ETV Bharat / bharat

ಕೋವಿಡ್ ನೀತಿ.. ಸರ್ಕಾರಕ್ಕೆ ತಿವಿದ ನ್ಯಾಯಾಂಗ

ಲಸಿಕೆ ಕುರಿತ ಪೇಟೆಂಟ್‌ಗಳಿಗೆ (ಹಕ್ಕುಸ್ವಾಮ್ಯ) ಸಂಬಂಧಿಸಿದ ವಾದಗಳನ್ನು ಕಳೆದ ಅಕ್ಟೋಬರ್‌ನಲ್ಲಿ ಬದಿಗಿಟ್ಟ ಭಾರತ ಮತ್ತು ದಕ್ಷಿಣ ಆಫ್ರಿಕಾ ಜಗತ್ತಿನ ಎಲ್ಲ ದೇಶಗಳಿಗೆ ವೇಗ ಮತ್ತು ಅಗ್ಗದ ವ್ಯಾಕ್ಸಿನೇಷನ್ ಪಡೆಯಲು ಅವಕಾಶವಾಗಬೇಕು ಎಂದು ಒತ್ತಾಯಿಸಿದ್ದವು.

covid policy
covid policy
author img

By

Published : May 11, 2021, 9:18 PM IST

ಜಗತ್ತಿನಾದ್ಯಂತ 174 ದೇಶಗಳಲ್ಲಿ ಈಗಾಗಲೇ 125 ಕೋಟಿ ಡೋಸ್ ಲಸಿಕೆಗಳನ್ನು ಜನರಿಗೆ ನೀಡಲಾಗಿದ್ದು, ಇಡೀ ಮನುಕುಲವೇ ಕೋವಿಡ್-19ರ ವಿರುದ್ಧ ದೊಡ್ಡ ಯುದ್ಧವನ್ನೇ ನಡೆಸುತ್ತಿದೆ. ಎಲ್ಲರೂ ಸುರಕ್ಷಿತವಾಗಿರುವವರೆಗೂ ಯಾರೂ ಸುರಕ್ಷಿತವಲ್ಲ ಎಂದು ಈಗಾಗಲೇ ಹೇಳಿರುವ ವಿಶ್ವ ಆರೋಗ್ಯ ಸಂಸ್ಥೆ ಲಸಿಕೆ ನೀಡಿಕೆಯ ಪ್ರಮಾಣದ ಕುರಿತು ಆತಂಕ ವ್ಯಕ್ತಪಡಿಸಿದೆ. ಏಕೆಂದರೆ, ಶ್ರೀಮಂತ ದೇಶಗಳಲ್ಲಿ ಲಸಿಕಾಕರಣವು ಬಡ ದೇಶಗಳಲ್ಲಿರುವ ಲಸಿಕಾಕರಣಕ್ಕಿಂತ 25 ಪಟ್ಟು ಹೆಚ್ಚಿನ ವೇಗದಲ್ಲಿ ಮುಂದುವರಿಯುತ್ತಿರುವುದನ್ನು ಅದು ಸೂಚಿಸಿದೆ. ಇಂತಹ ಲಸಿಕಾ ಅಸಮಾನತೆಯು ಇಡೀ ಜಗತ್ತಿಗೇ ಆತ್ಮಹತ್ಯಾಕಾರಕ ಎಂಬುದು ವಿಶ್ವ ಆರೋಗ್ಯ ಸಂಸ್ಥೆಯ ಎಚ್ಚರಿಕೆ.

