ETV Bharat / bharat

ಹಳಿ ತಪ್ಪಿದ ಸರಕು ಸಾಗಣೆ ರೈಲು, ಹಲವರು ರೈಲುಗಳ ಸಂಚಾರ ಅಸ್ತವ್ಯಸ್ತ

ರಾಜಸ್ಥಾನದ ಜೋಧ್​ಪುರ ರೈಲ್ವೆ ವಿಭಾಗದ ಫಲೋಡಿ-ಜೈಸಲ್ಮೇರ್ ರೈಲು ಮಾರ್ಗದ ರೈಲಿನ ನಾಲ್ಕು ವ್ಯಾಗನ್​​ಗಳು ಹಳಿ ತಪ್ಪಿದ್ದು, ರೈಲು ಸಂಚಾರದಲ್ಲಿ ಅಸ್ತವ್ಯಸ್ತವಾಗಿದೆ.

goods-train-derails-on-phalodi-jaisalmer-rail-route
ಹಳಿ ತಪ್ಪಿದ ಸರಕು ಸಾಗಣೆ ರೈಲು, ಹಲವರು ರೈಲುಗಳ ಸಂಚಾರ ಅಸ್ತವ್ಯಸ್ತ
author img

By

Published : Jan 25, 2022, 12:26 PM IST

ಜೋಧಪುರ(ರಾಜಸ್ಥಾನ): ಸರಕು ಸಾಗಣೆ ರೈಲಿನ ನಾಲ್ಕು ವ್ಯಾಗನ್​ಗಳು ಹಳಿ ತಪ್ಪಿ, ಉಳಿದ ಕೆಲವು ರೈಲುಗಳ ಸಂಚಾರ ಅಸ್ತವ್ಯಸ್ತವಾಗಿರುವ ಘಟನೆ ರಾಜಸ್ಥಾನದ ಜೋಧ್​ಪುರ ರೈಲ್ವೆ ವಿಭಾಗದಲ್ಲಿ ನಡೆದಿದೆ.

ಫಲೋಡಿ-ಜೈಸಲ್ಮೇರ್ ರೈಲು ಮಾರ್ಗದ ಥಾಯತ್ ಹಮೀರಾ-ಜೇತಚಂದನ್ ನಿಲ್ದಾಣದ ನಡುವೆ ಮಂಗಳವಾರ ಬೆಳಗ್ಗೆ ಸರಕು ಸಾಗಣೆ ರೈಲಿನ ನಾಲ್ಕು ವ್ಯಾಗನ್‌ಗಳು ಹಳಿತಪ್ಪಿವೆ. ಇದರಿಂದಾಗಿ ಫಲೋಡಿ ಮತ್ತು ಜೈಸಲ್ಮೇರ್ ನಡುವಿನ ರೈಲು ಸಂಚಾರ ಅಸ್ತವ್ಯಸ್ತಗೊಂಡಿದೆ.

ಜೋಧ್‌ಪುರ ವಿಭಾಗೀಯ ಕೇಂದ್ರ ಕಚೇರಿ ಮಾಹಿತಿ ಪಡೆದು ಜೋಧ್‌ಪುರದಿಂದ ಸಿಬ್ಬಂದಿಯನ್ನು ಸ್ಥಳಕ್ಕೆ ರವಾನಿಸಿದ್ದು, ಆದಷ್ಟು ಬೇಗ ರೈಲು ಸಂಚಾರವನ್ನು ಸುಗಮಗೊಳಿಸಲು ಪ್ರಯತ್ನಿಸಲಾಗುತ್ತಿದೆ ಎಂದು ರೈಲ್ವೆ ಇಲಾಖೆ ಹೇಳಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ರೈಲು ಹಳಿ ತಪ್ಪಿದ ಕಾರಣಕ್ಕೆ, ಜೈಸಲ್ಮೇರ್- ಲಾಲ್​ಗಢ ರೈಲನ್ನು (ರೈಲು ಸಂಖ್ಯೆ 14703) ರದ್ದುಗೊಳಿಸಲಾಗಿದೆ. ಇದರ ಜೊತೆಗೆ ಮತ್ತೊಂದು ಜೈಸಲ್ಮೇರ್- ಲಾಲ್​ಗಢ ರೈಲು (ರೈಲು ಸಂಖ್ಯೆ 14704), ಜೋಧ್‌ಪುರ-ಜೈಸಲ್ಮೇರ್ ರೈಲು (ರೈಲು ಸಂಖ್ಯೆ 14810), ಜೋಧ್‌ಪುರ-ಜೈಸಲ್ಮೇರ್ ವಿಶೇಷ ರೈಲು (ರೈಲು ಸಂಖ್ಯೆ 04826) ಪಲೋಡಿ ತನಕ ಮಾತ್ರ ಕಾರ್ಯ ನಿರ್ವಹಿಸುತ್ತವೆ. ಎಂದು ರೈಲ್ವೆ ಇಲಾಖೆ ಹೇಳಿದೆ.

ಇದನ್ನೂ ಓದಿ: ಅತಿ ದೊಡ್ಡ ಸೈಬರ್ ಕಳ್ಳತನ: ಬ್ಯಾಂಕ್​​ಗೆ ಸರ್ವರ್​ ಹ್ಯಾಕ್​ ಮಾಡಿ 12 ಕೋಟಿ ಲೂಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.