ETV Bharat / bharat

ಸೋಷಿಯಲ್​ ಮೀಡಿಯಾಕ್ಕೆ ಮಾರ್ಗಸೂಚಿ ಮೂಲಕ ಕಡಿವಾಣ ಹಾಕಿದ ಕೇಂದ್ರ ಸರ್ಕಾರ

author img

By

Published : Feb 25, 2021, 2:57 PM IST

Updated : Feb 25, 2021, 5:54 PM IST

ಸಾಮಾಜಿಕ ಜಾಲತಾಣ ಬಳಕೆ ಮಾಡಿಕೊಂಡು ಭಯೋತ್ಪಾದಕರು ಸಾಫ್ಟ್​ಟಚ್​ ಓವರ್​ಸೈಟ್ ಮೆಕ್ಯಾನಿಸಂ ಬಳಕೆ ಮಾಡಲಾಗುತ್ತಿರುವ ಕಾರಣ ಅದರ ಮೇಲೆ ಕೇಂದ್ರ ಸರ್ಕಾರ ಕೆಲವೊಂದು ಕಡಿವಾಣ ಹಾಕಿ, ಹೊಸ ಮಾರ್ಗಸೂಚಿ ಪ್ರಕಟಿಸಿದೆ.

Union Min RS Prasad
Union Min RS Prasad

ನವದೆಹಲಿ: ಸಾಮಾಜಿಕ ಜಾಲತಾಣಗಳ ಮಾರ್ಗಸೂಚಿ ಕೇಂದ್ರ ಸರ್ಕಾರದಿಂದ ರಿಲೀಸ್ ಆಗಿದ್ದು, ಒಟಿಟಿ ಮತ್ತು ಡಿಜಿಟಲ್ ಮಾಧ್ಯಮಗಳಲ್ಲಿ ತಮ್ಮ ವಿವರ ಬಹಿರಂಗಪಡಿಸುವುದು ಕಡ್ಡಾಯವಾಗಿದೆ.ಆದರೆ ನೋಂದಣಿ ಅಗತ್ಯವಿಲ್ಲ ಎಂದು ಕೇಂದ್ರ ಸಚಿವ ರವಿಂಶಂಕರ್​ ಪ್ರಸಾದ್​ ಹೇಳಿದ್ದಾರೆ.

ರವಿಶಂಕರ್​ ಪ್ರಸಾದ್ ಸುದ್ದಿಗೋಷ್ಠಿ

ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ರವಾನೆ ಮಾಡುವವರೇ ಅದಕ್ಕೆ ಮುಖ್ಯ ಕಾರಣಕರ್ತರಾಗಿದ್ದು, ಏನೇ ತೊಂದರೆ ಆದರೂ ಅವರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದಿದ್ದಾರೆ. ಇದಕ್ಕಾಗಿ ಮೂರು ಹಂತಗಳಲ್ಲಿ ಒಟಿಟಿ ಮಾಡಲಾಗಿದೆ ಎಂದಿದ್ದಾರೆ. ಪ್ರಮುಖವಾಗಿ ಮಹಿಳೆಯರು, ವ್ಯಕ್ತಿಗಳ ಖಾಸಗಿ ವಿಚಾರ ಹಾಗೂ ನಗ್ನತೆ ಮತ್ತು ಲೈಂಗಿಕತೆ ವಿಚಾರವಾಗಿ ಮಾಹಿತಿ ಹರಿಬಿಟ್ಟರೆ 24 ಗಂಟೆಯೊಳಗೆ ತೆಗೆದು ಹಾಕಲಾಗುವುದು ಎಂದು ಹೇಳಿದ್ದಾರೆ. ಜತೆಗೆ ಮಹಿಳೆಯರ ಘನತೆಗೆ ಧಕ್ಕೆ ಬಾರದಂತೆ ತಡೆಯಲು ವಿಶೇಷ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ದೇಶದ ಸಾರ್ವಭೌಮತೆ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟುವ ಮುಖ್ಯ ಉದ್ದೇಶದಿಂದ ಈ ಮಾರ್ಗಸೂಚಿ ಜಾರಿಗೊಳಿಸಲಾಗಿದೆ ಎಂದು ಕೇಂದ್ರ ಸಚಿವ ರವಿಶಂಕರ್​ ಪ್ರಸಾದ್ ತಿಳಿಸಿದ್ದಾರೆ.ಭಾರತದಲ್ಲಿ 53 ಕೋಟಿ ಮಂದಿ ವ್ಯಾಟ್ಸಪ್​, 44.8 ಕೋಟಿ ಮಂದಿ ಯೂಟ್ಯೂಬ್​, 41 ಕೋಟಿ ಮಂದಿ ಫೇಸ್​ಬುಕ್​, 21 ಕೋಟಿ ಮಂದಿ ಇನ್​ಸ್ಟಾಗ್ರಾಂ ಹಾಗೂ 1.5 ಕೋಟಿ ಮಂದಿ ಟ್ವಿಟರ್​ ಬಳಕೆ ಮಾಡ್ತಿದ್ದಾರೆ ಎಂದು ಕೇಂದ್ರ ಸಚಿವರು ಮಾಹಿತಿ ನೀಡಿದ್ದು, ಭಾರತದಲ್ಲಿ ಸೋಷಿಯಲ್ ಮೀಡಿಯಾ ಹೆಚ್ಚಾಗಿ ಬಳಕೆಯಾಗುತ್ತಿದೆ ಎಂಬ ಖುಷಿ ನಮಗಿದೆ. ಆದರೆ ಇವುಗಳಿಂದ ಹೆಚ್ಚಿನ ದುರ್ಬಳಕೆಯಾಗುತ್ತಿರುವುದು ಕಂಡು ಬಂದಿದೆ ಎಂದರು.

