ನವದೆಹಲಿ : ಜಾಗತಿಕ ಆರ್ಥಿಕ ಹಿಂಜರಿತದ ಭೀತಿಯಿಂದ ಈ ವರ್ಷದ ಜನವರಿಯಲ್ಲಿ 12,000 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿರುವ ಟೆಕ್ ದೈತ್ಯ ಕಂಪನಿ ಗೂಗಲ್ ಇದೀಗ ಮತ್ತಷ್ಟು ವೆಚ್ಚ ಕಡಿತ ಮಾಡಲು ನಿರ್ಧಾರ ತೆಗೆದುಕೊಂಡಿದೆ ಎಂದು ವರದಿಯಾಗಿದೆ. ಉದ್ಯೋಗಿಗಳಿಗೆ ಉಚಿತವಾಗಿ ನೀಡುತ್ತಿದ್ದ ಸ್ನಾಕ್ಸ್ ಮತ್ತು ವರ್ಕೌಟ್ ತರಗತಿಗಳು ಸೇರಿದಂತೆ ಇತರೆ ಅನೇಕ ವೆಚ್ಚಗಳನ್ನು ಕಡಿತಗೊಳಿಸಿ ಕೃತಕ ಬುದ್ಧಿಮತ್ತೆಗೆ(AI) ಹೆಚ್ಚಿನ ಒತ್ತು ನೀಡಲು ಚಿಂತನೆ ನಡೆಸಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಗೂಗಲ್ ಮುಖ್ಯ ಹಣಕಾಸು ಅಧಿಕಾರಿ ರುತ್ ಪೊರಾಟ್, "ಕಂಪನಿಯು ಉದ್ಯೋಗಿಗಳಿಗೆ ಮಾಡುತ್ತಿರುವ ವೆಚ್ಚ ಸಾಕಷ್ಟು ದುಬಾರಿಯಾಗುತ್ತಿದೆ. ಪರಿಣಾಮವಾಗಿ, ಕೆಲವು ವೆಚ್ಚಗಳಿಗೆ ಕಡಿವಾಣ ಹಾಕಲು ನಿರ್ಧರಿಸಲಾಗಿದೆ. ಉಚಿತ ತಿಂಡಿಗಳು, ಲಾಂಡ್ರಿ ಸೇವೆ, ಮಸಾಜ್ ಮತ್ತು ಮೈಕ್ರೋ ಕಿಚನ್ ಸೇವೆಯನ್ನು ತೆಗೆದು ಹಾಕಲಾಗುತ್ತಿದೆ. ಇದರ ಜೊತೆಗೆ, ವೆಚ್ಚ ಉಳಿತಾಯ ಮಾಡಲು ಗೂಗಲ್ ನೇಮಕಾತಿ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತಿದೆ. ಈ ವೆಚ್ಚ ಕಡಿತ ಅನಿವಾರ್ಯ" ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಮೊಬೈಲ್ ಗೇಮ್ ಸ್ಟೋರ್ ಅಭಿವೃದ್ಧಿಪಡಿಸಿ ಆ್ಯಪಲ್, ಗೂಗಲ್ ವಿರುದ್ಧ ಮೈಕ್ರೋಸಾಫ್ಟ್ ಸ್ಪರ್ಧೆ
ಶುಕ್ರವಾರ ಗೂಗಲ್ ಉದ್ಯೋಗಿಗಳಿಗೆ ಜ್ಞಾಪಕ ಪತ್ರವನ್ನು ಕಳುಹಿಸಲಾಗಿದೆ. ಇದರಲ್ಲಿ ಕಂಪನಿಯು ಕೆಲಸದ ಮೇಲೆ ಗಮನ ಕೇಂದ್ರೀಕರಿಸಿ ಹಣವನ್ನು ಸಮರ್ಥವಾಗಿ ಬಳಸುವ ಸಮಯ ಬಂದಿದೆ. ಹಾಗಾಗಿ, ತಂಡಗಳನ್ನು ಮರುಹಂಚಿಕೆ ಮಾಡಲಾಗುವುದು. ಇದರ ಜೊತೆಗೆ, ಲ್ಯಾಪ್‌ಟಾಪ್‌ಗಳಂತಹ ವೈಯಕ್ತಿಕ ಸಾಧನಗಳ ಮೇಲೆ ಖರ್ಚು ಮಾಡುವುದನ್ನು ನಿಲ್ಲಿಸಲಾಗುವುದು. ಫಿಟ್‌ನೆಸ್ ಕ್ಲಾಸ್ ವೇಳಾಪಟ್ಟಿಗಳನ್ನು ಸಹ ಬದಲಾಯಿಸಲಾಗುತ್ತದೆ ಎಂದು ಸೂಚನೆ ಕೊಟ್ಟಿದೆ.