ಲಸಿಕೆ ಕುರಿತ ಪೇಟೆಂಟ್‌ಗಳಿಗೆ (ಹಕ್ಕುಸ್ವಾಮ್ಯ) ಸಂಬಂಧಿಸಿದ ವಾದಗಳನ್ನು ಕಳೆದ ಅಕ್ಟೋಬರ್‌ನಲ್ಲಿ ಬದಿಗಿಟ್ಟ ಭಾರತ ಮತ್ತು ದಕ್ಷಿಣ ಆಫ್ರಿಕಾ ಜಗತ್ತಿನ ಎಲ್ಲ ದೇಶಗಳಿಗೆ ವೇಗ ಮತ್ತು ಅಗ್ಗದ ವ್ಯಾಕ್ಸಿನೇಷನ್ ಪಡೆಯಲು ಅವಕಾಶವಾಗಬೇಕು ಎಂದು ಒತ್ತಾಯಿಸಿದ್ದವು. ಸದ್ಯ ಜಗತ್ತಿನ ಏಕೈಕ ಶಕ್ತಿಶಾಲಿ ದೇಶವಾಗಿರುವ ಅಮೆರಿಕವು ಪ್ರಸ್ತಾಪದ ಕಡೆಗೆ ಸದ್ಯ ಅನುಕೂಲಕರವಾಗಿರುವಂತೆ ಕಂಡರೂ, ಈ ವಿಷಯವು ಒಳಗೊಂಡಿರುವ ಎಲ್ಲಾ ಜಟಿಲತೆಗಳನ್ನು ಚರ್ಚಿಸಿದ ನಂತರ ತರ್ಕಬದ್ಧ ನೀತಿಯೊಂದನ್ನು ರೂಪಿಸಲು ಕನಿಷ್ಠ ಕೆಲವು ತಿಂಗಳಾದರೂ ಬೇಕಾಗುತ್ತವೆ.

ಜನಸಂಖ್ಯೆಯ ವಿಷಯಕ್ಕೆ ಬಂದರೆ ಭಾರತವು ಜಗತ್ತಿನ ಹಲವಾರು ದೇಶಗಳಿಗೆ ಸಮಾನವಾಗಿದೆ. ಅಂದರೆ, ಜಗತ್ತಿನಲ್ಲಿ ಉತ್ಪತ್ತಿಯಾಗುವ ಲಸಿಕೆಯ ಶೇಕಡಾ 60 ರಷ್ಟು ಲಸಿಕೆ ನಮ್ಮಲ್ಲಿಯೇ ಉತ್ಪಾದನೆಯಾಗಿದೆ. ಆದರೆ, ದೂರದೃಷ್ಟಿಯ ಕೊರತೆಯಿಂದಾಗಿ ಕೋವಿಡ್ ಲಸಿಕೆ ನೀಡುವ ಸಂದರ್ಭದಲ್ಲಿ ದೇಶವು ಹಿನ್ನಡೆ ಅನುಭವಿಸಿತು. 45 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಲಸಿಕೆ ನೀಡುವ ಜವಾಬ್ದಾರಿಯನ್ನು ಕೇಂದ್ರ ಸರ್ಕಾರವೇ ವಹಿಸಿಕೊಂಡಿದ್ದರೂ, ಒಂದು ತಿಂಗಳ ಹಿಂದೆ ನೀಡಲಾದ ಲಸಿಕೆ ಪ್ರಮಾಣಕ್ಕೆ ಹೋಲಿಸಿದರೆ ಪ್ರಸ್ತುತ ಲಸಿಕಾಕರಣ ಪ್ರಮಾಣವು ಅರ್ಧದಷ್ಟು ಕುಸಿದಿದೆ. ಮೇ 1 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಹಾಕುವ ಪ್ರಸ್ತಾಪಕ್ಕೂ ಇದರಿಂದಾಗಿ ಹೊಡೆತ ಬಿದ್ದಿದೆ. ಅಪೇಕ್ಷಿತ ಉತ್ಪಾದನಾ ಮಟ್ಟವನ್ನು ತಿಂಗಳಿಗೆ 10 ಕೋಟಿಯಿಂದ 11 ಕೋಟಿ ಪ್ರಮಾಣಕ್ಕೆ ಹೆಚ್ಚಿಸಲು ಇನ್ನೂ ಒಂದು ತಿಂಗಳಾದರೂ ಬೇಕಾಗುತ್ತದೆ ಎಂಬುದು ನಿಜಕ್ಕೂ ಕಳವಳಕಾರಿ. ಒಂದು ಲಕ್ಷಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳೊಂದಿಗೆ 12 ರಾಜ್ಯಗಳಲ್ಲಿ ಹಾನಿಯುಂಟು ಮಾಡುತ್ತಿರುವ ಕೋವಿಡ್ ಸುನಾಮಿಯ ಅಬ್ಬರ ಜೂನ್ ಅಂತ್ಯದ ವೇಳೆಗೆ ಮಾತ್ರ ಕಡಿಮೆಯಾಗುತ್ತದೆ ಎಂಬುದು ಆತಂಕಕಾರಿ ಸಂಗತಿ. ಈ ಕಷ್ಟಕರ ಪರಿಸ್ಥಿತಿಯಲ್ಲಿ, ನ್ಯಾಯಾಂಗದ ಪೂರ್ವಭಾವಿ ನಿಲುವು ಮಾತ್ರ ಭರವಸೆಯ ಬೆಳಕನ್ನು ತರುತ್ತಿದೆ.

