ETV Bharat / bharat

ದೀಪಾವಳಿಗೂ ಮುನ್ನ ಉತ್ತರಾಖಂಡ ಡಿಜಿಪಿ 'ಮಾಮ'ನ ಮನೆಗೆ ತುಪ್ಪದೊಂದಿಗೆ ನೀರಜ್ ಚೋಪ್ರಾ ಭೇಟಿ!

Neeraj Chopra meets uttarakhand DGP Ashok Kumar: ಉತ್ತರಾಖಂಡ ಡಿಜಿಪಿ ಅಶೋಕ್ ಕುಮಾರ್ ಅವರ ನಿವಾಸಕ್ಕೆ ಗೋಲ್ಡನ್ ಬಾಯ್ ನೀರಜ್ ಚೋಪ್ರಾ ಭೇಟಿ ಕೊಟ್ಟಿದ್ದಾರೆ.

golden-boy-neeraj-chopra-reached-dgp-ashok-kumar-house-in-dehradun-and-met-him
ಉತ್ತರಾಖಂಡ ಡಿಜಿಪಿ ಮನೆಗೆ ನೀರಜ್ ಚೋಪ್ರಾ ಭೇಟಿ
author img

By ETV Bharat Karnataka Team

Published : Nov 11, 2023, 7:04 PM IST

ಡೆಹ್ರಾಡೂನ್ (ಉತ್ತರಾಖಂಡ): ಒಲಿಂಪಿಕ್ ಚಿನ್ನದ ಪದಕ ವಿಜೇತ ಮತ್ತು ವಿಶ್ವ ಚಾಂಪಿಯನ್ ಜಾವೆಲಿನ್ ಎಸೆತಗಾರ, ಗೋಲ್ಡನ್ ಬಾಯ್ ನೀರಜ್ ಚೋಪ್ರಾ ದೀಪಾವಳಿಗೂ ಮುನ್ನ ಉತ್ತರಾಖಂಡಕ್ಕೆ ಆಗಮಿಸಿದ್ದಾರೆ. ರಾಜಧಾನಿ ಡೆಹ್ರಾಡೂನ್‌ನಲ್ಲಿ ರಾಜ್ಯ ಪೊಲೀಸ್​ ಮಹಾನಿರ್ದೇಶಕ (ಡಿಜಿಪಿ) ಅಶೋಕ್ ಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿದ ನೀರಜ್ ಚೋಪ್ರಾ ಇಡೀ ಕುಟುಂಬದೊಂದಿಗೆ ತುಂಬಾ ಹೊತ್ತು ಸಮಯ ಕಳೆದರು.

  • नीरज चोपड़ा बहुत दिनों बाद अपनी ट्रैनिंग से ब्रेक लेकर दिवाली मनाने अपने गांव आये हैं। इसी ब्रेक के दौरान नीरज हमारे घर देहरादून भी आये और हमारे साथ कुछ यादगार पारिवारिक पल बिताए। नीरज अपने साथ गांव से घी भी लाए। गांव से आए घी ने हमारी दिवाली को और भी मिठा बना दिया है! बहुत कम… pic.twitter.com/j2wT8n0Dw4

    — Ashok Kumar IPS (@AshokKumar_IPS) November 11, 2023 " class="align-text-top noRightClick twitterSection" data=" ">

ಡಿಜಿಪಿ ಅಶೋಕ್ ಕುಮಾರ್ ಅವರನ್ನು ನೀರಜ್ ಚೋಪ್ರಾ ತಮ್ಮ ಮಾಮ ಎಂದು ಪರಿಗಣಿಸುತ್ತಾರೆ. ಇದಕ್ಕೂ ಮುನ್ನ ಕೂಡ ಅವರ ಮನೆಗೆ ಹಲವು ಬಾರಿ ಭೇಟಿ ನೀಡಿದ್ದರು. ಅಶೋಕ್ ಕುಮಾರ್‌ ಅವರಿಗಾಗಿ ನೀರಜ್ ಚೋಪ್ರಾ ಹರಿಯಾಣದ ತಮ್ಮ ಪೂರ್ವಜರ ಮನೆ ಸೋನಿಪತ್‌ನಿಂದ ದೇಸಿ ತುಪ್ಪವನ್ನು ತಂದಿದ್ದರು ಎಂದು ತಿಳಿದು ಬಂದಿದೆ. ಈ ಕುರಿತು ಖುದ್ದು ಡಿಜಿಪಿ ಅವರೇ ಸಾಮಾಜಿಕ ಜಾಲತಾಣ 'ಎಕ್ಸ್​'ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