ಇದನ್ನೂ ಓದಿ: 12000 ಸಿಬ್ಬಂದಿಗೆ ಗೂಗಲ್ ಕತ್ತರಿ : ಕಂಪನಿ ಸಿಇಒ ಸುಂದರ್ ಪಿಚೈ
ಜನವರಿ 20 ರಂದು ಗೂಗಲ್ ಸಿಇಒ ಸುಂದರ್ ಪಿಚೈ ಅವರು ಉದ್ಯೋಗಿಗಳಿಗೆ ಪತ್ರ ಬರೆದು "ಜಾಗತಿಕವಾಗಿ ಸುಮಾರು 12,000 ಜನರನ್ನು ಕೆಲಸದಿಂದ ವಜಾಗೊಳಿಸಲಾಗುವುದು. ಕಂಪನಿಯ ಒಟ್ಟಾರೆ ಉದ್ಯೋಗಿಗಳಲ್ಲಿ ಶೇ 6ರಷ್ಟು ಕಡಿತ ಮಾಡಲಾಗುವುದು ಎಂದು ಹೇಳಿದ್ದರು. ಕಳೆದ ಎರಡು ವರ್ಷಗಳಲ್ಲಿನ ಕಂಪನಿಯ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ. ಕಂಪನಿಯ ಸದ್ಯದ ಪರಿಸ್ಥಿತಿಯನ್ನು ಸರಿದೂಗಿಸಲು ಈ ಕ್ರಮ ಅಗತ್ಯ. ಜೊತೆಗೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕಡಿಮೆ ಹಂತಗಳಲ್ಲಿ ಬಡ್ತಿ ನೀಡಲಾಗುವುದು" ಎಂದು ಹೇಳಿದ್ದರು.
ಇದನ್ನೂ ಓದಿ: ಸಿಸಿಐ ಆದೇಶಗಳನ್ನು ದಿಕ್ಕರಿಸುತ್ತಿದೆಯಂತೆ ಗೂಗಲ್ : ಎಡಿಐಎಫ್
ಗೂಗಲ್‌ಗೆ ದಂಡ: ಇನ್ನು ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ (ಎನ್‌ಸಿಎಲ್‌ಎಟಿ) ಗೂಗಲ್ ವಿಷಯದಲ್ಲಿ ಭಾರತೀಯ ಸ್ಪರ್ಧಾತ್ಮಕ ಆಯೋಗದ (ಸಿಸಿಐ) ನಿರ್ಧಾರವನ್ನು ಎತ್ತಿಹಿಡಿದಿದೆ. ಆ್ಯಂಡ್ರಾಯ್ಡ್ ಮೊಬೈಲ್ ಸಾಧನಗಳ ವಿಷಯದಲ್ಲಿ ಸ್ಪರ್ಧಾತ್ಮಕ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಕ್ಕಾಗಿ ತಂತ್ರಜ್ಞಾನ ಕಂಪನಿ ಗೂಗಲ್‌ಗೆ ಸಿಸಿಐಯು 1,337.76 ಕೋಟಿ ರೂ. ದಂಡ ವಿಧಿಸಿದೆ.
ಇದನ್ನೂ ಓದಿ: ಗೂಗಲ್‌ಗೆ 1,337.76 ಕೋಟಿ ರೂ. ದಂಡ.. ಆದೇಶ ಎತ್ತಿಹಿಡಿದ ಎನ್‌ಸಿಎಲ್‌ಎಟಿ