ಪ್ರಸ್ತುತ ನಡೆಯುತ್ತಿರುವ ಲಸಿಕಾರಣ ವೇಗದಲ್ಲಿ, ದೇಶದ 18 ವರ್ಷಕ್ಕಿಂತ ಮೇಲ್ಪಟ್ಟ 80 ಕೋಟಿ ಜನರಿಗೆ ಲಸಿಕೆ ಹಾಕಲು ಕನಿಷ್ಠ ಎಂಟು ತಿಂಗಳುಗಳಾದರೂ ಬೇಕಾಗುತ್ತವೆ. ಕೇಂದ್ರದ ಇಂತಹ ಲಸಿಕೆ ನೀತಿಯು ಜನರ ಬದುಕಿನ ಹಕ್ಕನ್ನು ಕಿತ್ತುಕೊಳ್ಳುತ್ತಿದೆ ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ಹೇಳಿದೆ. ಸಮಗ್ರ ಲಸಿಕಾರಣ ನೀತಿಯನ್ನು ರೂಪಿಸುವಂತೆ ಅದು ಈಗ ಸರ್ಕಾರಕ್ಕೆ ಆದೇಶ ನೀಡಿದೆ.

ಕೇಂದ್ರವು ಉಚಿತ ಲಸಿಕಾಕರಣ ಕಾರ್ಯಕ್ರಮವನ್ನು ಮೊದಲಿನಂತೆ ಮುಂದುವರಿಸಬೇಕಾದರೆ, ರಾಜ್ಯಗಳು ಮೂಲ ವೈದ್ಯಕೀಯ ಮೂಲಸೌಕರ್ಯಗಳನ್ನು ಸುಧಾರಿಸಲು ಮತ್ತು ಆಸ್ಪತ್ರೆಗಳನ್ನು ಅಭಿವೃದ್ಧಿಪಡಿಸಲು ಗಮನಹರಿಸಬೇಕು ಎಂದು ಆರ್‌ಬಿಐ ಮಾಜಿ ಗವರ್ನರ್ ಸಿ. ರಂಗರಾಜನ್ ಸಲಹೆ ನೀಡಿದ್ದಾರೆ. ಅವರ ಮಾತುಗಳು ನಿಜಕ್ಕೂ ಕಾರ್ಯರೂಪಕ್ಕೆ ಬರಲು ಯೋಗ್ಯವಾಗಿವೆ. ಇತರ ದೇಶಗಳು ಶೇಕಡಾ ೫೦ರಷ್ಟು ಪರೀಕ್ಷೆಗಳನ್ನು ನಡೆಸುವ ಮೂಲಕ ಕೋವಿಡ್ ಬಲಿಪಶುಗಳನ್ನು ಉಳಿಸಲು ಸಮರ್ಥವಾಗಿದ್ದರೆ, ಭಾರತ ಕೇವಲ ಶೇಕಡಾ 20ರಷ್ಟು ಪರೀಕ್ಷೆಗಳನ್ನು ಮಾತ್ರ ನಡೆಸಲು ಯಶಸ್ವಿಯಾಗಿದೆ. ಈ ಮೆದು ಧೋರಣೆಯು ಕೋವಿಡ್ ವೈರಸ್‌ಗೆ ಹೊಸ ಶಕ್ತಿಯನ್ನು ನೀಡುವಂತಾಗಿದೆ.

