ETV Bharat / bharat

ಗುಜರಾತಿ, ರಾಜಸ್ಥಾನಿಗಳು ಮುಂಬೈ ತೊರೆದರೆ ವಾಣಿಜ್ಯ ನಗರವೆಂಬ ಗುರುತು ಕಳೆದುಹೋಗುತ್ತದೆ: ವಿವಾದ ಸೃಷ್ಟಿಸಿದ ರಾಜ್ಯಪಾಲ ಕೊಶ್ಯಾರಿ - ಮಹಾರಾಷ್ಟ್ರದಲ್ಲಿ ರಾಜಕೀಯ ಬೆಳವಣಿಗಳು

ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಗುಜರಾತಿ ಮತ್ತು ರಾಜಸ್ಥಾನಿಗಳು ಮುಂಬೈ ತೊರೆದರೆ ಆರ್ಥಿಕ ಬಂಡವಾಳದ ಗುರುತು ಕಳೆದುಹೋಗುತ್ತದೆ ಎಂದು ಹೇಳಿದ್ದಾರೆ. ಇದು ಈಗ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.

Governor Bhagat Singh Koshyari controversial statement  Governor controversial statement on Mumbai  Governor Bhagat Singh Koshyari news  ಮಹಾರಾಷ್ಟ್ರದಲ್ಲಿ ವಿವಾದ ಸೃಷ್ಟಿಸಿ ರಾಜ್ಯಪಾಲ ಕೊಶ್ಯಾರಿ  ಮುಂಬೈ ಬಗ್ಗೆ ವಿವಾದಾತ್ಮಕ ಹೇಳಿಕ ನೀಡಿದ ರಾಜ್ಯಪಾಲ ಕೊಶ್ಯಾರಿ  ಮಹಾರಾಷ್ಟ್ರದಲ್ಲಿ ರಾಜಕೀಯ ಬೆಳವಣಿಗಳು  ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಸುದ್ದಿ
ವಿವಾದ ಸೃಷ್ಟಿಸಿ ರಾಜ್ಯಪಾಲ ಕೊಶ್ಯಾರಿ
author img

By

Published : Jul 30, 2022, 1:53 PM IST

ಮುಂಬೈ, ಮಹಾರಾಷ್ಟ್ರ: ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮುಂಬೈನಿಂದ ಗುಜರಾತಿ ಮತ್ತು ರಾಜಸ್ಥಾನಿಗಳನ್ನು ಹೊರಹಾಕಿದ ನಂತರ ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಣ ಉಳಿಯುವುದಿಲ್ಲ ಎಂದು ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಮಹಾರಾಷ್ಟ್ರ ಜನರ ಕ್ಷಮೆ ಕೇಳುವಂತೆಯೂ ಅವರನ್ನು ಒತ್ತಾಯಿಸಲಾಗುತ್ತಿದೆ. ಎನ್‌ಸಿಪಿ ಶಾಸಕ ಅಮೋಲ್ ಮಿಟ್ಕರಿ ಟ್ವೀಟ್ ಮಾಡಿ ರಾಜ್ಯಪಾಲರನ್ನು ಟೀಕಿಸಿದ್ದಾರೆ. ಬೇಡದ ವಿಷಯಗಳಿಗೆ ರಾಜ್ಯಪಾಲರು ಮೂಗು ಚುಚ್ಚಬಾರದು ಎಂದು ಎಂಎನ್‌ಎಸ್ ಮುಖಂಡ ಸಂದೀಪ್ ದೇಶಪಾಂಡೆ ಹರಿಹಾಯ್ದಿದ್ದಾರೆ.

  • #WATCH | If Gujaratis and Rajasthanis are removed from Maharashtra, especially Mumbai and Thane, no money would be left here. Mumbai would not be able to remain the financial capital of the country: Maharashtra Governor Bhagat Singh Koshyari pic.twitter.com/l3SlOFMc0v

    — ANI (@ANI) July 30, 2022 " class="align-text-top noRightClick twitterSection" data=" ">

ರಾಜ್ಯಪಾಲರು ಹೇಳಿದ್ದೇನು?: ತಮ್ಮ ವಿವಿಧ ಹೇಳಿಕೆಗಳಿಂದ ಸುದ್ದಿಯಲ್ಲಿರುವ ರಾಜ್ಯಪಾಲರು ಈ ಬಾರಿ ಮುಂಬೈ ಬಗ್ಗೆ ನೇರವಾಗಿಯೇ ದೊಡ್ಡ ಹೇಳಿಕೆ ನೀಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಮುಂಬೈನಲ್ಲಿ ಹೊರಗಿನವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮುಂಬೈಗೆ ದುಡಿಯಲು, ವ್ಯಾಪಾರ ಮಾಡಲು, ಹೆಸರು ಮಾಡಲು ಮತ್ತು ಮುಂಬೈನಲ್ಲಿ ತಮ್ಮ ಕನಸುಗಳನ್ನು ನನಸಾಗಿಸಲು ಅನೇಕ ಜನರು ಬರುತ್ತಾರೆ.

