ಕಟಕ್(ಒಡಿಶಾ): ಎರಡು ಸರಕು ಸಾಗಣೆ ರೈಲಿನ ವ್ಯಾಗನ್ಗಳು ಹಳಿ ತಪ್ಪಿರುವ ಘಟನೆ ಕಟಕ್ ರೈಲು ನಿಲ್ದಾಣದ ಸಮೀಪದಲ್ಲಿ ನಡೆದಿದೆ. ಒಂದು ಟ್ರ್ಯಾಕ್ನಿಂದ ಮತ್ತೊಂದು ಟ್ರ್ಯಾಕ್ಗೆ ಬದಲಾವಣೆ ಆಗುವ ವೇಳೆ ಉಂಟಾದ ಸಮಸ್ಯೆಯಿಂದ ವ್ಯಾಗನ್ಗಳು ಹಳಿ ತಪ್ಪಿವೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಎರಡು ರೈಲಿನ ಮೂರು ವ್ಯಾಗನ್ಗಳು ಹಳಿ ತಪ್ಪಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ, ರೈಲ್ವೆ ಟ್ರ್ಯಾಕ್ ಸಂಪೂರ್ಣವಾಗಿ ಹಾನಿಗೊಳಗಾಗಿದೆ ಎಂದು ತಿಳಿದು ಬಂದಿದ್ದು, ಅದನ್ನು ಸರಿಪಡಿಸುವ ಕಾರ್ಯ ನಡೆಯುತ್ತಿದೆ.
ಒಂದು ರೈಲು ತಲ್ಚೇರ್ನಿಂದ ಪುರಿಗೆ ತೆರಳುತ್ತಿದ್ದರೆ, ಮತ್ತೊಂದು ರೈಲು ಪುರಿಯಿಂದ ತಲ್ಚೇರ್ಗೆ ತೆರಳುತ್ತಿತ್ತು ಎಂದು ತಿಳಿದು ಬಂದಿದೆ. ಈ ಘಟನೆಯಿಂದಾಗಿ ಕೆಲವು ರೈಲುಗಳ ಸಂಚಾರ ಸ್ವಲ್ಪ ಮಟ್ಟಿಗೆ ಏರುಪೇರಾಗಿದೆ ಎಂದು ಖೋರ್ಧಾ ಅಧಿಕಾರ ಕಲ್ಯಾಣ್ ಪಟ್ನಾಯಕ್ ಮಾಹಿತಿ ನೀಡಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