ಇಂದು ಬಂಗಾರದ ಬೆಲೆಯಲ್ಲಿ ಇಳಿಕೆ ಕಂಡುಬಂದಿದ್ದು, ಗ್ರಾಹಕರಿಗೆ ಸಂತಸ ತಂದಿದೆ. ದೇಶದಲ್ಲಿ 100 ಗ್ರಾಂ ಚಿನ್ನದ ದರದಲ್ಲಿ ರೂ. 1,600 ಕಡಿಮೆಯಾಗಿದೆ. ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ ಚಿನ್ನದ ಬೆಲೆಯಲ್ಲಿ ರೂ. 262ರಷ್ಟು ಇಳಿಕೆಯಾಗಿದೆ. ಪ್ರತಿ 10 ಗ್ರಾಂಗೆ ರೂ. 47,276 ಆಗಿದೆ ಎಂದು ತಿಳಿದುಬಂದಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಸ್ಥಿರವಾಗಿದೆ. ಪ್ರತಿ ಔನ್ಸ್‌ಗೆ ಸ್ಪಾಟ್ ಗೋಲ್ಡ್ 1,812.27 ಡಾಲರ್ನಷ್ಟಿತ್ತು. ಯುಎಸ್ ಚಿನ್ನದ ಫ್ಯೂಚರ್ಸ್ 1,816 ಡಾಲರ್ ಅಥವಾ ಶೇ. 0.2 ರಷ್ಟು ಏರಿಕೆಯಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಬೆಂಗಳೂರಿನಲ್ಲಿ ಬಂಗಾರದ ಬೆಲೆ: ನಗರದಲ್ಲಿ 10 ಗ್ರಾಂ (22 ಕ್ಯಾರೆಟ್) ಚಿನ್ನದ ಬೆಲೆ 44,450 ರೂ. ದಾಖಲಾಗಿದೆ. 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 48,490 ರೂ. ನಿಗದಿಯಾಗಿದೆ. ಇನ್ನು ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ದರವು ಪ್ರತಿ 10 ಗ್ರಾಂ 22 ಕ್ಯಾರೆಟ್‌ಗೆ 46,600 ರೂ. ಇದ್ದು, 24 ಕ್ಯಾರೆಟ್ ಬಂಗಾರದ ಬೆಲೆ 50,800 ಆಗಿದೆ.
ಬೆಳ್ಳಿ ಬೆಲೆ: ದೆಹಲಿ, ಕೋಲ್ಕತಾ, ಮುಂಬೈ, ಬೆಂಗಳೂರು ಸೇರಿದಂತೆ ಕೆಲ ಮಹಾನಗರಗಳಲ್ಲಿ ಕೆ.ಜಿ ಬೆಳ್ಳಿ ಬೆಲೆ ರೂ. 63,600 ಇದ್ದು, ಚೆನ್ನೈನಲ್ಲಿ ಮಾತ್ರ 68,400 ರೂ ಆಗಿದೆ.
ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ:
ನಗರ | 22 ಕ್ಯಾರೆಟ್ (10 ಗ್ರಾಂ) ರೂ. | 24 ಕ್ಯಾರೆಟ್ (10 ಗ್ರಾಂ) ರೂ. |
ಬೆಂಗಳೂರು | 44,450 | 48,490 |
ಚೆನ್ನೈ | 44,898 | 48,980 |
ನವದೆಹಲಿ | 46,600 | 50,800 |
ಹೈದರಾಬಾದ್ | 44,450 | 48,490 |
ಕೋಲ್ಕತಾ | 46,950 | 49,650 |
ಮುಂಬೈ | 46,500 | 47,500 |