ಅದಕ್ಕಾಗಿಯೇ ಮುಂಬೈಯನ್ನು ಕನಸಿನ ನಗರ ಎಂದು ಕರೆಯಲಾಗುತ್ತದೆ. ಆದರೆ, ನಾನು ಆಗಾಗ ಮಹಾರಾಷ್ಟ್ರದ ಜನರಿಗೆ ಹೇಳುವುದೇನೆಂದ್ರೆ ಮುಂಬೈನಿಂದ ಗುಜರಾತಿಗಳು ಮತ್ತು ರಾಜಸ್ಥಾನಿಗಳನ್ನು ಹೊರಹಾಕಿದ ನಂತರ ಮುಂಬೈ - ಥಾಣೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಣ ಉಳಿಯುವುದಿಲ್ಲ. ಈಗ ಮುಂಬೈಯನ್ನು ದೇಶದ ವಾಣಿಜ್ಯ ರಾಜಧಾನಿ ಎಂದು ಕರೆಯಲಾಗುತ್ತದೆ. ಆಗ ಮುಂಬೈಯನ್ನು ವಾಣಿಜ್ಯ ರಾಜಧಾನಿ ಎಂದು ಕರೆಯಲಾಗುವುದಿಲ್ಲ ಎಂದು ರಾಜ್ಯಪಾಲರು ಹೇಳಿದ್ದರು.

ಸಂಜಯ್ ರಾವತ್ ಟೀಕೆ: ಶಿವಸೇನೆ ಸಂಸದ ಸಂಜಯ್ ರಾವತ್ ಕೂಡ ರಾಜ್ಯಪಾಲರನ್ನು ಟೀಕಿಸಿದ್ದಾರೆ. ಇಂತಹ ನಿಲುವನ್ನು ವಿರೋಧಿಸಲು ಮರಾಠರು ಎಚ್ಚೆತ್ತುಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ. ಮರಾಠಿಗರು ಎಚ್ಚೆತ್ತುಕೊಂಡು ಇದನ್ನು ಬಲವಾಗಿ ವಿರೋಧಿಸಬೇಕು ಎಂದು ರಾವುತ್ ತಮ್ಮ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.

ರಾಜ್ಯಪಾಲರು ಕ್ಷಮೆ ಯಾಚಿಸಬೇಕು: ಮಹಾರಾಷ್ಟ್ರ ಮತ್ತು ಮುಂಬೈನ ಜನರು ದಕ್ಷ ಮತ್ತು ಸಮರ್ಥರು. ನಾವು ಚಟ್ನಿ ರೊಟ್ಟಿ ತಿಂದು ಇತರರಿಗೆ ಉಣಬಡಿಸುವ ಪ್ರಾಮಾಣಿಕರು. ರಾಜ್ಯಪಾಲರು ಮರಾಠಿ ಜನರನ್ನು ಅವಮಾನಿಸಿದ್ದಾರೆ. ಆದಷ್ಟು ಬೇಗ ಮಹಾರಾಷ್ಟ್ರದ ಕ್ಷಮೆಯಾಚಿಸಬೇಕು ಎಂದು ಎನ್‌ಸಿಪಿ ಶಾಸಕ ಅಮೋಲ್ ಮಿಟ್ಕರಿ ಟ್ವೀಟ್ ಮೂಲಕ ಆಗ್ರಹಿಸಿದ್ದಾರೆ.

ರಾಜ್ಯಪಾಲರ ವಿರುದ್ಧ ಎಂಎನ್ಎಸ್ ಮುಖಂಡರ ವಾಗ್ದಾಳಿ: ಮುಂಬೈ ಮತ್ತು ಮಹಾರಾಷ್ಟ್ರ ಇರುವುದು ಮರಾಠಿಗರಿಂದಲೇ. 105 ಜನರ ಹುತಾತ್ಮರ ಬಲಿದಾನದಿಂದಾಗಿ ಮುಂಬೈ ಮಹಾರಾಷ್ಟ್ರಕ್ಕೆ ಸಿಕ್ಕಿದೆ. ಮುಂಬೈ ಮತ್ತು ಮಹಾರಾಷ್ಟ್ರದ ಪ್ರಗತಿಗೆ ಇಲ್ಲಿ ನೆಲೆಸಿರುವ ಮರಾಠಿಗರೇ ಕಾರಣ. ಹೊರಗಿನಿಂದ ಬಂದವರನ್ನು ಬಾಂಬೆ ತನ್ನದಾಗಿಸಿಕೊಂಡಿದೆ ಎಂದರೆ ಅವರಿಂದಲೇ ಪ್ರಗತಿಯಾಗಿಲ್ಲ. ಮುಂಬೈ ಮಹಾರಾಷ್ಟ್ರದಲ್ಲಿದೆ ಎಂಬುದನ್ನು ರಾಜ್ಯಪಾಲರು ಮೊದಲು ಅರ್ಥಮಾಡಿಕೊಳ್ಳಬೇಕು ಎಂದು ಸಂದೀಪ್ ದೇಶಪಾಂಡೆ ವಾಗ್ದಾಳಿ ನಡೆಸಿದರು.

ಓದಿ: 'ಮಹಾ' ಬಂಡಾಯ ಶಾಸಕರಿಗೆ ಸೂಕ್ತ ಭದ್ರತೆ ಕಲ್ಪಿಸಿ: ಕೇಂದ್ರಕ್ಕೆ ರಾಜ್ಯಪಾಲರ ಪತ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.