ETV Bharat / bharat

10 ಗ್ರಾಂ ಚಿನ್ನದ ಬೆಲೆ 61,780 ರೂಪಾಯಿ!

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ 10 ಗ್ರಾಂ ಚಿನ್ನದ ಬೆಲೆ ಸಾರ್ವಕಾಲಿಕ 61,780 ರೂಪಾಯಿಗೆ ಏರಿಕೆಯಾಗಿದೆ.

Gold jumps Rs 480 to record high of Rs 61,780
ಚಿನ್ನದ ಬೆಲೆ ಸರ್ವಕಾಲಿಕ ದಾಖಲೆ
author img

By

Published : Apr 14, 2023, 7:58 PM IST

ನವದೆಹಲಿ: ಚಿನ್ನದ ಬೆಲೆ ಸಾರ್ವಕಾಲಿಕ ಮಟ್ಟಕ್ಕೆ ತಲುಪಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು ಪ್ರತಿ 10 ಗ್ರಾಂ ಬಂಗಾರ 61,780 ರೂಪಾಯಿಗೆ ತಲುಪಿದೆ. ಬೆಳ್ಳಿ ದರದಲ್ಲೂ ಭಾರಿ ಏರಿಕೆ ಕಂಡು ಬಂದಿದೆ.

"ಪ್ರಬಲ ಜಾಗತಿಕ ಪ್ರವೃತ್ತಿಯ ನಡುವೆ ಚಿನ್ನದ ಬೆಲೆ 480 ರೂ. ಹೆಚ್ಚಳವಾಗಿದೆ. ದೆಹಲಿಯಲ್ಲಿ ಪ್ರತಿ 10 ಗ್ರಾಂಗೆ 61,780 ರೂ.ಗಳ ಗರಿಷ್ಠ ಮಟ್ಟಕ್ಕೆ ಚಿನ್ನದ ಬೆಲೆ ಜಿಗಿದಿದೆ" ಎಂದು ಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಸರಕುಗಳ ಹಿರಿಯ ವಿಶ್ಲೇಷಕ ಸೌಮಿಲ್ ಗಾಂಧಿ ತಿಳಿಸಿದರು. ಗುರುವಾರ ಪ್ರತಿ 10 ಗ್ರಾಂನ ಬಂಗಾರ ಬೆಲೆ 61,300 ರೂಪಾಯಿ ಇತ್ತು.

ಇದನ್ನೂ ಓದಿ: ದಶಕದಲ್ಲಿ ನೇರ ನಿವ್ವಳ ತೆರಿಗೆ ಸಂಗ್ರಹ ಶೇ 160ರಷ್ಟು ಏರಿಕೆ: 16 ಲಕ್ಷ ಕೋಟಿ ಸಂಗ್ರಹ

ಬೆಳ್ಳಿ ಪ್ರತಿ ಕೆಜಿಗೆ 410 ರೂಪಾಯಿ ಏರಿಕೆ ಕಂಡಿದ್ದು, ಒಂದು ಕೆಜಿ ದರ 77,580 ರೂಪಾಯಿಗೆ ತಲುಪಿದೆ. ಸಾಗರೋತ್ತರ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಕ್ರಮವಾಗಿ ಪ್ರತಿ ಔನ್ಸ್‌ಗೆ 2,041 ಮತ್ತು 25.88 ಅಮೆರಿಕ ಡಾಲರ್​ನಂತೆ ವಹಿವಾಟು ನಡೆಸುತ್ತಿದೆ. ಶುಕ್ರವಾರ ಏಷ್ಯನ್ ವಹಿವಾಟಿನ ವೇಳೆ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ ಎಂದು ಅವರು ಹೇಳಿದ್ದಾರೆ. ಡಾಲರ್ ಸೂಚ್ಯಂಕ ಮತ್ತು ಉತ್ಪನ್ನದ ಕುಸಿತದಿಂದ ಮುನ್ನುಗ್ಗುವ ಭಾವನೆಯನ್ನು ಹೆಚ್ಚಿಸಿದ್ದರಿಂದ ಕಾಮೆಕ್ಸ್ ಸ್ಪಾಟ್ ಚಿನ್ನದ ಬೆಲೆಗಳು 13 ತಿಂಗಳ ಗರಿಷ್ಠ ಮಟ್ಟಕ್ಕೇರಿತು ಎಂದು ಸೌಮಿಲ್ ಗಾಂಧಿ ಹೇಳಿದ್ದಾರೆ.

