ನವದೆಹಲಿ: ದೇಶದಲ್ಲಿ ಏಪ್ರಿಲ್ 11ರಿಂದ ಏಪ್ರಿಲ್ 14ರವರೆಗೆ ಟಿಕಾ ಉತ್ಸವ ಆಚರಣೆ ಮಾಡಲಾಗಿದೆ. ಆದರೆ, ಅನೇಕ ರಾಜ್ಯಗಳಿಗೆ ಕೇಂದ್ರ ಸರ್ಕಾರ ಹೆಚ್ಚಿನ ಪ್ರಮಾಣದಲ್ಲಿ ವ್ಯಾಕ್ಸಿನೇಷನ್ ಪೂರೈಕೆ ಮಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಪ್ರಿಯಾಂಕಾ ಆಕ್ರೋಶ ಹೊರಹಾಕಿದ್ದಾರೆ.
ವಿವಿಧ ರಾಜ್ಯಗಳಲ್ಲಿ ಕೋವಿಡ್ ವ್ಯಾಕ್ಸಿನೇಷನ್ ನೀಡಿಕೆ ಕಡಿಮೆಯಾಗುತ್ತಿರುವ ವಿಚಾರವನ್ನ ಮುಂದಿಟ್ಟುಕೊಂಡು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ನೇತೃತ್ವದ ಸರ್ಕಾರ ಏಪ್ರಿಲ್ನಲ್ಲಿ ಟಿಕಾ ಉತ್ಸವ ಆಚರಣೆ ಮಾಡಿತು. ಆದರೆ ಕೋವಿಡ್ ವಿರುದ್ಧ ಹೇರಳವಾಗಿ ಲಸಿಕೆ ನೀಡುವಲ್ಲಿ ಸಂಪೂರ್ಣವಾಗಿ ವಿಫಲಗೊಂಡಿದೆ ಎಂದಿದ್ದಾರೆ.
ಭಾರತ ಲಸಿಕೆ ಉತ್ಪಾದನೆ ಮಾಡುವ ಅತಿದೊಡ್ಡ ದೇಶವಾಗಿದೆ. ಆದರೂ ಲಸಿಕೆ ನೀಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ಸಂಪೂರ್ಣವಾಗಿ ವಿಫಲಗೊಂಡಿದ್ದು, ಕಳೆದ 30 ದಿನಗಳಲ್ಲಿ ವ್ಯಾಕ್ಸಿನೇಷನ್ ಹಂಚಿಕೆ ಶೇ.82ರಷ್ಟು ಕುಸಿತಗೊಂಡಿದೆ ಎಂದಿದ್ದಾರೆ.
-
भारत सबसे बड़ा वैक्सीन उत्पादक देश है।
— Priyanka Gandhi Vadra (@priyankagandhi) May 12, 2021 " class="align-text-top noRightClick twitterSection" data="
भाजपा सरकार ने 12 अप्रैल को टीका उत्सव मना दिया, लेकिन वैक्सीन की कोई व्यवस्था नहीं की और इन 30 दिनों में हमारे टीकाकरण में 82% की गिरावट आई।
मोदी जी वैक्सीन फैक्ट्रियों में गए, फोटो भी खिंचाई मगर उनकी सरकार ने वैक्सीन का पहला ऑर्डर 1/2 pic.twitter.com/5VEOhQNbmN
">भारत सबसे बड़ा वैक्सीन उत्पादक देश है।
— Priyanka Gandhi Vadra (@priyankagandhi) May 12, 2021
भाजपा सरकार ने 12 अप्रैल को टीका उत्सव मना दिया, लेकिन वैक्सीन की कोई व्यवस्था नहीं की और इन 30 दिनों में हमारे टीकाकरण में 82% की गिरावट आई।
मोदी जी वैक्सीन फैक्ट्रियों में गए, फोटो भी खिंचाई मगर उनकी सरकार ने वैक्सीन का पहला ऑर्डर 1/2 pic.twitter.com/5VEOhQNbmNभारत सबसे बड़ा वैक्सीन उत्पादक देश है।
— Priyanka Gandhi Vadra (@priyankagandhi) May 12, 2021
भाजपा सरकार ने 12 अप्रैल को टीका उत्सव मना दिया, लेकिन वैक्सीन की कोई व्यवस्था नहीं की और इन 30 दिनों में हमारे टीकाकरण में 82% की गिरावट आई।
मोदी जी वैक्सीन फैक्ट्रियों में गए, फोटो भी खिंचाई मगर उनकी सरकार ने वैक्सीन का पहला ऑर्डर 1/2 pic.twitter.com/5VEOhQNbmN
ಇದನ್ನೂ ಓದಿ: ಗುಜರಾತ್ನ ಕೋವಿಡ್ ಕೇರ್ ಸೆಂಟರ್ನಲ್ಲಿ ಬೆಂಕಿ: ರೋಗಿಗಳ ಸ್ಥಳಾಂತರ
ಟ್ವೀಟ್ ಮೂಲಕ ಇದರ ಮಾಹಿತಿ ಶೇರ್ ಮಾಡಿಕೊಂಡಿರುವ ಪ್ರಿಯಾಂಕಾ, ಏಪ್ರಿಲ್ 12 ಮತ್ತು ಮೇ 9ರ ಮಧ್ಯೆ ಲಸಿಕೆ ನೀಡಿರುವ ಗ್ರಾಫಿಕ್ಸ್ ಹಂಚಿಕೊಂಡಿದ್ದಾರೆ. ಜನರಿಗೆ ಲಸಿಕೆ ನೀಡುವ ವಿಷಯದಲ್ಲಿ ಭಾರತವು ಯುಎಸ್, ಯುಕೆ, ಟರ್ಕಿ ಮತ್ತು ಫ್ರಾನ್ಸ್ನಂತಹ ದೇಶಗಳಿಂದ ಹಿಂದೆ ಇದೆ ಎಂದಿದ್ದಾರೆ. ಮೋದಿ ಲಸಿಕೆ ಉತ್ಪಾದನೆ ಮಾಡುವ ಕಾರ್ಖಾನೆಗಳಿಗೆ ಹೋಗಿ, ಛಾಯಾಚಿತ್ರ ಸಹ ಕ್ಲಿಕ್ ಮಾಡಿಕೊಂಡಿದ್ದಾರೆ. ಆದರೆ ಹೆರಳವಾಗಿ ಲಸಿಕೆ ನೀಡುವುದರಲ್ಲಿ ಸಂಪೂರ್ಣವಾಗಿ ವೈಫಲ್ಯ ಅನುಭವಿಸಿದೆ ಎಂದಿದ್ದಾರೆ.
ಕಳೆದ ಅನೇಕ ವಾರಗಳಿಂದ ವಿವಿಧ ರಾಜ್ಯಗಳು ತಮಗೆ ಹೇರಳವಾಗಿ ಕೋವಿಡ್ ಲಸಿಕೆ ಲಭ್ಯವಾಗುತ್ತಿಲ್ಲ ಎಂಬ ಆಪಾದನೆ ಸಹ ಮಾಡುತ್ತಿದ್ದು, ಇದೇ ವಿಚಾರವನ್ನಿಟ್ಟುಕೊಂಡು ಪ್ರಿಯಾಂಕಾ ಇದೀಗ ವಾಗ್ದಾಳಿ ನಡೆಸಿದ್ದಾರೆ.