ETV Bharat / bharat

2022ನೇ ಸಾಲಿನ ಪದ್ಮ ಪ್ರಶಸ್ತಿ ಪ್ರಕಟ.. ಕರ್ನಾಟಕದ ಐವರು ಸಾಧಕರಿಗೆ ಒಲಿದ ಗೌರವ

author img

By

Published : Jan 25, 2022, 8:16 PM IST

Updated : Jan 25, 2022, 8:44 PM IST

2022ನೇ ಸಾಲಿನ ಪದ್ಮ ಪ್ರಶಸ್ತಿ ಪ್ರಕಟಗೊಂಡಿದ್ದು, ಕನ್ನಡದ ಐವರು ಸಾಧಕರಿಗೆ ಅತ್ಯುನ್ನತ ಗೌರವ ಪದ್ಮಶ್ರೀ ನೀಡಿ ಗೌರವಿಸಲಾಗಿದೆ.

Govt announces Padma Awards 2022
Govt announces Padma Awards 2022

ನವದೆಹಲಿ: 2022ನೇ ಸಾಲಿನ ಪದ್ಮ ಪ್ರಶಸ್ತಿ ಪ್ರಕಟಿಸಲಾಗಿದೆ. ಕನ್ನಡದ ಹಿರಿಯ ಸಾಹಿತಿ, ದಲಿತ ಕವಿ ದಿ. ಸಿದ್ದಲಿಂಗಯ್ಯ ಅವರಿಗೆ ಮರಣೋತ್ತರವಾಗಿ ಪದ್ಮಶ್ರೀ ಗೌರವ ಒಲಿದಿದೆ. ಉಳಿದಂತೆ ರಾಜ್ಯದ ನಾಲ್ವರು ಗಣ್ಯರು ಸಹ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕರ್ನಾಟಕದ ಐವರಿಗೆ ಒಲಿದ ಪದ್ಮಶ್ರೀ ಗೌರವ

  • ಕಲಾ ವಿಭಾಗದಲ್ಲಿ ಹೆಚ್​.ಆರ್​​ ಕೇಶವಮೂರ್ತಿ
  • ವಿಜ್ಞಾನ ವಿಭಾಗದಲ್ಲಿ ಸುಬ್ಬಣ್ಣ ಅಯ್ಯಪ್ಪಗೆ ಗೌರವ​​
  • ದಲಿತ ಕವಿ, ಸಾಹಿತಿ ದಿ. ಡಾ. ಸಿದ್ದಲಿಂಗಯ್ಯ ಅವರಿಗೆ ಮರಣೋತ್ತರ ಪ್ರಶಸ್ತಿ
  • ಕೃಷಿ ಇಲಾಖೆಯಲ್ಲಿ ಅಮಾಯಿ ಮಹಾಲಿಂಗ ನಾಯ್ಕ್​ಗೆ ಗೌರವ
  • ಅಬ್ದುಲ್ ಖಾದರ್ ನಡಕಟ್ಟಿ- ಕೃಷಿ ಸಂಶೋಧನೆಗೆ ಪ್ರಶಸ್ತಿ

2022ರಲ್ಲಿ 107 ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆ ಮಾಡಿರುವ ಕೇಂದ್ರ ಸರ್ಕಾರ ಒಟ್ಟು 128 ಸಾಧಕರಿಗೆ ಮೂರು ವಿಭಾಗದ ಪದ್ಮ ಪ್ರಶಸ್ತಿ ನೀಡಿದೆ.

ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಪದ್ಮ ವಿಭೂಷಣ ಪ್ರಶಸ್ತಿ ಪಡೆದ ನಾಲ್ವರು ಸಾಧಕರು

  • ಕಲಾ ವಿಭಾಗದಲ್ಲಿ ಮಹಾರಾಷ್ಟ್ರದ ಪ್ರಭಾ ಅತ್ರೆ ಅವರಿಗೆ ಗೌರವ
  • ಕಲಾ ಮತ್ತು ಶಿಕ್ಷಣ ವಿಭಾಗದಲ್ಲಿ ಉತ್ತರ ಪ್ರದೇಶದ ಶ್ರೀ ರಾಧೆಶ್ಯಾಮ್​ (ಮರಣೋತ್ತರ)
  • ಸಶಸ್ತ್ರ ಪಡೆಗಳ ಸಿಬ್ಬಂದಿ ಮುಖ್ಯಸ್ಥ ಸಿಡಿಎಸ್ ಜನರಲ್ ಬಿಪಿನ್​ ರಾವತ್​ಗೆ ಮರಣೋತ್ತರ ಪುರಸ್ಕಾರ
  • ಮರಣೋತ್ತರವಾಗಿ ರಾಜಕಾರಣಿ ಕಲ್ಯಾಣ್ ಸಿಂಗ್​ ಅವರಿಗೆ ಪದ್ಮ ವಿಭೂಷಣ​
    • Govt announces Padma Awards 2022

      CDS Gen Bipin Rawat to get Padma Vibhushan (posthumous), Congress leader Ghulam Nabi Azad to be conferred with Padma Bhushan pic.twitter.com/Qafo6yiDy5

      — ANI (@ANI) January 25, 2022 " class="align-text-top noRightClick twitterSection" data=" ">

ಉಳಿದಂತೆ 17 ಸಾಧಕರಿಗೆ ಪದ್ಮ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದ್ದು, ಪ್ರಮುಖವಾಗಿ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್, ಶ್ರೀ ವಿಕ್ಟರಿ ಬ್ಯಾನರ್ಜಿ, ನಟರಾಜನ್​ ಚಂದ್ರಶೇಖರನ್​, ಕೃಷ್ಣ ಎಲ್ಲಾ, ಗೂಗಲ್ ಸಿಇಒ ಸುಂದರ್ ಪಿಚೈ, ಮೈಕ್ರೋಸಾಫ್ಟ್​ ಸಿಇಒ ಸತ್ಯ ನಾದೆಲ್ಲ ಸೇರಿಕೊಂಡಿದ್ದಾರೆ.

ಪದ್ಮ ಪ್ರಶಸ್ತಿಗಳನ್ನು 1954 ರಲ್ಲಿ ಸ್ಥಾಪಿಸಲಾಗಿದ್ದು, ಶಿಕ್ಷಣ, ಕಲೆ, ಸಾಹಿತ್ಯ, ವಿಜ್ಞಾನ, ನಟನೆ, ಸಮಾಜ ಸೇವೆ ಮತ್ತು ಸಾರ್ವಜನಿಕ ವ್ಯವಹಾರಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅವರ ವಿಶಿಷ್ಟ ಕೊಡುಗೆ ಗುರುತಿಸಿ ಈ ಗೌರವ ನೀಡಲಾಗುತ್ತಿದೆ. 2022ನೇ ಸಾಲಿನ ಪ್ರಶಸ್ತಿ ಪುರಸ್ಕೃತರಲ್ಲಿ 34 ಮಹಿಳೆಯರು ಮತ್ತು 10 ವಿದೇಶಿಯರು ಮತ್ತು 13 ಮರಣೋತ್ತರ ಪ್ರಶಸ್ತಿ ಪುರಸ್ಕೃತರು ಇದ್ದಾರೆ.

Last Updated : Jan 25, 2022, 8:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.