ETV Bharat / bharat

ಅಂಕಲೇಶ್ವರದಲ್ಲಿ ಕೋವ್ಯಾಕ್ಸಿನ್ ತಯಾರಿಕೆಗೆ ಸರ್ಕಾರದ ಅನುಮತಿ: ಮಾಂಡವಿಯಾ - ಕೇಂದ್ರ ಆರೋಗ್ಯ ಸಚಿವ ಮನ್ಸುಕ್​ ಮಾಂಡವಿಯಾ

ಅಂಕಲೇಶ್ಬರದಲ್ಲಿರುವ ಭಾರತ್​ ಬಯೋಟೆಕ್​​​​ ಘಟಕದಲ್ಲಿ ಕೋವ್ಯಾಕ್ಸಿನ್​ ಉತ್ಪಾದನೆಗೆ ಭಾರತ ಸರ್ಕಾರ ಅನುಮೋದನೆ ನೀಡಿದೆ. ಈ ಸಂಬಂಧ ಆರೋಗ್ಯ ಸಚಿವ ಮನ್ಸುಖ್​ ಮಾಂಡವಿಯಾ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

Govt approves Bharat Biotech's Ankleshwar plant

author img

By

Published : Aug 10, 2021, 4:15 PM IST

Updated : Aug 10, 2021, 7:47 PM IST

ನವದೆಹಲಿ: ಭಾರತ್​ ಬಯೋಟೆಕ್​​ನ ಅಂಕಲೇಶ್ವರದ ಕೋವ್ಯಾಕ್ಸಿನ್​ ಉತ್ಪಾದನಾ ಘಟಕದಲ್ಲಿ ಲಸಿಕೆ ತಯಾರಿಕೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್​​ ಮಾಂಡವಿಯಾ ತಿಳಿಸಿದ್ದಾರೆ.

ಈ ಸಂಬಂಧ ಅವರು ಟ್ವೀಟ್​ ಮಾಡಿದ್ದು, ಗುಜರಾತ್​ನ ಅಂಕಲೇಶ್ವರದ ಲಸಿಕಾ ಉತ್ಪಾದನಾ ಘಟಕದಲ್ಲಿ ಕೋವಿಡ್​​​​ ತಡೆಗಟ್ಟುವ ಸಾಮರ್ಥ್ಯ ಹೊಂದಿರುವ ಕೋವ್ಯಾಕ್ಸಿನ್​ ತಯಾರಿಕೆಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿಸಿದೆ. ಈ ಅನುಮೋದನೆಯಿಂದ ದೇಶದಲ್ಲಿ ಇರುವ ಕೋವಿಡ್​ ಹೋಗಲಾಡಿಸಲು ಇದು ಸಹಕಾರಿ ಆಗಲಿದೆ. ಅಷ್ಟೇ ಅಲ್ಲ ಲಸಿಕೆ ಪೂರೈಕೆಯಲ್ಲೂ ಹೆಚ್ಚಳವಾಗಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

"ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆಶಯದಂತೆ ದೇಶದ ಎಲ್ಲರಿಗೂ ಲಸಿಕೆ ಎಂಬ ಘೋಷವಾಖ್ಯೆ ಈ ಉತ್ಪಾದನಾ ಘಟಕಕ್ಕೆ ಅನುಮೋದನೆ ನೀಡುವುದರೊಂದಿಗೆ ಸಹಕಾರವಾಗಲಿದೆ. ಅಷ್ಟೇ ಅಲ್ಲ ದೇಶದಲ್ಲಿ ಲಸಿಕಾ ಲಭ್ಯತೆಯನ್ನು ಹೆಚ್ಚಿಸಲಿದೆ ಎಂದು ಇದೇ ವೇಳೆ ಮನ್ಸುಖ್​​ ಮಾಂಡವಿಯಾ ಹೇಳಿದರು.

ಈ ವರ್ಷದ ಮೇ ತಿಂಗಳಲ್ಲಿ ಭಾರತ್ ಬಯೋಟೆಕ್ ಸಂಸ್ಥೆ ಅಂಕಲೇಶ್ವರದಲ್ಲಿ ಇರುವ ತನ್ನ ಉತ್ಪಾದನಾ ಘಟಕದಿಂದ 200 ಮಿಲಿಯನ್​​​ ಲಸಿಕೆ ಉತ್ಪಾದಿಸಲು ಯೋಜಿಸಿದೆ ಎಂದು ಘೋಷಣೆ ಮಾಡಿತ್ತು. ಆ ಘೋಷಣೆಯಂತೆ ಇದೀಗ ಕಂಪನಿ ಲಸಿಕಾ ಉತ್ಪಾದನೆಗೆ ಮುಂದಾಗಿದೆ.

Last Updated : Aug 10, 2021, 7:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.