  • There should be a grievance redressal system in OTT platforms and digital portals. OTT platforms will have to have a self-regulating body, headed by retired Supreme Court or High Court judge or very eminent person in this category: Union Minister Prakash Javadekar pic.twitter.com/PcechR10wc

    — ANI (@ANI) February 25, 2021 " class="align-text-top noRightClick twitterSection" data=" ">

ಸೋಷಿಯಲ್ ಮೀಡಿಯಾಕ್ಕೆ ಮಾರ್ಗದರ್ಶಿ ಸೂತ್ರಗಳ ಕಡಿವಾಣದ ಮೂಲಕ ದೂರು ಪ್ರಾಧಿಕಾರ ರಚನೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಅದಕ್ಕಾಗಿ ಮೂರು ಸೂತ್ರಗಳನ್ನ ಮೂರು ತಿಂಗಳೊಳಗೆ ಜಾರಿ ಮಾಡಲಾಗುವುದು ಎಂದು ಕೇಂದ್ರ ಕಾನೂನು ವ್ಯವಹಾರಗಳ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

ಮಕ್ಕಳ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯದ ದೂರುಗಳಿದ್ದರೆ ಒಂದೇ ದಿನದಲ್ಲಿ ವಿಲೇವಾರಿ ಮಾಡಲು ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದು, ಎಲ್ಲ ಸಾಮಾಜಿಕ ಜಾಲತಾಣಗಳು ಮುಖ್ಯ ದೂರು ಪ್ರಾಧಿಕಾರ ಅಧಿಕಾರಿ ಹೊಂದಿರಬೇಕು ಎಂದಿದ್ದಾರೆ. ಪ್ರತಿ ತಿಂಗಳು ಸಾಮಾಜಿಕ ಮಾಧ್ಯಮಗಳು ಸಲ್ಲಿಕೆಯಾದ ಮಾಹಿತಿಗಳ ಬಗ್ಗೆ ಪ್ರತ್ಯೇಕ ಮಾಹಿತಿ ನೀಡಬೇಕು ಎಂದಿದ್ದಾರೆ.

ದೇಶದ ಸಾರ್ವಭೌಮತ್ವ, ಶಾಂತಿ ಹಾಗೂ ವಿದೇಶದ ಜೊತೆಗಿನ ಸಂಬಂಧಕ್ಕೆ ಧಕ್ಕೆ ಬರುವಂತಹ ವಿಚಾರಗಳಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ. ಡಿಜಿಟಲ್​ ಪೋರ್ಟಲ್​ಗಳಿಗೆ ಸುಳ್ಳು ಮಾಹಿತಿ ಹರಡುವ ಅಧಿಕಾರ ಇಲ್ಲ. ಆದರೆ ಜವಾಬ್ದಾರಿಯುತ ಸ್ವಾತಂತ್ರ್ಯ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

Last Updated : Feb 25, 2021, 5:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.