕ್ತಿಗಾಗಿ ಎಂದ ಕಿಲ್ಲರ್‌ ವೈದ್ಯ..!)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.