ETV Bharat / bharat

ಗೋರಖ್​​ಪುರ ಏಮ್ಸ್​​ನ ಎಂಬಿಬಿಎಸ್​ ವಿದ್ಯಾರ್ಥಿಗೆ ಹೃದಯಾಘಾತ: ಆತಂಕ ಮೂಡಿಸಿದ ಪ್ರಕರಣ - ಹಠಾತ್​ ಹೃದಯಾಘಾತ ಪ್ರಕರಣ

Heart Attack in Gorakhpur AIMS OPD : ಗೋರಖ್​ಪುರ್​ ಏಮ್ಸ್​ನಲ್ಲಿ ಒಪಿಡಿಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವ ಪ್ರಕರಣಗಳ ಸಂಖ್ಯೆ ಏರಿಕೆ ಕಾಣುತ್ತಿದೆ.

Gorakhpur AIMS MBBS Student survived from Heart attack

author img

By ETV Bharat Karnataka Team

Published : Dec 12, 2023, 4:31 PM IST

ಲಖನೌ: ಉತ್ತರಪ್ರದೇಶದ ಗೋರಖ್​ಪುರ್​​ದ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್​​)ನಲ್ಲಿ 26 ವರ್ಷದ ವೈದ್ಯಕೀಯ ವಿದ್ಯಾರ್ಥಿ ಹೃದಯಾಘಾತಕ್ಕೆ ಒಳಗಾಗಿದ್ದು, ಅದೃಷ್ಟವಶಾತ್​ ಆತ ಬದುಕುಳಿದಿರುವ ಘಟನೆ ಸೋಮವಾರ ನಡೆದಿದೆ. ತಕ್ಷಣಕ್ಕೆ ಆತನ ಆರೋಗ್ಯ ಸ್ಥಿತಿ ಗಮನಿಸಿದ ಏಮ್ಸ್​​ ವೈದ್ಯರು ಉತ್ತಮ ಚಿಕಿತ್ಸೆಗೆ ಆತನನ್ನು ಫಾತಿಮಾ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಶಶಾಂಕ್​ ಏಮ್ಸ್​​ನಲ್ಲಿ ಅಂತಿಮ ವರ್ಷದ ಎಂಬಿಬಿಎಸ್​ ಪದವಿ ವ್ಯಾಸಂಗ ಮಾಡುತ್ತಿದ್ದು, ಸೋಮವಾರ ಸಂಜೆ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಮಂಗಳವಾರ ಅಂಜಿಯೊಗ್ರಾಫಿ ಚಿಕಿತ್ಸೆಗೆ ಒಳಗಾಗಿದ್ದು, ಇದೀಗ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ.

ಏನಿದು ಪ್ರಕರಣ?: 2019ರ ಗೋರಖ್​ಪುರ ಏಮ್ಸ್​​ನ ಮೊದಲ ಎಂಬಿಬಿಎಸ್​ ಬ್ಯಾಚಿನ ವಿದ್ಯಾರ್ಥಿ ಶಶಾಂಕ್​ ಶೇಖರ್​ ಆಗಿದ್ದಾರೆ. ಅಂತಿಮ ವರ್ಷದ ವೈದ್ಯಕೀಯ ಪದವಿ ವ್ಯಾಸಂಗ ಮಾಡುತ್ತಿರುವ ಇವರು ಸೋಮವಾರ ಹಾಸ್ಟೆಲ್​ ರೂಮ್​ನಲ್ಲಿದ್ದಾಗ ಎದೆನೋವು ಕಾಣಿಸಿಕೊಂಡಿದೆ. ತಕ್ಷಣಕ್ಕೆ ಅವರ ಸಹಪಾಠಿ ಒಪಿಡಿಗೆ ಕರೆ ತಂದಿದ್ದಾರೆ. ಈ ಸಂದರ್ಭದಲ್ಲಿ ವೈದ್ಯ ಕನಿಷ್ಕಾ ಅವರನ್ನು ತಪಾಸಣೆ ಮಾಡಿದ್ದು, ಇಸಿಜಿಗೆ ಒಳಪಡಿಸಿದಾಗ ಅವರಿಗೆ ಹೃದಯಘಾತ ಆಗಿರುವುದು ದೃಢಪಟ್ಟಿದೆ. ಅವರನ್ನು ಏಮ್ಸ್​​ನ ತುರ್ತು ಘಟಕಕ್ಕೆ ದಾಖಲಿಸಿದ್ದಾರೆ. ಈ ವೇಳೆ ಉತ್ತಮ ಚಿಕಿತ್ಸೆಗೆ ಫಾತಿಮಾ ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಿದ್ದಾರೆ. ಫಾತಿಮಾ ಆಸ್ಪತ್ರೆಯ ಡಾ ಲೋಕೇಶ್​ ಗುಪ್ತಾ ಮೇಲ್ವಿಚಾರಣೆಯಲ್ಲಿ ಸದ್ಯ ವಿದ್ಯಾರ್ಥಿ ಆರೋಗ್ಯ ಚೇತರಿಕೆ ಕಂಡಿದೆ.