''ನೀರಜ್ ಚೋಪ್ರಾ ಅವರು ತಮ್ಮ ತರಬೇತಿಯಿಂದ ವಿರಾಮ ತೆಗೆದುಕೊಂಡು ದೀಪಾವಳಿ ಆಚರಿಸಲು ಬಹಳ ಸಮಯದ ನಂತರ ತಮ್ಮ ಊರಿಗೆ ಬಂದಿದ್ದಾರೆ. ಈ ವಿರಾಮದ ಸಮಯದಲ್ಲಿ ಡೆಹ್ರಾಡೂನ್‌ನಲ್ಲಿರುವ ನಮ್ಮ ಮನೆಗೂ ನೀರಜ್ ಬಂದಿದ್ದರು. ನಮ್ಮೊಂದಿಗೆ ಕೆಲವು ಸ್ಮರಣೀಯ ಕುಟುಂಬ ಕ್ಷಣಗಳನ್ನು ಕಳೆದರು. ನೀರಜ್ ಊರಿನಿಂದ ತುಪ್ಪವನ್ನೂ ತಂದಿದ್ದರು'' ಎಂದು ಡಿಜಿಪಿ ಅಶೋಕ್ ಕುಮಾರ್ ತಮ್ಮ ಪೋಸ್ಟ್​ನಲ್ಲಿ ತಿಳಿಸಿದ್ದಾರೆ.

ಮುಂದುವರೆದು ಅವರು, ''ಹಳ್ಳಿಯ ತುಪ್ಪ ನಮ್ಮ ದೀಪಾವಳಿಯನ್ನು ಇನ್ನಷ್ಟು ಸಿಹಿಗೊಳಿಸಿದೆ!. ಕೊಂಚ ಸಮಯದಲ್ಲೇ ನೀರಜ್ ಅವರ ಅನೇಕ ಅಭಿಮಾನಿಗಳು ಅವರನ್ನು ಭೇಟಿ ಮಾಡಲು ಬಂದಿದ್ದರು. ನಾನು ನನ್ನ ಪುಸ್ತಕವಾದ 'ಸೈಬರ್ ಎನ್‌ಕೌಂಟರ್ಸ್​'ನ ಪ್ರತಿಯನ್ನು ನೀರಜ್‌ ಅವರಿಗೆ ನೀಡಿದ್ದೇನೆ'' ಎಂದು 'ಎಕ್ಸ್​'ನಲ್ಲಿ ಬರೆದುಕೊಂಡಿದ್ದಾರೆ.

ಈ ಕುರಿತು 'ಈಟಿವಿ ಭಾರತ್'ಗೆ ಪ್ರತಿಕ್ರಿಯೆ ನೀಡಿದ ಡಿಜಿಪಿ ಅಶೋಕ್ ಕುಮಾರ್, ''ನೀರಜ್ ಚೋಪ್ರಾ ಮತ್ತು ನಮ್ಮ ನಡುವೆ ಕೌಟುಂಬಿಕ ಸಂಬಂಧಗಳಿವೆ. ನೀರಜ್ ಚೋಪ್ರಾ ಫಿಟ್ನೆಸ್​ ಬಗ್ಗೆ ತುಂಬಾ ಗಂಭೀರವಾಗಿರುತ್ತಾರೆ. ಅವರು ಇಂದಿನ ಯುವಜನತೆಗೆ ಸ್ಫೂರ್ತಿಯ ಚಿಲುಮೆಯೂ ಆಗಿದ್ದಾರೆ'' ಎಂದು ಹೇಳಿದರು.

ಅಲ್ಲದೇ, ''ನೀರಜ್ ಚೋಪ್ರಾ ಅವರಿಗೆ ಡೆಹ್ರಾಡೂನ್ ಎಂದರೆ ಬಲು ಇಷ್ಟ. ಇಲ್ಲಿನ ಪರ್ವತಗಳು ಮತ್ತು ವಾತಾವರಣವು ಇವರಿಗೆ ತುಂಬಾ ಇಷ್ಟವಾಗುತ್ತದೆ'' ಎಂದು ವಿವರಿಸಿದರು. ಅಶೋಕ್ ಕುಮಾರ್ ಅವರ ಮನೆಯಲ್ಲಿ ಸುಮಾರು 4 ಗಂಟೆಗಳ ಕಾಲ ತಂಗಿದ್ದ ನೀರಜ್ ಚೋಪ್ರಾ, ಮುಂಬರುವ ತರಬೇತಿಗೆ ಸಂಬಂಧಿಸಿದ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ ಎಂದೂ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ಗೋಲ್ಡನ್​ ಬಾಯ್​ ನೀರಜ್​ ಚೋಪ್ರಾ ಜೊತೆ ಉಪಹಾರ ಸೇವಿಸಿದ ರಾಹುಲ್​ ರವೀಂದ್ರನ್, ಆನಂದ್​ ದೇವರಕೊಂಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.