ETV Bharat / bharat

ಕೊಚ್ಚಿನ್​ ವಿಮಾನ ನಿಲ್ದಾಣದಲ್ಲಿ 1 ಕೋಟಿ ಮೌಲ್ಯದ ಚಿನ್ನ ಜಪ್ತಿ - 1 ಕೋಟಿ ಮೌಲ್ಯದ ಚಿನ್ನ ಜಪ್ತಿ

ಆಡಿಯೋ ಸ್ಪೀಕರ್​ನಲ್ಲಿ ಚಿನ್ನ ಅಡಗಿಸಿ, ಸಾಗಿಸುತ್ತಿದ್ದ ಆರೋಪದಲ್ಲಿ ಓರ್ವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

Gold worth Rs 1 crore seized at Cochin International  airport
ಕೊಚ್ಚಿನ ವಿಮಾನ ನಿಲ್ದಾಣದಲ್ಲಿ 1 ಕೋಟಿ ಮೌಲ್ಯದ ಚಿನ್ನ ಜಪ್ತಿ
author img

By

Published : Aug 22, 2021, 2:44 AM IST

Updated : Aug 22, 2021, 6:07 AM IST

ಕೊಚ್ಚಿನ್ (ಕೇರಳ): ಕೊಚ್ಚಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಏರ್ ಕಸ್ಟಮ್ಸ್ ಅಧಿಕಾರಿಗಳು ಶನಿವಾರ ಪ್ರಯಾಣಿಕನೋರ್ವನಿಂದ ಸುಮಾರು 1 ಕೋಟಿ ರೂಪಾಯಿ ಮೌಲ್ಯದ 2 ಕಿಲೋಗ್ರಾಂ ಅಕ್ರಮ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಯು ಆಡಿಯೋ ಸ್ಪೀಕರ್ ಒಳಗೆ ಸುಮಾರು 2 ಕೆಜಿ ತೂಕದ ಚಿನ್ನವನ್ನು ಒಂದೆಡೆಯಿಂದ ಮತ್ತೊಂಡೆಗೆ ಸಾಗಿಸಲು ಯತ್ನಿಸುತ್ತಿದ್ದ ಎಂದು ತಿಳಿದುಬಂದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮೂಲಗಳ ಪ್ರಕಾರ, ಆರೋಪಿ ಕೇರಳದ ಕಿನ್ನೌರ್ ಜಿಲ್ಲೆಯವನು. ರಿಯಾದ್​​ನಿಂದ (ಯುಎಇ ರಾಜಧಾನಿ) ಬರುತ್ತಿದ್ದ ಆತನನ್ನು ಬಂಧಿಲಾಗಿದೆ. ಇತ್ತೀಚಿನ ದಿನಗಳಲ್ಲಿ ಅತ್ಯಂತ ದೊಡ್ಡ ಕಾರ್ಯಾಚರಣೆಗಳಲ್ಲಿ ಇದೂ ಒಂದು ಎಂದು ಹೇಳಲಾಗ್ತಿದೆ.

ಇದನ್ನೂ ಓದಿ: ವಿದೇಶಿ ಪ್ರಜೆಯ ಹೊಟ್ಟೆಯಲ್ಲಿ 11 ಕೋಟಿ ರೂ. ಮೌಲ್ಯದ ಮಾದಕ ವಸ್ತು ಪತ್ತೆ

Last Updated : Aug 22, 2021, 6:07 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.