ಸೋಮವಾರ ಏಮ್ಸ್​​ನಲ್ಲಿ ಮತ್ತಿಬ್ಬರು ರೋಗಿಗಳು ಕೂಡ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಅವರಿಗೆ ಸಿಪಿಆರ್​​ ಮತ್ತು ವೆಂಟಿಲೇಟರ್​ ಚಿಕಿತ್ಸೆ ನೀಡಿದರೂ ಅವರು ಬದುಕಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಈ ಬೆನ್ನಲ್ಲೇ ಆಸ್ಪತ್ರೆಯಲ್ಲಿ ಸೌಲಭ್ಯಗಳ ಕುರಿತು ಕೂಡ ಸಿಬ್ಬಂದಿ ಧ್ವನಿಯನ್ನು ಎತ್ತಿದ್ದಾರೆ.

ಸೋಮವಾರ ಏಮ್ಸ್​​ನಲ್ಲಿ ಒಪಿಡಿ ಚಿಕಿತ್ಸೆಗೆ ಆಗಮಿಸಿದ ರೋಗಿ ಸರತಿ ಸಾಲಿನಲ್ಲಿ ನಿಂತಿದ್ದಾಗ ಆಯಾಸಗೊಂಡು ಬಿದ್ದಿದ್ದಾರೆ. ಎರಡು ಗಂಟೆ ಅವಧಿಯಲ್ಲಿ ಎರಡು ಸಾವು ಸಂಭವಿಸಿತು. ವೈದ್ಯರು ತಕ್ಷಣಕ್ಕೆ ಅವರಿಗೆ ತುರ್ತು ಚಿಕಿತ್ಸೆ ನೀಡಿದರೂ ಫಲ ನೀಡಲಿಲ್ಲ, ಈ ಘಟನೆ ವೈದ್ಯರಲ್ಲಿ ಆತಂಕ ಮೂಡಿಸಿದೆ.

ಇತ್ತೀಚಿನ ದಿನದಲ್ಲಿ ಹಠಾತ್​ ಹೃದಯಾಘಾತ ಪ್ರಕರಣಗಳು ಯುವ ಜನತೆಯಲ್ಲಿ ಹೆಚ್ಚುತ್ತಿದ್ದು, ಸಾವಿನ ಸಂಖ್ಯೆಯಲ್ಲಿ ಏರಿಕೆ ಕಂಡು ಬರುತ್ತಿದೆ. ಬದಲಾದ ಜೀವನ ಶೈಲಿ, ಒತ್ತಡ ಸೇರಿದಂತೆ ಹಲವು ಕಾರಣಗಳಿಂದಾಗಿ ದೇಶದಲ್ಲಿ ಹೃದಯಾಘಾತಕ್ಕೀಡಾಗಿ ಸಾವು ಸಂಭವಿಸುವ ಪ್ರಕರಣಗಳು ಹೆಚ್ಚುತ್ತಿವೆ

ದೇಶದಲ್ಲಿ ಯುವ ಜನತೆಯಲ್ಲಿ ಹಠಾತ್​ ಸಾವಿನ ಪ್ರಕರಣಗಳಲ್ಲಿ ಏರಿಕೆ ಕಂಡು ಬಂದಿದೆ. ಈ ಕುರಿತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್​​) ಹೃದಯಾಘಾತ ಪ್ರಕರಣಗಳ ಏರಿಕೆ ಹಿಂದಿರುವ ಅಂಶ ಏನು ಎಂದು ಮೂರು ವಿಭಿನ್ನ ಅಧ್ಯಯನ ನಡೆಸಿದೆ ಎಂದು ಇತ್ತೀಚಿಗೆ ರಾಜ್ಯಸಭೆಯಲ್ಲಿ ಆರೋಗ್ಯ ಸಚಿವರು ತಿಳಿಸಿದ್ದಾರೆ.

ಇದನ್ನೂ ಓದಿ: ಜನರ ಹಠಾತ್​ ಸಾವಿಗೆ ಕಾರಣವೇನು?: ಆರೋಗ್ಯ ಸಚಿವಾಲಯದ ವಿವರಣೆ ಹೀಗಿದೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.