ಆಮ್ಲಜನಕ ಮತ್ತು ವೆಂಟಿಲೇಟರ್‌ಗಳ ಕೊರತೆಯಿಂದಾಗಿ ನಮ್ಮ ನೂರಾರು ದೇಶವಾಸಿಗಳು ಸತ್ತಿದ್ದಾರೆ ಎಂಬ ಅಂಶವು ಹೃದಯವನ್ನು ಭಾರವಾಗಿಸುವಂಥದು. ಸಹಾಯಕ್ಕಾಗಿ ಪದೇ ಪದೇ ಮನವಿ ಮಾಡಿದ ನಂತರ ತಾಳ್ಮೆ ಕಳೆದುಕೊಂಡಿರುವ ರಾಜ್ಯ ಸರ್ಕಾರಗಳು ಆಮ್ಲಜನಕಕ್ಕಾಗಿ ಕಾನೂನು ಹೋರಾಟಗಳ ಮೊರೆ ಹೋಗುವಂತಾಯಿತು. ನ್ಯಾಯಾಲಯಗಳು ಅವರನ್ನು ತರಾಟೆಗೆ ತೆಗೆದುಕೊಳ್ಳುವವರೆಗೂ ಅಧಿಕಾರಿಗಳು ಸೂಕ್ತ ಬಜೆಟ್ ನಿರ್ಧರಿಸಲು ವಿಫಲರಾಗಿದ್ದರು ಎಂಬುದು ದುರದೃಷ್ಟಕರದ ಸಂಗತಿ.

ರಾಜ್ಯಗಳಿಗೆ ಸೇರಿದ ಆಸ್ಪತ್ರೆಗಳಲ್ಲಿ ಐಸಿಯು ಮತ್ತು ಸಾಮಾನ್ಯ ಹಾಸಿಗೆಗಳ ಅನುಪಾತದ ಆಧಾರದ ಮೇಲೆ ಆಮ್ಲಜನಕ ಕೋಟಾವನ್ನು ನಿಗದಿಪಡಿಸಲಾಗಿದೆ ಎಂದು ಕೇಂದ್ರವು ಮಂಡಿಸಿದ ಟೊಳ್ಳು ವಾದವನ್ನು ಒಪ್ಪಿಕೊಳ್ಳಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಕೇಂದ್ರದ ಆಮ್ಲಜನಕ ಕೋಟಾ ನೀತಿಯಲ್ಲಿ ಸುಧಾರಣೆ ಕೈಗೊಳ್ಳುವಂತೆ ಅದು ಕರೆ ನೀಡಿದೆ. ಮುಂದಿನ ಹಂತದ ಕೋವಿಡ್ ಅಲೆಯ ಅಪ್ಪಳಿಸುವಿಕೆಯಲ್ಲಿ ಮಕ್ಕಳೂ ಸಹ ಬಲಿಯಾಗಬಹುದು ಎಂಬ ಅಂಶವನ್ನು ಸೂಚಿಸುವ ವಿಶ್ಲೇಷಣೆಗಳನ್ನು ಉಲ್ಲೇಖಿಸಿರುವ ಸುಪ್ರೀಂ ಕೋರ್ಟ್, ಸವಾಲನ್ನು ಎದುರಿಸಲು ಪೂರ್ವಸಿದ್ಧತಾ ವ್ಯವಸ್ಥೆಗಳನ್ನು ಕೈಗೊಳ್ಳುವಂತೆ ಸೂಚಿಸಿದೆ. ವಿಪರ್ಯಾಸದ ಸಂಗತಿ ಎಂದರೆ, ಆಮ್ಲಜನಕ ಉತ್ಪಾದನಾ ಸಾಧನಗಳ ಮೇಲಿನ ಜಿಎಸ್‌ಟಿ ತೆರಿಗೆಯನ್ನು ಸಡಿಲಿಸಲು ಕೇಂದ್ರ ಸರಕಾರ ನಿರಾಕರಿಸಿದಾಗ ನ್ಯಾಯಾಲಯಗಳು ಮಧ್ಯ ಪ್ರವೇಶಿಸಬೇಕಾಯಿತು. ನ್ಯಾಯಾಲಯಗಳು ತಿವಿದು ಎಚ್ಚರಿಸುವವರೆಗೂ ಸರ್ಕಾರವು ಮಾನವೀಯವಾಗಿ ವರ್ತಿಸದೇ ಇರುವುದು ನಿಜಕ್ಕೂ ದುರದೃಷ್ಟಕರ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.