ಇದನ್ನೂ ಓದಿ: ಮ್ಯೂಚುವಲ್ ಫಂಡ್​: 3 ವರ್ಷದಲ್ಲಿ ಮಹಿಳಾ ಹೂಡಿಕೆದಾರರ ಸಂಖ್ಯೆ 27 ಲಕ್ಷ ಹೆಚ್ಚಳ

ಬೆಳ್ಳಿ ದರ ಮತ್ತಷ್ಟು ಏರಿಕೆ ಸಾಧ್ಯತೆ: ಚಿನ್ನಕ್ಕಿಂತ ಬೆಳ್ಳಿ ದರದಲ್ಲಿ ಮತ್ತಷ್ಟು ಏರಿಕೆಯಾಗುವ ಲಕ್ಷಣಗಳಿವೆ. ಹೆಚ್ಚಿದ ಹೂಡಿಕೆ ಮತ್ತು ಊಹಾತ್ಮಕ ಬೇಡಿಕೆಯು ಬೆಳ್ಳಿಯ ಬೆಲೆ ಏರಿಕೆಗೆ ಕಾರಣವಾಗಿದೆ. ಇದು ಮುಂದುವರಿಯುವ ಸಾಧ್ಯತೆಯೂ ಇದೆ ಎಂದು ವಿಶ್ಲೇಷಕರು ಹೇಳುತ್ತಾರೆ.

ಕಳೆದ ಮೂರು ವಾರಗಳಲ್ಲಿ ಬೆಳ್ಳಿ ಚಿನ್ನವನ್ನು ಮೀರಿಸಿದೆ. ಎಂಸಿಎಕ್ಸ್​ ಇಂಡಿಯಾದಲ್ಲಿ ಮೇ ತಿಂಗಳಲ್ಲೂ ಪ್ರತಿ ಕೆಜಿ ಬೆಳ್ಳಿ ದರ 77 ಸಾವಿರ ರೂ.ಗೆ ಮೇಲ್ಪಟ್ಟು ವಹಿವಾಟು ನಡೆಸಲಿದೆ. ಬೆಳ್ಳಿಯು ಚಿನ್ನಕ್ಕಿಂತ ಉತ್ತಮ ಆದಾಯ ನೀಡುತ್ತಿದೆ. ಆದ್ದರಿಂದ ಹೂಡಿಕೆದಾರರು ತಮ್ಮ ಹಣವನ್ನು ಬೆಳ್ಳಿ ಲೋಹದ ಮೇಲೆ ಹಾಕುತ್ತಿದ್ದಾರೆ ಎನ್ನುತ್ತಾರೆ ಮಾರುಕಟ್ಟೆ ಪರಿಣತರು.

ಶೇ 70ರಷ್ಟು ಬೆಳ್ಳಿಯನ್ನು ಕೈಗಾರಿಕಾ ಉತ್ಪಾದನೆಯಲ್ಲಿ ಬಳಸಲಾಗಿದ್ದರೂ, ಇನ್ನೂ ಉತ್ತಮ ಆದಾಯವಿದೆ. ಚೆನ್ನೈನಲ್ಲಿ ಬೆಳ್ಳಿಯ ಬೆಲೆ ಗುರುವಾರ ಪ್ರತಿ ಗ್ರಾಂಗೆ 77 ರೂ. ಮತ್ತು ಶುಕ್ರವಾರ 79 ರೂ. ಇತ್ತು. ಚಿಲ್ಲರೆ ಬೆಲೆಯು ಪ್ರತಿ ಗ್ರಾಂಗೆ ಸುಮಾರು 83 ರೂ ಇದೆ ಎಂದು ಮದ್ರಾಸ್ ಜ್ಯುವೆಲರ್ಸ್ ಮತ್ತು ಡೈಮಂಡ್ ಮರ್ಚೆಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಮತ್ತು ಚಲ್ಲಾನಿ ಜ್ಯುವೆಲರಿ ಮಾರ್ಟ್‌ನ ಪಾಲುದಾರರಾದ ಜಯಂತಿಲಾಲ್ ಚಲ್ಲಾನಿ ಮಾಹಿತಿ ನೀಡಿದರು.

ಇದನ್ನೂ ಓದಿ: ಹಾವೇರಿ ಬ್ಯಾಡಗಿ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಗುಜರಾತ್​ ಮೂಲದ ಪುಷ್ಪಾ ಎಂಟ್ರಿ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.